Karnataka news paper

ಬಿಹಾರದಲ್ಲೊಬ್ಬ ಡಿಜಿಟಲ್‌ ಭಿಕ್ಷುಕ! ಚಿಲ್ಲರೆ ಇಲ್ಲ ಅಂದ್ರೂ ಬಿಡಲ್ಲ, ಆನ್‌ಲೈನ್‌ ಭಿಕ್ಷೆ ಕೊಡ್ಲೇಬೇಕು!


ಹೊಸದಿಲ್ಲಿ: ಡಿಜಿಟಲ್‌ ಇಂಡಿಯಾ ಹಾಗೂ ಡಿಜಿಟಲ್‌ ಕರೆನ್ಸಿ ವಿಚಾರಗಳು ಭಾರೀ ಸದ್ದು ಮಾಡುತ್ತಿರುವ ದಿನಗಳಲ್ಲಿ ಇಲ್ಲೊಬ್ಬ ಭಿಕ್ಷುಕ ತನ್ನ ಭಿಕ್ಷಾಟನೆಯ ವೃತ್ತಿಯನ್ನೇ ಡಿಜಿಟಲೀಕರಣ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ರಾಜು ಪ್ರಸಾದ್‌ ಎಂಬ ಹೆಸರಿನ ಈತ ತನ್ನನ್ನು ಲಾಲು ಪ್ರಸಾದ್ ಅವರ ಮಗ ಎಂದು ಹೇಳಿಕೊಳ್ಳುವ ಜತೆಗೆ ಪ್ರಧಾನಿ ಮೋದಿಯ ಭಕ್ತ ಎಂದು ಬಣ್ಣಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ದೇಶದ ಮೊದಲ ಡಿಜಿಟಲ್ ಭಿಕ್ಷುಕ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.

ಬಿಹಾರದ ರೈಲು ನಿಲ್ದಾಣದಲ್ಲಿ ಈತ ಡಿಜಿಟಲ್ ಭಿಕ್ಷುಕ ಎಂದೇ ಫೇಮಸ್. ಬಾಲ್ಯದಿಂದಲೂ ಇಲ್ಲೇ ಭಿಕ್ಷೆ ಬೇಡುತ್ತಾ ಬೆಳೆದ ರಾಜು ಈಗ ಭಿಕ್ಷಾಟನೆ ವ್ಯವಹಾರವನ್ನೂ ಡಿಜಿಟಲೀಕರಣಗೊಳಿಸಿದ್ದಾರೆ. ಇತ್ತೀಚೆಗಂತೂ ರಾಜು ಅವರನ್ನು ಜನರು ಡಿಜಿಟಲ್ ಭಿಕ್ಷುಕ ಎಂದೇ ಗುರುತಿಸುತ್ತಾರೆ. ಅವರು ತಮ್ಮ ಕುತ್ತಿಗೆಗೆ ಗೂಗಲ್-ಪೇ ಮತ್ತು ಫೋನ್-ಪೇ ಇ-ಸ್ಕ್ಯಾನಿಂಗ್ ಹೊಂದಿರುವ ಫಲಕವನ್ನು ನೇತುಹಾಕಿಕೊಂಡು ಭಿಕ್ಷೆ ಬೇಡುತ್ತಾರೆ. ಕೈಯಲ್ಲಿ ಟ್ಯಾಬ್ ಇಟ್ಟುಕೊಂಡಿರುತ್ತಾರೆ. ಹೀಗೆ ಡಿಜಿಟಲ್‌ ಭಿಕ್ಷಾಟನೆಗೆ ಪೂರ್ಣ ಸಿದ್ಧವಾಗಿದ್ದಾರೆ.

ತೃತೀಯ ಲಿಂಗಿಗಳಿಂದ ಭಿಕ್ಷಾಟನೆ ಇನ್ನುಮುಂದೆ ಅಪರಾಧವಲ್ಲ

ಈ ಡಿಜಿಟಲ್ ಭಿಕ್ಷುಕನ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಯಾಗಿವೆ. ಭಿಕ್ಷುಕನು ತನ್ನ ಕುತ್ತಿಗೆಗೆ QR ಕೋಡ್‌ನ ಫಲಕ ನೇತುಹಾಕಿಕೊಂಡು ಜನರನ್ನು ಭಿಕ್ಷೆ ಬೇಡುತ್ತಿರುವುದೇ ಇದಕ್ಕೆ ಕಾರಣ. ಬಿಹಾರದ ಬೆಟ್ಟಿಯಾ ರೈಲು ನಿಲ್ದಾಣದಲ್ಲಿ ಇವರು ಫೋನ್‌ಪೇ ಕ್ಯೂಆರ್ ಕೋಡ್ ಇರುವ ಫಲಕವನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಭಿಕ್ಷೆ ಬೇಡುತ್ತಾರೆ. ಚಿಲ್ಲರೆ ಇಲ್ಲ ಎಂದು ಭಿಕ್ಷೆ ಹಾಕಲು ನಿರಾಕರಿಸುವ ಜನರಿಗೆ ಕ್ಯುಆರ್‌ ಕೋಡ್‌ ಫಲಕವನ್ನು ಮುಂದೆ ಚಾಚುತ್ತಾರೆ. ಇವರ ಭಿಕ್ಷಾಟನೆಯ ಜಾಣ್ಮೆಗೆ ಮೆಚ್ಚಿ ಉದಾರವಾಗಿ ಭಿಕ್ಷೆ ನೀಡಿ ಹೋಗುತ್ತಾರೆ.

ರಾಜು ಅವರನ್ನು ಹಿಂದುಳಿದವರು ಎನ್ನುತ್ತಾರೆ. ಆದರೆ, ರಾಜುವಿನ ಆಲೋಚನೆಗಳು ಬಹಳ ಚುರುಕಾಗಿವೆ. ಭಿಕ್ಷಾಟನೆಯಂತಹ ಕೆಲಸಕ್ಕೆ ಇವರ ಜಾಣತನವನ್ನು ಮೆಚ್ಚಲೇಬೇಕು. ಅಲ್ಲದೆ, ಇವರ ಭಿಕ್ಷಾಟನೆಯ ಶೈಲಿಗೆ ಜನ ಬೆಚ್ಚಿ ಬಿದ್ದಿದ್ದಾರೆ. ಈತ ಬಾಲ್ಯದಿಂದಲೂ ಇಲ್ಲಿ ಭಿಕ್ಷೆ ಬೇಡುತ್ತಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ಅವನು ವಿಭಿನ್ನ ರೀತಿಯಲ್ಲಿ ಜನರನ್ನು ಬೇಡಿಕೊಳ್ಳುತ್ತಾನೆ. ಹೀಗಾಗಿ ಜನರು ಈತನಿಗೆ ಧಾರಾಳವಾಗಿ ಭಿಕ್ಷೆ ನೀಡುತ್ತಾರೆ.

ಖಾತೆ ತೆರೆಯಲು ಬಹಳ ಕಷ್ಟವಾಯಿತು
ಕಳೆದ ಕೆಲವು ದಿನಗಳಿಂದ ಹಣವಿಲ್ಲ ಎಂದು ಜನರು ಭಿಕ್ಷೆ ಬೇಡಲು ನಿರಾಕರಿಸುತ್ತಿದ್ದರು. ಇದರಿಂದ ಹೊಸ ಉಪಾಯ ಹುಡುಕಿದ ರಾಜು ಬ್ಯಾಂಕ್‌ಗೆ ತೆರಳಿ ಖಾತೆ ತೆರೆದಿದ್ದಾರೆ. ಬ್ಯಾಂಕ್ ಖಾತೆ ತೆರೆಯಲು ಹಲವು ತೊಂದರೆಗಳನ್ನು ಎದುರಿಸಬೇಕಾಯಿತು. ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ದಾಖಲೆಗಳ ಅಗತ್ಯವಿದೆ. ಅವರ ಬಳಿ ಆಧಾರ್ ಕಾರ್ಡ್ ಮಾತ್ರವೇ ಇತ್ತು. ನಂತರ ಪ್ಯಾನ್ ಕಾರ್ಡನ್ನೂ ಪಡೆದು ಎಸ್‌ಬಿಐ ಶಾಖೆಯಲ್ಲಿ ಖಾತೆ ತೆರೆದರು. ಬಳಿಕ ಇ-ವ್ಯಾಲೆಟ್ ರಚಿಸಿ ಕ್ಯೂಆರ್ ಕೋಡ್ ಇರುವ ಫಲಕವನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಭಿಕ್ಷೆ ಬೇಡಲು ಆರಂಭಿಸಿದ್ದರು.

ರಾಜು ಅವರ ಈ ಹೊಸ ಉಪಾಯದಿಂದ ಅವರ ಆದಾಯ ಹೆಚ್ಚಿದೆ. ಈಗ ಚಿಲ್ಲರೆ ಹಣವಿಲ್ಲ ಎನ್ನುವ ಜನರಿಗೆ ತಮ್ಮ ಕ್ಯೂಆರ್ ಕೋಡ್ ಫಲಕವನ್ನು ಮುಂದಿಡುತ್ತಾರೆ. ಈ ವಿಶಿಷ್ಟ ಭಿಕ್ಷಾಟನೆಯ ವಿಧಾನವನ್ನು ನೋಡಿದ ಜನರು ಇದನ್ನು ಸ್ಕ್ಯಾನ್ ಮಾಡಿ ಹಣ ನೀಡುತ್ತಾರೆ. 2ರಿಂದ 100 ರೂ.ವರೆಗೆ ಜನರು ಆತನಿಗೆ ಭಿಕ್ಷೆ ನೀಡುತ್ತಾರೆ.

ಭಿಕ್ಷುಕನಿಗೆ 30 ಸಾವಿರ ಮಾಸಿಕ ವರಮಾನ, ಮೂವರು ಹೆಂಡಿರು

ರಾಜುಗೆ ಲಾಲು, ಮೋದಿ ಹುಚ್ಚು
ರಾಜು ಅವರು ಲಾಲೂ ಪ್ರಸಾದ್ ಯಾದವ್‌ ಅವರ ಅಭಿಮಾನಿಯಾಗಿದ್ದು. ಅವರು ಲಾಲು ಪ್ರಸಾದ್ ಅವರನ್ನು ತಮ್ಮ ತಂದೆ ಎಂದೇ ಪರಿಗಣಿಸುತ್ತಾರೆ. ಜಿಲ್ಲೆಯಲ್ಲಿ ಎಲ್ಲಿಯೇ ಲಾಲು ಪ್ರಸಾದ್ ಅವರ ಕಾರ್ಯಕ್ರಮ ನಡೆದರೂ ತಪ್ಪದೇ ಹಾಜರಾಗುತ್ತಿದ್ದರು. ಲಾಲು ಪ್ರಸಾದ್ ಅವರಿಗೂ ನನ್ನನ್ನು ಕಂಡರೆ ತುಂಬಾ ಇಷ್ಟ ಎನ್ನುತ್ತಾರೆ ರಾಜು. 2005 ರಲ್ಲಿ, ಲಾಲು ಪ್ರಸಾದ್ ಯಾದವ್ ಅವರ ಆದೇಶದ ಮೇರೆಗೆ, ಅವರು ಸಪ್ತಕ್ರಾಂತಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಪ್ಯಾಂಟ್ರಿ ಕಾರಿನಿಂದ ಪ್ರತಿದಿನ ಆಹಾರ ಪಡೆಯುತ್ತಿದ್ದರು. 2015ರ ವರೆಗೆ ಪ್ರತಿದಿನ ಈ ರೈಲಿನಿಂದ ಆಹಾರ ಪಡೆಯುತ್ತಿದ್ದರು. ಇದರೊಂದಿಗೆ, ರಾಜು ತಮ್ಮನ್ನು ಪ್ರಧಾನಿ ಮೋದಿಯ ಭಕ್ತ ಎಂದೂ ಬಣ್ಣಿಸಿಕೊಳ್ಳುತ್ತಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ಹುಚ್ಚು ಕೂಡ. ಹೀಗಾಗಿಯೇ ತಮ್ಮ ಭಿಕ್ಷಾಟನೆಯ ವೃತ್ತಿಯನ್ನೇ ಡಿಜಿಟಲೀಕರಣ ಗೊಳಿಸಿದ್ದಾರೆ.



Read more

[wpas_products keywords=”deal of the day sale today offer all”]