Karnataka news paper

ಕೋವಿಡ್ 3ನೇ ಅಲೆ ಜನವರಿ 23ರಂದು ಉತ್ತುಂಗಕ್ಕೆ ಹೋಗಿತ್ತು; ದಿನಕಳೆದಂತೆ ಪಾಸಿಟಿವಿಟಿ ದರ ಇಳಿಕೆ: ವಾರ್ ರೂಂ ಮಾಹಿತಿ


The New Indian Express

ಬೆಂಗಳೂರು: ಜನವರಿ 23 ರಂದು ರಾಜ್ಯದಲ್ಲಿ ಉತ್ತುಂಗಕ್ಕೇರಿದ್ದ ಕೊರೋನಾ 3ನೇ ಅಲೆ, ದಿನಕಳೆದಂತೆ ಪಾಸಿಟಿವಿಟಿ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕೋವಿಡ್-19 ವಾರ್ ರೂಮ್ ತನ್ನ ವರದಿಯಲ್ಲಿ ತಿಳಿಸಿವೆ. 

ಈ ಮಾಹಿತಿಯನ್ನು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿಎನ್ ಮಂಜುನಾಥ್ ಅವರು ಒಪ್ಪಿಕೊಂಡಿದ್ದು, ದೆಹಲಿ, ಮಹಾರಾಷ್ಟ್ರದಲ್ಲಿ ಎದುರಾಗಿದ್ದ ಟ್ರೆಂಡ್ ಕರ್ನಾಟಕದಲ್ಲಿಯೂ ಸೃಷ್ಟಿಯಾಗಿತ್ತು. 2-3 ವಾರಗಳ ಬಳಿಕ ಸೋಂಕು ಇಳಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಭಾರತದಲ್ಲಿ ಕೊರೋನಾ ಭಾರೀ ಇಳಿಕೆ: ದೇಶದಲ್ಲಿಂದು ಒಂದು ಲಕ್ಷಕ್ಕಿಂತ ಕಡಿಮೆ ಕೇಸ್ ದಾಖಲು

ಯುರೋಪ್ ಮತ್ತು ಅಮೆರಿಕಾದಲ್ಲಿನ ಪ್ರವೃತ್ತಿಯನ್ನು ಗಮನಿಸಿದರೆ, ನಾವು ನಾಲ್ಕನೇ ಮತ್ತು ಐದನೇ ಅಲೆಯನ್ನು ನೋಡಲಿದ್ದೇವೆ. ಏಕೆಂದರೆ ವೈರಸ್ ರೂಪಾಂತರಗೊಳ್ಳುತ್ತಿದ್ದು, ಓಮಿಕ್ರಾನ್ ರೂಪಾಂತರವು ಡೆಲ್ಟಾಕ್ಕಿಂತ ಕಡಿಮೆ ಪ್ರಮಾಣ ಅಪಾಯಕಾರಿಯಾಗಿದೆ. ಆದರೆ ಇದು ಕೊನೆಯ ರೂಪಾಂತರವೆಂದು ಹೇಳಲು ಸಾಧ್ಯವಿಲ್ಲ. ಇಡೀ ಪ್ರಪಂಚದಲ್ಲಿ ಲಸಿಕೆ ಬರಬೇಕು. ನಂತರ ರೂಪಾಂತರಿ ವೈರಸ್ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಆಫ್ರಿಕಾದಲ್ಲಿ ಕೇವಲ ಶೇ.15ರಷ್ಟು ಜನರು ಮಾತ್ರ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ರೂಪಾಂತರಿ ವೈರಸ್ ದೂರಾಗಿಸಲು ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಬೇಕು. ಹೀಗಾಗಿ ಆಫ್ರಿಕಾದ ಜನರಿಗೆ ಲಸಿಕೆ ಒದಲಿಸಲು ಎಲ್ಲಾ ರಾಷ್ಟ್ರಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ. 

ಇದನ್ನೂ ಓದಿ: ಮೈಸೂರು: ಕೇವಲ ಒಂದು ವಾರದಲ್ಲಿ 35 ಮಂದಿ ಕೋವಿಡ್’ಗೆ ಬಲಿ, ಹೆಚ್ಚಿದ ಆತಂಕ!

ಜನವರಿ 24 ಅಥವಾ 29 ರಂದು ಕೋವಿಡ್ 3ನೇ ಅಲೆ ಉತ್ತುಂಗಕ್ಕೇರಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆಗಳು ಸತ್ಯವಾಯಿತು. ಪ್ರಮುಖವಾಗಿ ಬೆಂಗಳೂರು ಕುರಿತ ನಿರೀಕ್ಷೆಗಳು ಸತ್ಯವಾಗಿದೆ ಎಂದು ಡಾ.ನಾಗರಾಜ್ ಅವರು ಹೇಳಿದ್ದಾರೆ. 

ಸೋಂಕು ಪ್ರಕರಣಗಳು ಒಮ್ಮೆಲೆ ಉತ್ತುಂಗಕ್ಕೇರಿ ಇದೀಗ ದಿನ ಕಳೆದಂತೆ ಇಳಿಕೆಯಾಗುತ್ತಿದೆ. ಸೋಂಕು ಪ್ರಕರಣಗಳು ಇಳಿಕೆಯಾಗಿದೆ ಎಂದು ಜನರು ಮೈ ಮರೆಯಬಾರದು. ಕೋವಿಡ್ ನಡವಳಿಕೆಯನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡಬೇಕು. ಕೊರೋನಾ ಇನ್ನೂ ಅಂತ್ಯಗೊಂಡಿಲ್ಲ. ಆದರೆ, ಅಪಾಯಕಾರಿ ಪರಿಸ್ಥಿತಿ ಕಡಿಮೆ ಇದೆ. ಹೊಸ ರೂಪಾಂತರಿ ವೈರಸ್ ಬಂದರೂ ಅದು ಹೆಚ್1ಎನ್1 ರೀತಿಯಲ್ಲೇ ಇರುತ್ತದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾ ಭಾರೀ ಇಳಿಕೆ: ಇಂದು ಬೆಂಗಳೂರಿನಲ್ಲಿ 3,822 ಸೇರಿ 8,425 ಮಂದಿಗೆ ಪಾಸಿಟಿವ್; 47 ಸಾವು!

ವಾರ್ ರೂಮ್ ನೀಡಿರುವ ಮಾಹಿತಿಗಳ ಪ್ರಕಾರ, ಡಿಸೆಂಬರ್ 23 ರಿಂದ ಪಾಸಿಟಿವಿಟಿ ಪ್ರಮಾಣ ಸುದೀರ್ಘವಾಗಿ ಏರಿಕೆಯಾಗಿದ್ದು, 3ನೇ ಅಲೆ ವೇಳೆ ಪಾಸಿಟಿವಿ ಪ್ರಮಾಣ ಶೇ.0.28-0.30ಕ್ಕೆ ತಲುಪಿತ್ತು. ನಂತರ ಜನವರಿ 16 ರಂದು ಇಳಿಕೆಯಾಗಿ ಮತ್ತೆ ಜನವರಿ 23 ರಂದು ಉತ್ತುಂಗಕ್ಕೆ ಏರಿರುವುದು ಕಂಡು ಬಂದಿದೆ. ಇದೀಗ ಪಾಸಿಟಿವಿಟಿ ಪ್ರಮಾಣ ಒಂದಂಕಿಗೆ ತಲುಪಿದೆ. 

ಜನರ ಶ್ವಾಸಕೋಶದವರೆಗೂ ಓಮಿಕ್ರಾನ್ ತಲುಪದೇ ಇರುವುದು ನಮ್ಮ ಅದೃಷ್ಟವಾಗಿದೆ. 3ನೇ ಅಲೆ ವೇಳೆ ಹೋಂ ಐಸೋಲೇಷನ್ ನಲ್ಲಿದ್ದವರ ಸಂಖ್ಯೆ ಹೆಚ್ಚಾಗಿತ್ತು. ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದವರು ಸಮಸ್ಯೆ ಎದುರಿಸಿದ್ದರು. ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರು ಯಾವುದೇ ಲಕ್ಷಣಗಳನ್ನೂ ನಿರ್ಲಕ್ಷ್ಯಿಸಬಾರದು ಎಂದು ಡಾ.ಮಂಜುನಾಥ್ ಹೇಳಿದ್ದಾರೆ.



Read more

[wpas_products keywords=”deal of the day”]