Karnataka news paper

ಲಂಚ ಸ್ವೀಕಾರ ಒಪ್ಪಿದ ಚನ್ನಿ ಸೋದರಳಿಯ : ಚುನಾವಣೆ ವೇಳೆ ಪಂಜಾಬ್‌ ಸಿಎಂಗೆ ಹಿನ್ನಡೆ?


ಚಂಡೀಗಢ: ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸೋದರಳಿಯ ಭೂಪಿಂದರ್‌ ಸಿಂಗ್‌ ಅಲಿಯಾಸ್‌ ಹನಿ ಸಿಂಗ್‌ ಅವರು ಬಂಧನವು ತೀವ್ರ ರಾಜಕೀಯ ಮೇಲಾಟಕ್ಕೆ ಕಾರಣವಾದ ಬೆನ್ನಲ್ಲೇ, ”ಮರಳು ಗಣಿಗಾರಿಕೆಗೆ ಅನುಮತಿ ಕೊಡಿಸಲು 10 ಕೋಟಿ ರೂ. ಲಂಚ ಪಡೆದಿರುವುದಾಗಿ ಭೂಪಿಂದರ್‌ ಸಿಂಗ್‌ ತಪ್ಪೊಪ್ಪಿಕೊಂಡಿದ್ದಾರೆ,” ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.

ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಮರುದಿನವೇ ಇ.ಡಿ ಬಿಡುಗಡೆ ಮಾಡಿರುವ ಹೇಳಿಕೆಯು ಕಾಂಗ್ರೆಸ್‌ ಹಾಗೂ ಚನ್ನಿ ಅವರಿಗೆ ಇರಿಸುಮುರಿಸು ಉಂಟುಮಾಡಿದೆ. ಜಲಂಧರ್‌ನಲ್ಲಿ ಫೆ.3ರಂದು ಹನಿ ಸಿಂಗ್‌ ಅವರನ್ನು ಬಂಧಿಸಲಾಗಿದೆ.

”ಅಕ್ರಮವಾಗಿ ಮರಳು ಗಣಿಗಾರಿಕೆ, ಅಧಿಕಾರಿಗಳ ನಿಯೋಜನೆ ಹಾಗೂ ವರ್ಗಾವಣೆಗಾಗಿ 10 ಕೋಟಿ ರೂ. ತೆಗೆದುಕೊಂಡಿರುವುದಾಗಿ ವಿಚಾರಣೆ ವೇಳೆ ಭೂಪಿಂದರ್‌ ಸಿಂಗ್‌ ಅವರು ಒಪ್ಪಿದ್ದಾರೆ,” ಎಂದು ಇ.ಡಿ ತಿಳಿಸಿದೆ. ಮಂಗಳವಾರ ಅವರ ಕಸ್ಟಡಿ ಅವಧಿ ಅಂತ್ಯವಾಗಲಿದ್ದು, ಇ.ಡಿಯು ನ್ಯಾಯಾಧೀಶರ ಎದುರು ಹಾಜರುಪಡಿಸಲಿದೆ.

ಚುನಾವಣೆಗೆ 2 ವಾರ ಇರುವಾಗ ಪಂಜಾಬ್ ಕಾಂಗ್ರೆಸ್‌ಗೆ ಶಾಕ್: ಸಿಎಂ ಚನ್ನಿ ಸೋದರಳಿಯನ ಬಂಧನ

ಅಕ್ರಮವಾಗಿ ಮರಳು ಗಣಿಗಾರಿಕೆ ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಜನವರಿ 18ರಂದು ಭೂಪಿಂದರ್‌ ಸಿಂಗ್‌ ಅವರ ನಿವಾಸ, ಸಂಬಂಧಿಸಿದ ಕಚೇರಿ ಸೇರಿ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ 7.9 ಕೋಟಿ ರೂ. ವಶಪಡಿಸಿಕೊಂಡಿದ್ದರು. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್‌ಕುಮಾರ್‌ ಎಂಬುವರ ಬಳಿ 2 ಕೋಟಿ ರೂ. ಸಿಕ್ಕಿತ್ತು.

ಇ.ಡಿ ಅಧಿಕಾರಿಗಳು ಭೂಪಿಂದರ್‌ ಯಾದವ್‌ ಅವರನ್ನು ಬಂಧಿಸಿದಾಗ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಫೆ.20ರಂದು ಪಂಜಾಬ್‌ನಲ್ಲಿ ಚುನಾವಣೆ ನಡೆಯಲಿರುವ ಕಾರಣ ಬಿಜೆಪಿಯು ತನಿಖಾ ಸಂಸ್ಥೆಗಳ ಮೂಲಕ ಕುತಂತ್ರ ಮಾಡಲಾಗುತ್ತಿದೆ ಎಂದು ದೂರಲಾಗಿತ್ತು.



Read more

[wpas_products keywords=”deal of the day sale today offer all”]