Karnataka news paper

ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ, ಮತ್ತೊಂದು ಎನ್ ಕೌಂಟರ್ ಪ್ರಗತಿಯಲ್ಲಿ


Source : PTI

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ವಾಹನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಕಾನ್ಸ್ ಟೇಬಲ್ ಒಬ್ಬರು ಸಾವನ್ನಪ್ಪಿದ್ದ ನಂತರ  ಮಂಗಳವಾರ ಮೃತರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ಪೊಂಚ್ ನ ಸುರಾನ್ ಕೋಟೆ ವಲಯದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಮತ್ತೋಂದು ಎನ್ ಕೌಂಟರ್ ಪ್ರಗತಿಯಲ್ಲಿದೆ. 

ಶ್ರೀನಗರ ಹೊರವಲಯ ಜೆವಾನ್ ಪೊಲೀಸ್ ಕ್ಯಾಂಪ್ ಹತ್ತಿರ ಸೋಮವಾರ ಪೊಲೀಸ್ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು.ಈ  ಘಟನೆ ನಡೆದ ಮಾರನೇ ದಿನವೇ ಇದು ನಡೆದಿದೆ.

ಇದನ್ನೂ ಓದಿ: ಶ್ರೀನಗರ: ಪೊಲೀಸ್ ಸಿಬ್ಬಂದಿ ಬಸ್ ಮೇಲೆ ಉಗ್ರರ ದಾಳಿ- ಇಬ್ಬರು ಸಾವು, 12 ಮಂದಿಗೆ ಗಾಯ

ಜಮ್ಮು-ಕಾಶ್ಮೀರದ ಸಶಸ್ತ್ರ ಪೊಲೀಸ್ ಪಡೆಯ 9ನೇ ಬೆಟಾಲಿಯನ್ ನ ಕಾನ್ಸ್ ಟೇಬಲ್ ರಮೀಜ್ ಅಹ್ಮದ್ ಗಾಯಗೊಂಡು ಸೇನೆಯ 92 ಬೇಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 





Read more