Karnataka news paper

ಖಡಕ್ ಪೊಲೀಸ್ ಆಫೀಸರ್ ಲುಕ್‌ನಲ್ಲಿ ಮಿಂಚಲಿದ್ದಾರೆ ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕೋಟೂರು


‘ಬಿಗ್ ಬಾಸ್’ ಮೂಲಕ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡವರು ಬಹರಗಾರ್ತಿ ಚೈತ್ರಾ ಕೋಟೂರು. ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ, ಆಲ್ಬಂ ಸಾಂಗ್ ಮೂಲಕ ಸದ್ದು ಮಾಡಿದ್ದ ಚೈತ್ರಾ, ಒಂದಷ್ಟು ಸಿನಿಮಾಗಳನ್ನೂ ಕೂಡ ಒಪ್ಪಿಕೊಂಡಿದ್ದರು. ಸದ್ಯ ಅವರ ಹೊಸದೊಂದು ಸಿನಿಮಾಕ್ಕೆ ಈಗ ಮುಹೂರ್ತ ಆಗಿದೆ. ಚಿತ್ರಕ್ಕೆ ‘ಚಾರ್ಜ್‌ಶೀಟ್‌’ ಅಂತ ಟೈಟಲ್ ಕೂಡ ಇಡಲಾಗಿದೆ. ಸಾಮಾನ್ಯವಾಗಿ, ಈ ಪದಬಳಕೆ ಪೊಲೀಸ್ ಇಲಾಖೆಯಲ್ಲಿ ಆಗುತ್ತಿದೆ. ಅಂತೆಯೇ, ಇಲ್ಲಿ ಚೈತ್ರಾ ಕೂಡ ಪೊಲೀಸ್ ಅಧಿಕಾರಿ ಪಾತ್ರವನ್ನೇ ಮಾಡುತ್ತಿದ್ದಾರೆ.

ಮೊದಲ ಬಾರಿಗೆ ಖಾಕಿ ತೊಟ್ಟ ಚೈತ್ರಾ
ಚಾರ್ಜ್‌ಶೀಟ್‘ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಳ್ಳಲಿದ್ದಾರೆ. ಆ ಬಗ್ಗೆ ಹೇಳಿಕೊಳ್ಳುವ ಅವರು, ‘ಮೊದಲ ಬಾರಿಗೆ ನಾನಿಲ್ಲಿ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರ ಮಾಡುತ್ತಿದ್ದೇನೆ. ಒಂದು ತನಿಖಾ ವರದಿಯನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಎಳೆಎಳೆಯಾಗಿ ಈ ಚಿತ್ರದಲ್ಲಿ ಬಿಚ್ಚಿಡುತ್ತಿದ್ದೇವೆ. ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಗುರುರಾಜ್ ಕುಲಕರ್ಣಿ ಅವರು ಒಬ್ಬ ಸೆನ್ಸಿಬಲ್ ಡೈರೆಕ್ಟರ್’ ಎಂದು ಹೇಳಿದರು. ಚೈತ್ರಾ ಜೊತೆಗೆ ಬಾಲಾಜಿ ಶರ್ಮಾ, ಸಾಗರ್ ಕೂಡ ಪೊಲೀಸ್ ಅಧಿಕಾರಿಗಳಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಹೀರೋ ಬಾಲಾಜಿ ಶರ್ಮಾ ಮಾತನಾಡಿ, ‘ಮೂಲತಃ ನಾನೊಬ್ಬ ಫೋಟೋಗ್ರಾಫರ್, ಹಲವಾರು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದು, ಇದರಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದೇನೆ. ಈ ಹಿಂದೆ ‘ಸಾಮರ್ಥ್ಯ’ ಚಿತ್ರದಲ್ಲಿ ಸುನಿಲ್ ಅವರ ಜೊತೆ ಅಭಿನಯಿಸಿದ್ದೆ’ ಎಂದರು. ಮತ್ತೋರ್ವ ನಟ ಸಾಗರ್ ಮಾತನಾಡಿ, ‘ಈ ಚಿತ್ರದಲ್ಲಿ ನಾನೂ ಸಹ ಪೋಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದು, ಥ್ರಿಲ್ಲರ್ ಮಂಜು ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದರು.

ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇರುವ ಈ ಸಿನಿಮಾವನ್ನು ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದು, ಡಾ. ಸುನಿಲ್ ಕುಂಬಾರ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕರೇ ಕಥೆಯನ್ನು ಕೂಡ ಬರೆದಿದ್ದಾರೆ. ಜೊತೆಗೆ ಪಾತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ‘ಲಾಕ್‌ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆ ಇದು. ಲಾಕ್‌ಡೌನ್ ಸೈಡ್‌ಎಫೆಕ್ಟ್ ಅಂತಲೂ ಹೇಳಬಹುದು, ವಿಶೇಷ ನಿರೂಪಣೆಯಿರುವ ಚಿತ್ರ ಇದಾಗಿದ್ದು. ಪಶ್ಚಿಮ ಬಂಗಾಳದ ಉಮಾ ಚಕ್ರವರ್ತಿ ಹಾಗೂ ಚನ್ನೈನ ಎಸ್.ಆರ್. ರಾಜನ್ ಹಾಗೂ ನಾನು ಈ ಚಿತ್ರವನ್ನು ಮಾಡುತ್ತಿದ್ದೇವೆ. ಅವರಿಬ್ಬರಿಗೆ ಕನ್ನಡ ಭಾಷೆ ಬರದಿದ್ದರೂ ಅಭಿಮಾನದಿಂದ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಇಡೀ ಸಿನಿಮಾದಲ್ಲಿ ಕನ್ನಡದ ಕಲಾವಿದರೇ ಇರುತ್ತಾರೆ’ ಎಂದು ಮಾಹಿತಿ ನೀಡಿದರು ನಿರ್ಮಾಪಕ ಸುನಿಲ್.

ಡೆಪ್ಯೂಟಿ ಕಮಿಷನರ್ ಆಗ್ಬಿಟ್ಟ ‘ಬಿಗ್ ಬಾಸ್’ ಬೆಡಗಿ ಚೈತ್ರಾ ಕೋಟೂರು

ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಗುರುರಾಜ್ ಕುಲಕರ್ಣಿ, ‘ಈ ಚಿತ್ರದ ಕಥೆ, ಟೈಟಲ್ ನಿರ್ಮಾಪಕರದು. ನಾನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಶಾಲಾ ವಿದ್ಯಾರ್ಥಿನಿಯೊಬ್ಬಳ ಕೊಲೆಯಾಗಿರುತ್ತದೆ. ಆ ಕೊಲೆಯ ತನಿಖೆಯ ಸುತ್ತ ನಡೆಯುವ ಕಥೆಯೇ ಚಾರ್ಜ್‌ಶೀಟ್. ಬಹಳ ದಿನಗಳಿಂದ ನನಗೆ ನಾಗೇಂದ್ರ ಅರಸ್ ಅವರ ಜೊತೆ ಕೆಲಸ ಮಾಡಬೇಕೆಂದು ಆಸೆ ಇತ್ತು. ಈ ಚಿತ್ರದಲ್ಲಿ ಅವರು ಕ್ರೈಂ ಕಥೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಟಿ ಸಂಜನಾ ನಾಯ್ಡು ಅವರು ಸಿಬಿಐ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉತ್ತಮ ಕಲಾವಿದರಿದ್ದು, ಬಹುತೇಕರನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು. ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ರಂಗಸ್ವಾಮಿ ಅವರ ಛಾಯಾಗ್ರಹಣ, ಎಂ.ತಿರ್ಥೋ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಬಾಲ ರಾಜವಾಡಿ, ಮಹೇಶ್, ಶೈಲೇಶ್, ಸುನಂದಾ, ಗಿರೀಶ್ ಜತ್ತಿ, ಗುರುರಾಜ್ ಹೊಸಕೋಟೆ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಆಧ್ಯಾತ್ಮದ ಕಡೆ ಮುಖ ಮಾಡಿ ಹೊಸ ಹೆಸರನ್ನಿಟ್ಟುಕೊಂಡ ‘ಬಿಗ್ ಬಾಸ್’ ಸ್ಪರ್ಧಿ ಚೈತ್ರಾ ಕೋಟೂರು



Read more

[wpas_products keywords=”deal of the day party wear dress for women stylish indian”]