Online Desk
ನವದೆಹಲಿ: ಸಚಿವ ಹುದ್ದೆ, ನಿಗಮ ಮಂಡಳಿ, ಪ್ರಾಧಿಕಾರಗಳ ಹುದ್ದೆಗಳ ಆಕಾಂಕ್ಷಿಗಳ ಒತ್ತಡದಿಂದ ಪಾರಾಗಲು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರ ದೆಹಲಿ ಯಾತ್ರೆ ಫಲ ನೀಡಿಲ್ಲ. ನೀವು ಸಚಿವ ಸಂಪುಟ ವಿಸ್ತರಣೆಗಾಗಿ ಮುಂದಿನ ಸೂಚನೆ ತನಕ ಕಾಯಬೇಕು ಎಂದು ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಷಯ, ಒತ್ತಡಗಳನ್ನು ಪಂಚರಾಜ್ಯಗಳ ಚುನಾವಣೆ ಮುಕ್ತಾಯವಾಗುವ ಬದಿಗಿರಿಸೋಣ ಎಂಬ ಇರಾದೆ ಬಿಜೆಪಿ ಹೈಕಮಾಂಡ್ ಗೆ ಇದ್ದಂತಿದ್ದು, ಸಿಎಂ ಗೆ ಕಾಯಲು ಸೂಚನೆ ನೀಡಲು ಇರುವ ಕಾರಣ ಇದೇ ಆಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಈ ಚರ್ಚೆಯ ನಡುವೆಯೇ ಬೊಮ್ಮಾಯಿ ಅವರ ಆಡಳಿತ ವೈಖರಿಗೆ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜನಪರ ಆಡಳಿತ ಶೈಲಿಗೆ, ಎಲ್ಲರನ್ನೂ ಜೊತೆಗೆ ಮುನ್ನಡೆಸುವ, ಸಂಪುಟ ಸದಸ್ಯರ ವಿಶ್ವಾಸ ಹೊಂದಿರುವುದನ್ನು ಶ್ಲಾಘಿಸಿದ್ದಾರೆ ಎಂದು ತಿಳಿದುಬಂದಿದೆ.
ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ ಸರ್ಕಾರ ತೆಗೆದುಕೊಂಡ ಆಡಳಿತಾತ್ಮಕ ಕ್ರಮಗಳ ಬಗ್ಗೆ ಬೊಮ್ಮಾಯಿ ಅವರು ವಿವರಿಸಿದ್ದನ್ನು ಅಮಿತ್ ಶಾ ಗಮನವಿಟ್ಟು ಕೇಳಿ ಪ್ರಶಂಸೆ ಸೂಚಿಸಿದರು ಎನ್ನಲಾಗಿದೆ. ಇದು ಬೊಮ್ಮಾಯಿ ಅವರ ಆತ್ಮವಿಶ್ವಾಸ ಹೆಚ್ಚಳಕ್ಕೂ ಕಾರಣವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಾಯಿ ಅವರು ಸೋಮವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಕಳೆದ ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಯ ಕಿರುಹೊತ್ತಿಗೆಯನ್ನು ನೀಡಿ ಅದರ ಸಾರಾಂಶವನ್ನು ಅಮಿತ್ ಶಾ ಅವರಿಗೆ ವಿವರಣೆ ನೀಡಿದರು. ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಅಮಿತ್ ಶಾ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಮಾರ್ಚ್ 15ರ ವರೆಗೆ ಸಂಪುಟ ಬದಲಾವಣೆ, ನಿಗಮ ಮಂಡಳಿಗಳ ಅಧ್ಯಕ್ಷೆ ಬದಲಾವಣೆ ಬೇಡ ಎಂದಿರುವುದು ಸದ್ಯಕ್ಕಂತೂ ಮುಖ್ಯಮಂತ್ರಿ ಮೇಲಿನ ಒತ್ತಡ ಕಡಿಮೆ ಮಾಡಿದೆ.
Read more
[wpas_products keywords=”deal of the day”]