Karnataka news paper

Hijab row: ಬೀದರ್‌ನಲ್ಲೂ ಹಿಜಾಬ್ ಸಂಸ್ಕೃತಿ ವಿರೋಧಿಸಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು..!


ಬೀದರ್:ಹಿಜಾಬ್ V/S ಕೇಸರಿ ಶಾಲು ವಿವಾದ, ಗಡಿ ಜಿಲ್ಲೆ ಬೀದರ್ ಗೂ ತಟ್ಟಿದ್ದು, ಹಿಜಾಬ್ ಸಂಸ್ಕೃತಿ ವಿರೋಧಿಸಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‌ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದು ಪ್ರತಿಭಟಿಸಿದರು.

ಉಡುಪಿ ಹಾಗೂ ಮಂಗಳೂರಿಗಷ್ಟೇ ಸೀಮಿತವಾಗಿದ್ದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವೀಗ, ಗಡಿ ಜಿಲ್ಲೆ ಬೀದರ್‌ಗೂ ಕಾಲಿಟ್ಟಿದೆ. ಬೀದರ್ ನೌಬಾದ್ ನಲ್ಲಿರುವ ಸರಕಾರಿ ಪದವಿ ಕಾಲೇಜಿನ‌ 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದು ಪಾಠ ಕೇಳಿದರು.

Hijab row: ದಾವಣಗೆರೆಯಲ್ಲಿಯೂ ಬಿಸಿಯೇರುತ್ತಿದೆ ಹಿಜಾಬ್ ಪರ – ವಿರೋಧದ ಸಮರ..!
ನಂತರ ಕಾಲೇಜು ಆವರಣದಲ್ಲಿ ಕೇಸರಿ‌ ಶಾಲು‌ ಧರಿಸಿ ಓಡಾಡಿದ ವಿದ್ಯಾರ್ಥಿಗಳು, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ನಾವೂ ಕೇಸರಿ ಶಾಲು ಧರಿಸಿಕೊಂಡು ಬರುತ್ತೇವೆ ಎಂದರು.

ಇನ್ನು ಈ‌ ವಿಷಯ ಗೊತ್ತಾಗುತ್ತಿದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಕೇಸರಿ ಶಾಲು‌ ಧರಿಸಿ ಬಂದಿದ್ದ ವಿದ್ಯಾರ್ಥಿಗಳ ಜೊತೆಗೆ ಮಾತಾಡಿ, ಮನವೊಲಿಸಲು ಯತ್ನಿಸಿದರು. ಆದ್ರೆ, ಕೇಸರಿ‌ ಶಾಲು‌ ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಯಾವುದೇ ಸಮಸ್ಯೆ ಆಗಲಿಲ್ಲ.

ನಿಲ್ಲುತ್ತಿಲ್ಲ ವಿದ್ಯಾರ್ಥಿಗಳ ಹಿಜಾಬ್-ಕೇಸರಿ ವಿವಾದ; ಕುಂದಾಪುರದಲ್ಲಿ ಮತ್ತೆರಡು ಕಾಲೇಜಿಗೆ ವಿಸ್ತರಣೆ!
ಕೇಸರಿ‌ ಶಾಲು ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿಗಳು ಈ ಸಂಬಂಧ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದರು. ಕಾಲೇಜಿನಲ್ಲಿ ಎಲ್ಲರಿಗೂ ಸಮಾನತೆ ಇರಬೇಕು. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳೂ ಒಂದೇ ಸಮವಸ್ತ್ರ ಧರಿಸಬೇಕು. ಇಲ್ಲವಾದರೆ ನಾವು ಕೇಸರಿ‌ ಶಾಲು ಧರಿಸಿಕೊಂಡೇ ಕಾಲೇಜಿಗೆ ಬರುತ್ತೇವೆ ಎಂದರು.

ಎಲ್ಲಿಯವರೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಸಂಸ್ಕೃತಿ ಬಿಡುವುದಿಲ್ಲವೋ ಅಲ್ಲಿಯವರೆಗೆ ನಾವೂ ಕೇಸರಿ ಶಾಲು ಬಿಡಲ್ಲ. ಎಲ್ಲರಿಗೂ ಸಮಾನತೆ ಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲ. ಹೀಗಾಗಿ ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಬದುಕುತ್ತಿದ್ದೇವೆ. ಹೀಗಾಗಿ, ಹಿಜಾಬ್ ಸಂಸ್ಕೃತಿಗೆ ನಮ್ಮ ವಿರೋಧವಿದೆ ಎಂದು ಬೀದರ್ ನ ವಿದ್ಯಾರ್ಥಿಗಳು ಸ್ಪಷ್ಟನೆ ನೀಡಿದ್ದಾರೆ.

‘ಚಾಮರಾಜಪೇಟೆಯಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಂದ ಹಿಜಾಬ್ ವಿವಾದ ಸೃಷ್ಟಿ’!



Read more

[wpas_products keywords=”deal of the day sale today offer all”]