Karnataka news paper

ಇ-ಸೈಕಲ್‌ ಉತ್ಪಾದನೆಯಲ್ಲಿ ಭಾರತಕ್ಕೆ ಹಿನ್ನಡೆ, ಯುರೋಪ್‌ ಮುನ್ನಡೆ


ಹೊಸದಿಲ್ಲಿ: ಕೇಂದ್ರ ಸರಕಾರ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಆದ್ಯತೆ ನೀಡಿದ್ದರೂ, ಬ್ಯಾಟರಿ ಚಾಲಿತ ಸೈಕಲ್‌ಗಳ ಇಂಡಸ್ಟ್ರಿ ಸೂಕ್ತ ಸಬ್ಸಿಡಿ ನೆರವಿನ ಕೊರತೆಯಿಂದ ಹಿಂದುಳಿದಿದೆ. ಇ-ಸೈಕಲ್‌ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರತವನ್ನು ಯುರೋಪ್‌, ಚೀನಾ ಮತ್ತು ಅಮೆರಿಕ ಹಿಂದಿಕ್ಕಿದೆ.

ಇ-ಸೈಕಲ್‌ ಉತ್ಪಾದನೆಗೆ ಸರಕಾರ ಇನ್ಸೆಂಟಿವ್‌ ಗಳನ್ನು ನೀಡದಿರುವುದು ಇದಕ್ಕೆ ಕಾರಣ ಎಂದು ಉತ್ಪಾದಕರು ತಿಳಿಸಿದ್ದಾರೆ. ಹೀರೊ ಸೈಕಲ್‌ ಕಂಪನಿ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಇ-ಸೈಕಲ್‌ ಮಾರಾಟ ಭರಾಟೆ ಇದ್ದರೂ, ದೇಶದಲ್ಲಿ ಸರಕಾರದ ಉತ್ತೇಜನದ ಕೊರತೆಯ ಪರಿಣಾಮ ಮಾರುಕಟ್ಟೆಯಲ್ಲಿ ನಿರುತ್ಸಾಹ ಇದೆ ಎಂದಿದೆ.

ಇ-ಸೈಕಲ್‌ ಉತ್ಪಾದನೆಗೆ ಸರಕಾರ ಉತ್ಪಾದನೆ ಆಧಾರಿತ ಇನ್ಸೆಂಟಿವ್‌ ಯೋಜನೆಯನ್ನು (ಪಿಎಲ್‌ಐ) ವಿಸ್ತರಿಸಬೇಕು ಎಂದು ಹೀರೊ ಮೋಟಾರ್ಸ್ ಕಂಪನಿಯ ಅಧ್ಯಕ್ಷ ಪಂಕಜ್‌ ಮುಂಜಾಲ್‌ ತಿಳಿಸಿದ್ದಾರೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಹರ್ಲೇ ಡೇವಿಡ್ಸನ್‌ ಬ್ರ್ಯಾಂಡ್‌ನ ‘ಇ- ಬೈಸಿಕಲ್’!

”ಯುರೋಪ್‌ನಲ್ಲಿ ಜನತೆ ಇ-ಸೈಕಲ್‌ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಭಾರತದಲ್ಲಿ ಅಂಥ ಬೇಡಿಕೆ ಇಲ್ಲ. ಏಕೆಂದರೆ ಭಾರತದಲ್ಲಿ ಇ-ಸೈಕಲ್‌ ಖರೀದಿಗೆ 30,000 ರೂ.ಗೂ ಹೆಚ್ಚು ಖರ್ಚು ಮಾಡಬೇಕು. ಜನ ಸಾಮಾನ್ಯರಿಗೆ ಇದು ದುಬಾರಿಯಾಗುತ್ತದೆ. ಅವರಿಗೆ 15,000 ರೂ. ಒಳಗಿದ್ದರೆ ಸೂಕ್ತ. ಆದ್ದರಿಂದ ಸರಕಾರ ಸಬ್ಸಿಡಿ ನೆರವು ನೀಡಿ ದರ ಇಳಿಸಬೇಕು” ಎಂದು ಹೀರೊ ಮೋಟಾರ್ಸ್ ಕಂಪನಿಯ ಅಧ್ಯಕ್ಷ ಪಂಕಜ್‌ ಮುಂಜಾಲ್‌ ತಿಳಿಸಿದ್ದಾರೆ.

ಸೈಕಲ್‌ ಮಾರಾಟ ವಲಯದ ಅಗ್ರಗಣ್ಯ ಕಂಪನಿಯಾದ ಹೀರೊ ಸೈಕಲ್ಸ್‌ ಬ್ಯಾಟರಿ ಚಾಲಿತ ಸೈಕಲ್‌ ಮಾರಾಟವನ್ನೂ ಆರಂಭಿಸಿದೆ.



Read more…

[wpas_products keywords=”deal of the day”]