Karnataka news paper

ದ್ವಿಪಕ್ಷೀಯ ಸಮಸ್ಯೆ: ಕಾಶ್ಮೀರ ಮತ್ತೊಂದು ‘ಪ್ಯಾಲೆಸ್ತೀನ್’ ವರದಿ ತಳ್ಳಿಹಾಕಿದ ರಷ್ಯಾ


The New Indian Express

ನವದೆಹಲಿ: ಕಾಶ್ಮೀರವನ್ನು ಮತ್ತೊಂದು ಪ್ಯಾಲೆಸ್ತೀನ್ ಎಂದು ಬಣ್ಣಿಸುವ ರಷ್ಯಾದ ಮಾಧ್ಯಮ ವರದಿಯನ್ನು ರಷ್ಯಾ ತಳ್ಳಿಹಾಕಿದೆ. ಇದು ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಚಾರ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಕಾಶ್ಮೀರದಲ್ಲಿನ ಹೊಸ ಸಾಕ್ಷ್ಯಚಿತ್ರವೊಂದರ ಟ್ರೈಲರ್ ಒಂದನ್ನು ಟ್ವೀಟ್ ಮಾಡಿದ್ದ ರೆಡ್ ಫಿಶ್ ಡಿಜಿಟಲ್ ಮೀಡಿಯಾ ಸಂಸ್ಥೆ ಕಾಶ್ಮೀರ ಮತ್ತೊಂದು ಪ್ಯಾಲೆಸ್ತೀನ್ ಎಂದು ಬಣ್ಣಿಸಿತ್ತು. ಇದರ ಬೆನ್ನಲ್ಲೇ,  ರಷ್ಯಾ ಈ ರೀತಿಯಲ್ಲಿ ಸಮರ್ಥಿಸಿಕೊಂಡಿದೆ. 

ರೆಡ್ ಫಿಶ್ ಮೀಡಿಯಾ ಟ್ವೀಟರ್ ನಲ್ಲಿ ರಷ್ಯಾದ ಸಂಯೋಜಿತ ಮಾಧ್ಯಮ ಎಂದು ವರ್ಗೀಕರಿಸಲಾಗುತ್ತದೆ. ಕಾಶ್ಮೀರದ ವಿಷಯದ ಬಗ್ಗೆ ರಷ್ಯಾದ ಅಧಿಕೃತ ನಿಲುವು ಮತ್ತು ದ್ವಿಪಕ್ಷೀಯ ವಿವಾದಗಳಲ್ಲಿ ಹಸ್ತಕ್ಷೇಪ ಮಾಡದಿರುವ ರಷ್ಯಾದ ತತ್ವಬದ್ಧ ನಿಲುವು ಬದಲಾಗದೆ ಉಳಿಯುತ್ತದೆ ಎಂದು ರಷ್ಯಾದ ರಾಯಭಾರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಶ್ಮೀರ ವಿವಾದಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಣ ಮಾತ್ರ ಪರಿಹಾರ ಕಂಡುಹಿಡಿಯಬೇಕಾಗಿದೆ. ಅದು 1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್ ಘೋಷಣೆ ಒಳಗೊಂಡಂತೆ ಸಾಧಿಸಲಾದ ಒಪ್ಪಂದಗಳನ್ನು ಆಧರಿಸಬೇಕಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 

ಟ್ವೀಟರ್ ನಲ್ಲಿ ರೆಡ್ ಫಿಶ್ ಮಾಧ್ಯಮ ಸಂಸ್ಥೆ ರಷ್ಯಾದು ಎಂಬ ಲೆಬಲ್ ಅಧಿಕೃತವಲ್ಲ, ಹಾದಿ ತಪ್ಪಿಸುವಂತಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ. 



Read more

[wpas_products keywords=”deal of the day”]