Karnataka news paper

ಕಾಂಗ್ರೆಸ್‌ ನಾಯಕರ ಜತೆ ಬಿಜೆಪಿ ನಾಯಕರ ಒಳ ಒಪ್ಪಂದದಿಂದ ಬಿಜೆಪಿ ಅಭ್ಯರ್ಥಿಗೆ ಸೋಲು: ಲಖನ್‌ ಜಾರಕಿಹೊಳಿ


ಗೋಕಾಕ: ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್‌ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ಗೆ ಗೆಲುವಾಗಿದೆ. ಕಾಂಗ್ರೆಸ್‌ನ ಸ್ವಯಂ ಘೋಷಿತ ನಾಯಕರು, ಬಿಜೆಪಿ ನಾಯಕರು ಖಾಸಗಿ ಹೋಟೆಲ್‌ನಲ್ಲಿ ಮೀಟಿಂಗ್‌ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು ಎಂದು ವಿಧಾನ ಪರಿಷತ್‌ ನೂತನ ಸದಸ್ಯ ಲಖನ್‌ ಜಾರಕಿಹೊಳಿ ಹೇಳಿದರು.

ಗೋಕಾಕದಲ್ಲಿ ಮಾತನಾಡಿದ ಅವರು, ”ಬಿಜೆಪಿಯ 3,500 ಮತಗಳು ಕಾಂಗ್ರೆಸ್‌ಗೆ ದೊರೆತಿವೆ. ಕಾಂಗ್ರೆಸ್‌ನ 2,400 ಮತಗಳನ್ನು ಬಿಜೆಪಿಯವರು ಪಡೆದುಕೊಂಡಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ ಜತೆ ಕೈಜೋಡಿಸಿ ಅವರ ಮತ ಅವರೇ ಒಡೆದುಕೊಂಡಿದ್ದಾರೆ. ಇನ್ನೊಬ್ಬರ ಮೇಲೆ ಬಿಜೆಪಿ ನಾಯಕರು ಅಪವಾದ ಮಾಡುವುದು ತಪ್ಪು” ಎಂದರು.

ಸಿದ್ದರಾಮಯ್ಯ ವೇಸ್ಟ್ ಬಾಡಿ. ಅವನದ್ದು ಕತೆ ಮುಗಿದೆ. ಮುಂದಿನ ಸಾರಿ ಆ ಮನುಷ್ಯ ಸೋಲುತ್ತಾನೆ: ರಮೇಶ್‌ ಜಾರಕಿಹೊಳಿ

”ಬಿಜೆಪಿ ಸೇರ್ಪಡೆ ಬಗ್ಗೆ ನಮ್ಮ ನಾಯಕರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಬಾಲಚಂದ್ರ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಲೋಕಸಭಾ ಉಪ ಚುನಾವಣೆಯಲ್ಲಿ ರಮೇಶ್‌ ಜಾರಕಿಹೊಳಿ ಕೆಲಸ ಮಾಡಿದ್ದಕ್ಕೆ ಬಿಜೆಪಿ ಗೆದ್ದಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ. ಆಗ ಈ ವಿಚಾರ ಏಕೆ ಬರಲಿಲ್ಲ. ಜಿಲ್ಲೆಯಲ್ಲಿ ಬಿಜೆಪಿಯ 13 ಶಾಸಕರು, ಮೂವರು ಸಂಸದರಿದ್ದಾರೆ. ಸೋತರೆ ರಮೇಶ್‌ ಜಾರಕಿಹೊಳಿ ಕಾರಣ, ಗೆದ್ದರೆ ತಾವು ಕಾರಣ ಅಂದರೆ ಯಾವ ನ್ಯಾಯ” ಎಂದು ಲಖನ್‌ ಜಾರಕಿಹೊಳಿ ಪ್ರಶ್ನಿಸಿದರು.

”ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದು ರಮೇಶ ಜಾರಕಿಹೊಳಿ, ಈಗ ನನ್ನ ಗೆಲ್ಲಿಸಿದ್ದು ರಮೇಶ್‌ ಜಾರಕಿಹೊಳಿ ಅಂತ ಹೇಳುತ್ತಿದ್ದಾರೆ. ಅಂದರೆ ರಮೇಶ್‌ ಜಾರಕಿಹೊಳಿ ಸ್ಟ್ರಾಂಗ್‌ ಇದ್ದ ಹಾಗಾಯ್ತು. ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಬೇಕೆಂದರೆ ರಮೇಶ್‌ ಜಾರಕಿಹೊಳಿ ಶಕ್ತಿಯನ್ನು ಬಿಜೆಪಿ ಬಳಸಿಕೊಳ್ಳಬೇಕು” ಎಂದು ಬಿಜೆಪಿ ನಾಯಕರಿಗೆ ಲಖನ್‌ ಜಾರಕಿಹೊಳಿ ಕಿವಿಮಾತು ಹೇಳಿದರು.

ರಮೇಶ್ ಜಾರಕಿಹೊಳಿಯಂಥ ಸಾಕಷ್ಟು ಮಂದಿಯನ್ನು ನೋಡಿದ್ದೇನೆ: ಸಿದ್ದರಾಮಯ್ಯ

ಡಿಕೆಶಿ ಹೇಳಿಕೆ ಬಗ್ಗೆ ಕಠೋರ ಉತ್ತರ

‘‘ನಾನು ಕಾಂಗ್ರೆಸ್‌ ಸೋಲಿಸುತ್ತೇನೆ ಅಂತ ಹಠಕ್ಕೆ ಬಿದ್ದಿದ್ದು ನಿಜ. ವಿಧಾನ ಪರಿಷತ್‌ ಚುನಾವಣೆಯ ಕೊನೆಯ ಮೂರು ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಯಿತು. ಲಖನ್‌ ಜಾರಕಿಹೊಳಿ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ. ಚುನಾವಣೆ ಚಿತ್ರಣ ಬದಲಾಗಿದ್ದಕ್ಕೆ ಬಿಜೆಪಿ ಪರ ಪ್ರಚಾರ ಮಾಡಿದೆ. ಆದರೆ ಬಿಜೆಪಿ ಸೋಲಿನ ಸಂಚು ನಡೆದಿರುವ ಬಗ್ಗೆ ಮಾಹಿತಿ ಇರಲಿಲ್ಲ. ವಿಚಾರ ಮಾಡಿ ಮಾತಾಡುತ್ತೇನೆ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಕಠೋರ ಉತ್ತರ ಕೊಡುತ್ತೇನೆ’’ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.



Read more