ಏನಿದು ಘಟನೆ?
2019ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ತಂದೆ ಇನ್ನೂ ನ್ಯಾಯಾಂಗ ಬಂಧನದಲ್ಲೇ ಇದ್ದು, ಸರಕಾರದಿಂದ ನೊಂದ ಯುವತಿಗೆ 5 ಲಕ್ಷ ರೂ. ಪರಿಹಾರ ಹಣ ಬಂದಿತ್ತು. ಬ್ಯಾಂಕ್ ವ್ಯವಹಾರದ ಬಗ್ಗೆ ತಿಳಿಯದ ಕಾರಣ ಯುವತಿ ಹಾಗೂ ಆಕೆಯ ತಾಯಿ ಗ್ರಾಮಸ್ಥ ಚಾಂದ್‌ಷರೀಫನ ಬಳಿ ತೆರಳಿ ಪರಿಹಾರದ ಚೆಕ್ ಬಗ್ಗೆ ಮಾಹಿತಿ ನೀಡಿದ್ದಾರೆ. ಆತ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕೆಂದು ತಿಳಿಸಿ, 2020ರ ಏ. 15ರಂದು ಆಸ್ಪತ್ರೆ ಕಾವಲ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ತೆರೆದು ಚೆಕ್ ಜಮೆ ಮಾಡಿದ್ದಾನೆ. ನಂತರ ಅವರಿಗೆ ತಿಳಿಯದಂತೆ 2021ರ ಏ.3ರಂದು 2.5 ಲಕ್ಷ ರೂ. ತನ್ನ ಖಾತೆಗೆ ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದಾನೆ. ಅಲ್ಲದೆ ಅವನ ಬಳಿಯಲ್ಲೇ ಇದ್ದ ಎಟಿಎಮ್ ಕಾರ್ಡ್ ಬಳಸಿ 2021 ಏ.16 ರಿಂದ ಏ.29ರವರೆಗೆ ಒಟ್ಟು 1.28 ಲಕ್ಷ ರೂ.ಡ್ರಾ ಮಾಡಿಕೊಂಡಿದ್ದಾನೆ.
ಜ.17ರಂದು ತಾಯಿಯೊಂದಿಗೆ ಬ್ಯಾಂಕಿಗೆ ಹೋಗಿ ಹಣ ತಮ್ಮ ಹಣ ಬಂದಿದೆಯೇ ಎಂದು ಯುವತಿ ವಿಚಾರಿಸಿದ ವೇಳೆ ನಿಮ್ಮ ಖಾತೆಗೆ 5 ಲಕ್ಷ ರೂ. ಹಣ ಬಂದಿತ್ತು. ನೀವು ಈಗಾಗಲೆ ಎಲ್ಲ ಹಣವನ್ನು ಡ್ರಾ ಮಾಡಿದ್ದೀರಿ ಎಂದು ಹೇಳುತ್ತಿದ್ದಂತೆ ಗಾಬರಿಯಾಗಿದ್ದಾರೆ. ನಂತರ ಬ್ಯಾಂಕ್ ಖಾತೆ ಮಾಡಿಸಿದ್ದ ಚಾಂದ್ ಪಾಷಾನನ್ನು ವಿಚಾರಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾನೆ. ಈಕೆಗೆ ಅನ್ಯಾಯವಾಗಿರುವ ಬಗ್ಗೆ ತಿಳಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಯುವತಿ ತನಗಾಗಿರುವ ಮೋಸದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]