Online Desk
ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ಬರುತ್ತಿರುವ ನೂತನ ಶಿಕ್ಷಣ ನೀತಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಆದ್ದರಿಂದ ಉದ್ಯಮಗಳು ಶಿಕ್ಷಣ ಸಂಸ್ಥೆ ಜೊತೆ ತಮ್ಮ ಅಗತ್ಯಗಳಿಗೆ ತಕ್ಕಂತೆ ರಚನಾತ್ಮಕ ಸಂಬಂಧ ಹೊಂದಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಆರಂಭಿಸಿರುವ ಉದ್ಯಮ ಪರಿಪೋಷಣ ಕೇಂದ್ರವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರವು ನವೋದ್ಯಮಗಳಿಗೆ ಜಾಗತಿಕಮಟ್ಟದಲ್ಲಿ ಹೆಸರುವಾಸಿಯಾಗಿದೆ. ಉದ್ದಿಮೆಗಳ ಬೆಳವಣಿಗೆಗೆ ಅಗತ್ಯವಿರುವ ಸಕಲ ಬಗೆಯ ನೆರವನ್ನು ನೀಡಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಈ ಸಂಬಂಧ ಈಗಾಗಲೇ ಹತ್ತಾರು ಉಪಯುಕ್ತ ನೀತಿಗಳನ್ನು ರೂಪಿಸಿದೆ ಎಂದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಉದ್ಯಮಗಳ ಜೊತೆಗಿನ ಬಾಂಧವ್ಯಕ್ಕೆ ಮಹತ್ವ ಕೊಡಲಾಗಿದೆ. ಸರ್ಕಾರ ಎಂಜಿನಿಯರಿಂಗ್ ಸೇರಿದಂತೆ ಸಮಗ್ರ ಶಿಕ್ಷಣ ವ್ಯವಸ್ಥೆಯ ಸುಧಾರಣೆಯನ್ನು ತ್ವರಿತಗತಿಯಲ್ಲಿ ಮಾಡುತ್ತಿದೆ. ಇದರ ದೊತೆಗೆ ಸಂಶೋಧನೆ ಮತ್ತು ನಾವೀನ್ಯತೆ ನೀತಿಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
Took part in the inauguration of @BCIC_Karnataka Incubation Centre along with H. E. Akiko Sugita, Consul General of Japan in Bengaluru. The incubation centre aims to build a vibrant startup ecosystem in Karnataka that will support budding entrepreneurs to scale.@CMofKarnataka pic.twitter.com/GtZ1NL6t9y
— Dr. Ashwathnarayan C. N. (@drashwathcn) February 7, 2022
ಬೆಂಗಳೂರು ನಗರ ಉದ್ಯೋಗ ಸಂಸ್ಕೃತಿಯಲ್ಲಿ ಪ್ಯಾರಿಸ್ ಸೇರಿದಂತೆ ವಿಶ್ವದ ಅತ್ಯುತ್ತಮ ನಗರಗಳನ್ನು ಕೂಡ ಮೀರಿಸಬೇಕು, ಕರ್ನಾಟಕ ಉಜ್ವಲ ಅವಕಾಶಗಳ ತಾಣವಾಗಿದೆ. ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
Read more
[wpas_products keywords=”deal of the day”]