The New Indian Express
ಶಿವಮೊಗ್ಗ: ಗಾರೆ ಕೆಲಸ ಮಾಡುತ್ತಿದ್ದ ಕುಟುಂಬವೊಂದನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಆರೋಪದ ಮೇರೆಗೆ ಪಾದ್ರಿಯೊಬ್ಬರ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕಾಶಿಪುರದ ನಿವಾಸಿ ಪಾದ್ರಿ ಮಧು (34) ಗಾರೆ ಕೆಲಸ ಮಾಡುತ್ತಿದ್ದ ಕುಟುಂಬವೊಂದರ ಮೂವರು ಸದಸ್ಯರನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ 29 ವರ್ಷದ ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿ ವಿನೋಬ್ ನಗರ ಪೊಲೀಸರಿಗೆ ಸೋಮವಾರ ದೂರು ನೀಡಿದ್ದಾರೆ. ತಾನು ತನ್ನ ಪತ್ನಿ ಹಾಗೂ ಮೂರು ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದು, ಕಳೆದ ಮೂರು ತಿಂಗಳುಗಳಿಂದ ಮಗುವಿಗೆ ಹೊಟ್ಟೆ ನೋವು ಮತ್ತು ಉಸಿರಾಟದ ತೊಂದರೆಯಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೂ, ಗುಣವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಪಾದ್ರಿ ಮಧು ಅವರನ್ನು ಭೇಟಿಯಾಗುವಂತೆ ದೂರುದಾರನ ಸಂಬಂಧಿಕರೊಬ್ಬರು ಸಲಹೆ ನೀಡಿದ್ದಾರೆ. ಮಧು ಪ್ರತಿ ಭಾನುವಾರ ಪ್ರಾರ್ಥನೆಗಾಗಿ ತಮ್ಮ ಮನೆಗೆ ಬರುತ್ತಿದ್ದು, ಅಲ್ಲಿಗೆ ಬರುವಂತೆ ಆಕೆ ತಿಳಿಸಿದ್ದಾಳೆ. ಮಗುವಿನೊಂದಿಗೆ ದಂಪತಿ ಮನೆಗೆ ಹೋದಾಗ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಸಮಸ್ಯೆ ಬಗೆಹರಿಸುವುದಾಗಿ ಮಧು ಹೇಳಿದ್ದಾಗಿ ಆರೋಪಿಸಿದ್ದಾರೆ.
ಪ್ರತಿ ಭಾನುವಾರ ಬಂದು ಪ್ರಾರ್ಥನೆ ಮಾಡುವಂತೆ ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕೆಲವೊಂದು ಪುಸ್ತಕಗಳನ್ನು ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿರುವ ಹಿಂದೂ ದೇವರ ಭಾವಚಿತ್ರಗಳನ್ನು ತೆಗೆಯುವಂತೆ ಪಾದ್ರಿ ಮಧು ಹೇಳಿದ್ದರು ಎಂದು ದೂರಲಾಗಿದೆ.
ಪಾದ್ರಿ ವಿರುದ್ಧ ಕುಶಲ ಕರ್ಮಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಐಪಿಸಿ ಸೆಕ್ಷನ್ 417( ವಂಚನೆ) 295 ಎ( ಧಾರ್ಮಿಕ ನಂಬಿಕೆ ಅಪಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆಣಕುವ ಉದ್ದೇಶದ ದುರದ್ದೇಶ ಪೂರಿತ ಕೃತ್ಯ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Read more
[wpas_products keywords=”deal of the day”]