ಬೆಂಗಳೂರು: ಪರೀಕ್ಷಾರ್ಥ ತರಬೇತಿ (ಪ್ರೊಬೇಷನರಿ) ಅವಧಿಯಲ್ಲಿದ್ದ 62 ಮಂದಿ ಗ್ರೇಡ್–2 ತಹಶೀಲ್ದಾರ್‌ಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆಗೊಳಿಸಿ ಕಂದಾಯ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡಿರುವ ಅಧಿಕಾರಿಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಯುಕ್ತಿಗೊಂಡಿರುವವರ ವಿವರ ಹೀಗಿದೆ: ಅಶ್ವತ್ಥ್ ಮಲ್ಲೇನಹಳ್ಳಿ ಬಸವಲಿಂಗಪ್ಪ– ಬೆಂಗಳೂರು ಜಲಮಂಡಳಿ; ಅಮೃತ್ ಎಚ್.ಆರ್. ಆತ್ರೇಶ್– ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ; ದೀಪ್ತಿ ಎನ್.– ಮುಜರಾಯಿ ತಹಶೀಲ್ದಾರ್, ಬೆಂಗಳೂರು ನಗರ ಜಿಲ್ಲೆ; ಲೋಕೇಶ್ ಕೆ.ಎನ್.– ರೇರಾ, ಬೆಂಗಳೂರು; ರಶ್ನಿ ಯು.– ಜಿಲ್ಲಾ ತರಬೇತಿ ಸಂಸ್ಥೆ, ಬೆಂಗಳೂರು ನಗರ; ಪವನ್ ಕುಮಾರ್ ಎಸ್.– ಎಸ್ಟೇಟ್ ವಿಭಾಗ, ಬಿಬಿಎಂಪಿ; ಸುದರ್ಶನ್ ಯಾದವ್ ಕೆ.ಆರ್.– ಬಿಎಂಆರ್‌ಸಿಎಲ್; ಹರ್ಷವರ್ಧನ್ ಜಿ.ಪಿ.– ಕರ್ನಾಟಕ ರಾಜ್ಯ ಹಣಕಾಸು ನಿಗಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಬಿ.ಎಂ. ಸಂಜನಾ– ನಗರ ಆಸ್ತಿ ಹಕ್ಕುಗಳ ದಾಖಲೆ ವಿಭಾಗ, ಬೆಂಗಳೂರು; ರುಖಿಯಾ ನಾಜ್‌ನೀನ್– ಸಂಶೋಧನಾಧಿಕಾರಿ, ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ; ವಿಮಲ ಸುಪ್ರಿಯ ಡಿ.– ಕರ್ನಾಟಕ ಸರೋವರ ರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ; ಸ್ವಾಮಿ ಬಿ.ಎನ್.– ಬೆಂಗಳೂರು ಮಹಾನಗರ ಕಾರ್ಯಪಡೆ; ವಿಜಯಕುಮಾರ್ ಆರ್.– ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ; ಸುರೇಶಾಚಾರ್ ಟಿ.ಜಿ.– ಚುನಾವಣಾ ತಹಶೀಲ್ದಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ; ರೇಖಾ ಟಿ.– ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು; ಲೋಕೇಶ್ ಎಸ್.ವಿ.– ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ; ಭಾನುಪ್ರಿಯಾ ಎಚ್.– ಭಾರತೀಯ ಅನಿಲ ಪ್ರಾಧಿಕಾರ, ಬೆಂಗಳೂರು; ಮುನಿಶಾಮಿರೆಡ್ಡಿ– ಸಾಮಾಜಿಕ ಅಭಿವೃದ್ಧಿ ಅಧಿಕಾರಿ, ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ (ಕೆಶಿಪ್); ಬಸವರೆಡ್ಡಪ್ಪ ರೋಣದ– ಜಾರಿ ಕೋಶ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ; ವಿನೋದ ಲಕ್ಷ್ಮಣ ಹತ್ತಳ್ಳಿ– ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ.
ಅರುಣ ಎಚ್. ದೇಸಾಯಿ– ಉಪ ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಬೆಂಗಳೂರು ನಗರ; ಶಿವಕುಮಾರ್ ಕಾಸ್ನೂರ್– ಕರ್ನಾಟಕ ಪಾನೀಯ ನಿಗಮ; ಬಸವರಾಜ ತೆನ್ನಳ್ಳಿ– ಸಾಮಾಜಿಕ ಭದ್ರತಾ ಯೋಜನೆ ನಿರ್ದೇಶನಾಲಯ; ರಾಗವಿ ವಿನೋದ ನಾಯಕ್– ಆಡಳಿತಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ; ಅಶ್ವಿನಿ ಜಿ.– ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ; ಪ್ರಶಾಂತ್ ಕೆ. ಪಾಟೀಲ– ವಿಶೇಷಾಧಿಕಾರಿ, ಪರಿಹಾರ ಮತ್ತು ಪುನರ್ವಸತಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ; ಗೌರಮ್ಮ ಪಿ.– ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
Read more from source
[wpas_products keywords=”deal of the day sale today kitchen”]