Karnataka news paper

ಬಿಜೆಪಿ ಸರ್ಕಾರ ಮಕ್ಕಳಲ್ಲಿ ಕೋಮು ಭಾವನೆ ಮೂಡಿಸುವ ಕೆಲಸ ಮಾಡ್ತಿದೆ: ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಕಿಡಿ


ಬೀದರ್:ಹಿಜಾಬ್ ವಿಚಾರದಲ್ಲಿ ಬಿಜೆಪಿ ಸರ್ಕಾರ ಮಕ್ಕಳಲ್ಲಿ ಕೋಮು ಭಾವನೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ದ ಆಕ್ರೋಶ ಹೊರಹಾಕಿದರು.

Hijab row: ಹಿಜಾಬ್‌ V/S ಕೇಸರಿ ಶಾಲು ವಿವಾದಕ್ಕೆ ರಾಜಕೀಯ ಬಣ್ಣ: ಕಾಂಗ್ರೆಸ್, ಬಿಜೆಪಿ ಕೆಸರೆರೆಚಾಟ..!
ಇದು ನಿಜವಾಗಿಯೂ ಅಕ್ಷಮ್ಯ ಅಪರಾಧ ಎಂದು ಹರಿಹಾಯ್ದ ಈಶ್ವರ ಕಂಡ್ರೆ, ಬಿಜೆಪಿಯವರು ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಈ ವಿಷಯ ಇದೀಗ ನ್ಯಾಯಾಲಯದ ಅಂಗಳದಲ್ಲಿದ್ದು, ಮಂಗಳವಾರ ತಿರ್ಪು ಹೊರ ಬರಲಿದೆ. ಹೀಗಾಗಿ, ನ್ಯಾಯಾಲಯದ ತೀರ್ಪನ್ನು ಕಾದು ನೋಡೋಣ ಎಂದು ಖಂಡ್ರೆ ತಿಳಿಸಿದರು.

ರಾಷ್ಟ್ರ ಕವಿ ಕುವೆಂಪು ಅವರ ಪ್ರಕಾರ ಮಕ್ಕಳು ಅಂದ್ರೆ ವಿಶ್ವ ಮಾನವರು. ಆದ್ರೆ ಬಿಜೆಪಿಯವರು ಮಕ್ಕಳನ್ನು ಅಲ್ಪ ಮಾನವರನ್ನಾಗಿ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಬಿಜೆಪಿ ನಾಯಕರ ವಿರುದ್ದ ಈಶ್ವರ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ರು.

Hijab row:​ ಹಿಜಾಬ್ ವಿಚಾರದಲ್ಲಿ ಸರ್ಕಾರದಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಆಕ್ರೋಶ
ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಪೊಲೀಸ್ ಠಾಣೆಗಳು ಸೆಟ್ಲಮೆಂಟ್ (ಇತ್ಯರ್ಥ) ಕೇಂದ್ರಗಳಾಗಿ ಪರಿವರ್ತನೆಯಾಗಿವೆ ಎಂದು ಆರೋಪಿಸಿದ ಖಂಡ್ರೆ, ಕಲಬುರ್ಗಿ ಜಿಲ್ಲೆಯ ಸೇಡಂ ಶಾಸಕರ ವಿರುದ್ಧ ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆಯನ್ನು ಪ್ರಸ್ತಾಪಿಸಿದರು. ಬಿಜೆಪಿ ಶಾಸಕನ ವಿರುದ್ಧ ದೂರು ನೀಡಲು ಹೋದ ಮಹಿಳೆಗೆ, ಕಾಂಗ್ರೆಸ್ ಮಾಜಿ ಶಾಸಕನ ವಿರುದ್ಧ ದೂರು ನೀಡುವಂತೆ ಪೊಲೀಸರು ಒತ್ತಡ ಹಾಕಿದ್ದಾರೆ. ರಾಜ್ಯದ ಬಿಜೆಪಿ ಸರಕಾರದಲ್ಲಿ ಮಹಿಳೆಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ, ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು. ಈಶ್ವರ ಖಂಡ್ರೆ ಅವರು ಬಸವ ಕಲ್ಯಾಣದಲ್ಲಿ ಹೊಸ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ಮಾಡಿ 13 ತಿಂಗಳು ಕಳೆದಿದೆ. ಬಸವ ಕಲ್ಯಾಣ ಉಪ ಚುನಾವಣೆ ಪೂರ್ವದಲ್ಲಿ ತೋರಿಕೆಗೋಸ್ಕರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸದೇ ಶಂಕು ಸ್ಥಾಪನೆ ನೆರವೇರಿಸಿದರು. ಈವರೆಗೂ ಯೋಜನಾ ವರದಿ ಸಿದ್ಧಪಡಿಸಿಲ್ಲ. ಭೂಸ್ವಾಧೀನ ಆಗಿಲ್ಲ ಮತ್ತು ಅನುಭವ ಮಂಟಪ ನಿರ್ಮಾಣಕ್ಕೆ ಟೆಂಡರ್ ಕರೆದಿಲ್ಲ ಎಂದು ಖಂಡ್ರೆ ಆರೋಪಿಸಿದರು. ಆಧುನಿಕ ಅನುಭವ ಮಂಟಪ ಕೇವಲ ಕಾಗದದ ಮೇಲಿದೆ. ವಾಸ್ತವದಲ್ಲಿ ಇಲ್ಲ. 200 ಕೋಟಿ ಮಂಜೂರಾಗಿದೆ, ಆದರೆ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ ಎಂದು ಅವರು ಹೇಳಿದ್ದಾರೆ.

Hijab row: ಬೀದರ್‌ನಲ್ಲೂ ಹಿಜಾಬ್ ಸಂಸ್ಕೃತಿ ವಿರೋಧಿಸಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು..!



Read more

[wpas_products keywords=”deal of the day sale today offer all”]