Karnataka news paper

ಜೆಡಿಎಸ್ ಜಾತ್ಯಾತೀತ ನಿಲುವು ಶಿಥಿಲ: ಎಚ್ ಡಿಕೆ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ವೈಎಸ್ ವಿ ದತ್ತಾ


Online Desk

ಬೆಂಗಳೂರು: ಜೆಡಿಎಸ್ ಜಾತ್ಯೀತತ ನಿಲುವಿನಲ್ಲಿ ಶಿಥಿಲವಾಗುತ್ತಿದೆ. ಬಿಜೆಪಿ ವಿರುದ್ಧ ಹೆಚ್ಚು ಹೋರಾಟ ಮಾಡುತ್ತಿಲ್ಲ ಎಂಬ ಬೇಸರ ಹೊರ ಹಾಕಿದ ಜೆಡಿಎಸ್ ಮುಖಂಡ ವೈ.ಎಸ್. ವಿ. ದತ್ತಾ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರಾದೇಶಿಕ ಪಕ್ಷದಲ್ಲಿ ದುಡಿಯುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳೆರಡನ್ನೂ ಸಮಾನ ದೂರದಲ್ಲಿ ಇಡಬೇಕು, ಈ ಮೂಲಕ ಜಾತ್ಯತೀತ ನಿಲುವಿಗೆ ಬದ್ಧರಾಗಿರಬೇಕು. ಬಿಜೆಪಿ ವಿರುದ್ಧ ಜೆಡಿಎಸ್ ಸ್ಪಷ್ಟವಾಗಿ ಹೋರಾಟ ಮಾಡುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ. ಇದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಕೇವಲ 5 ತಿಂಗಳ ಅವಧಿಗೆ 30 ಕೋಟಿ ರೂ. ಖರ್ಚು ಮಾಡಿದ್ದೆ: ಸುರೇಶ್ ಗೌಡ ಪಿತೂರಿಯಿಂದ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ತ್ಯಾಗ ಮಾಡಿದೆ!

ಜಾತ್ಯಾತೀತ ವಿಚಾರದಲ್ಲಿ ದೇವೇಗೌಡರ ಬಗ್ಗೆ ಯಾವುದೇ ಅನುಮಾನ ಇಲ್ಲ. ಅವರ ಪಕ್ಕಾ ಜಾತ್ಯಾತೀತವಾಗಿ ತೀರ್ಮಾನ ಕೈಗೊಂಡಿದ್ದಾರೆ. ನಮಗೆ ಈಗಲೂ ದೇವೇಗೌಡರ ಬಗ್ಗೆ ಅಶಾಭಾವನೆ ಇದೆ. 20 ವರ್ಷ ಹುಡುಗನಾಗಿದ್ದಾಲೇ ದೇವೇಗೌಡರ ಜೊತೆಗೆ ಸೇರಿಕೊಂಡವನು. ಅವರ ಜೊತೆ ನನಗೆ ಸಂಪರ್ಕ ಹೆಚ್ಚಾಗಿದೆ. ನನಗೀಗ 69 ವರ್ಷವಾಗಿದೆ. ಆದರೆ, ಎಚ್ ಡಿ ಕುಮಾರಸ್ವಾಮಿ ಬಗ್ಗೆ ಕೇಳಬೇಡಿ ಎಂದು ದತ್ತಾ ಜೆಡಿಎಸ್ ನಿಲುವಿನ ಬಗ್ಗೆ ಅಸಮಾಧಾನ ಹೊರ ಹಾಕಿದರು. 



Read more

[wpas_products keywords=”deal of the day”]