The New Indian Express
ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಂತಹ ತುರ್ತು ಸಂದರ್ಭಗಳನ್ನು ಎದುರಿಸುವುದಕ್ಕಾಗಿ ಸ್ಥಾಪಿಸಲಾಗಿದ್ದ “ಪಿಎಂ ಕೇರ್ಸ್” ನಿಧಿ )PM CARES Fund) ಗೆ 2020-21ರಲ್ಲಿ ಬಂದ ದೇಣಿಗೆಯ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದ್ದು, ಬರೊಬ್ಬರಿ 10,990 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಿಂದ ಬಿಡುಗಡೆಯಾಗುವ ಮೊತ್ತವೂ ಏರಿಕೆಯಾಗಿದ್ದು ಇತ್ತೀಚಿನ ಲೆಕ್ಕ ಪರಿಶೋಧನೆಯ ಹೇಳಿಕೆಯ ಪ್ರಕಾರ 3,976 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
1,000 ಕೋಟಿ ರೂಪಾಯಿ ವಲಸಿಗರ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಲಾಗಿದ್ದರೆ, 1,392 ಕೋಟಿ ರೂಪಾಯಿಗಳನ್ನು ಕೋವಿಡ್-19 ಲಸಿಕೆ ಡೋಸ್ ಗಳ ಖರೀದಿಗೆ ಬಿಡುಗಡೆ ಮಾಡಲಾಗಿದೆ.
ಈ ನಿಧಿಗೆ 494.91 ಕೋಟಿ ರೂಪಾಯಿ ವಿದೇಶದಿಂದ ಸಹಾಯ ಬಂದಿದ್ದು, 2020-21 ರ ಅವಧಿಯಲ್ಲಿ 7,183 ಕೋಟಿ ರೂಪಾಯಿಗಳಷ್ಟು ಹಣ ಸ್ವಯಂ ಪ್ರೇರಿತ ಕೊಡುಗೆಗಳಾಗಿವೆ. 2020 ರ ಮಾರ್ಚ್ 27 ರಂದು ಸ್ಥಾಪನೆಯಾಗಿದ್ದ ಪಿಎಂ ಕೇರ್ಸ್ ಗೆ ಸ್ಥಾಪನೆಯಾದ 5 ದಿನಗಳಲ್ಲಿ ಒಟ್ಟು 3,076.62 ಕೋಟಿ ರೂಪಾಯಿ ಸಂಗ್ರಹವಾಗಿತ್ತು. 2.25 ಲಕ್ಷ ಪ್ರಾರಂಭಿಕ ಸಂಗ್ರಹ ನಿಧಿಯಾಗಿತ್ತು.
ಪಿಎಂ ಕೇರ್ಸ್ ಗೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುವವರಷ್ಟೇ ಹಣ ನೀಡುತ್ತಿದ್ದಾರೆ. ಇದಕ್ಕಾಗಿ ಯಾವುದೇ ಬಜೆಟ್ ಅನುದಾನವೂ ಇಲ್ಲ. ಪಿಎಂ ಕೇರ್ಸ್ ಹಣವನ್ನು ಸರ್ಕಾರ ಕೋವಿಡ್-19 ಸಂದರ್ಭದಲ್ಲಿ ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಉಪಕರಣಗಳ ಖರೀದಿಗೂ ಬಳಕೆ ಮಾಡಿಕೊಂಡಿತ್ತು.
ಪಿಎಂ ಕೇರ್ಸ್ ಗೆ ಬಂದಿರುವ ಹಣ ಹಾಗೂ ಖರ್ಚು ಮಾಡಿರುವ ಹಣದ ವಿವರಗಳು ಸರಿಹೊಂದುತ್ತಿಲ್ಲ, ಪಾರದರ್ಶಕತೆ ಇಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಲೆಕ್ಕ ಪರಿಶೋಧನೆ ವರದಿಯ ಪ್ರಕಾರ, ಸರ್ಕಾರಿ ಆಸ್ಪತ್ರೆಗಳಿಗೆ ಮೇಡ್ ಇನ್ ಇಂಡಿಯಾದ 50,000 ವೆಂಟಿಲೇಟರ್ ಗಳ ಖರೀದಿಗೆ 1,311 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೆ, ಮುಜಾಫರ್ಪುರ್ ಹಾಗೂ ಪಾಟ್ನಾಗಳಲ್ಲಿ 500 ಬೆಟ್ ಗಳ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಯನ್ನು ತೆರೆಯಲು 50 ಕೋಟಿ ರೂಪಾಯಿ ಖರ್ಚು ಮಾಡಿದೆ.
ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಆಕ್ಸಿಜನ್ ಘಟಕಗಳಿಗಾಗಿ ಸರ್ಕಾರ 201.58 ಕೋಟಿ ರೂಪಾಯಿಗಳನ್ನು ಪಿಎಂ ಕೇರ್ಸ್ ನಿಂದ ಖರ್ಚು ಮಾಡಲಾಗಿದ್ದರೆ, ಕೋವಿಡ್-19 ಲಸಿಕೆಗಳೆಡೆಗೆ ಕಾರ್ಯನಿರ್ವಹಿಸುತ್ತಿದ್ದ ಪ್ರಯೋಗಾಲಯಗಳ ಉನ್ನತೀಕರಣಕ್ಕೆ 20.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ವಲಸಿಗರ ಕಲ್ಯಾಣಕ್ಕಾಗಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಬಳಕೆ ಮಾಡಲಾಗಿದ್ದರೆ 1,000 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. 6.6 ಕೋಟಿ ಡೋಸ್ ಗಳಷ್ಟು ಕೋವಿಡ್-19 ಲಸಿಕೆಗಳ ಖರೀದಿಗೆ 1,392.82 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
Read more
[wpas_products keywords=”deal of the day”]