Karnataka news paper

ಕೈರಾನ್‌ ಪೊಲಾರ್ಡ್‌ಗೆ ಚಳ್ಳೆಹಣ್ಣು ತಿನ್ನಿಸಿದ್ದೇಗೆಂದು ತಿಳಿಸಿದ ಚಹಲ್‌!


ಹೊಸದಿಲ್ಲಿ: ಮೊದಲನೇ ಒಡಿಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ನಾಯಕ ಹಾಗೂ ಬಿಗ್‌ ಹಿಟ್ಟರ್‌ ಕೈರೊನ್‌ ಪೊಲಾರ್ಡ್‌ ಅವರನ್ನು ಔಟ್‌ ಮಾಡಲು ತಾವು ರೂಪಿಸಿದ್ದ ತಂತ್ರವನ್ನು ಟೀಮ್‌ ಇಂಡಿಯಾ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಬಹಿರಂಗಪಡಿಸಿದ್ದಾರೆ.

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಓಡಿಐ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್‌ ಮೋಡಿಯ ಸಹಾಯದಿಂದ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಭಾರತ ತಂಡ 1-0 ಮುನ್ನಡೆ ಪಡೆಯಿತು.

ಭಾರತ ತಂಡದ 1000ನೇ ಓಡಿಐ ಐತಿಹಾಸಿಕ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಸ್ವೀಕರಿಸಿದ ಯುಜ್ವೇಂದ್ರ ಚಹಲ್‌ ವಿಂಡೀಸ್‌ ನಾಯಕ ಕೈರೊನ್‌ ಪೊಲಾರ್ಡ್‌ ಸೇರಿದಂತೆ ಒಟ್ಟು 4 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಆ ಮೂಲಕ ವೆಸ್ಟ್‌ ಇಂಡೀಸ್‌ ತಂಡ 176ಕ್ಕೆ ಆಲ್‌ಔಟ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಂಡೀಸ್‌ ಎದುರು 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಭಾರತ!

ಪಂದ್ಯದ ಬಳಿಕ ನಾಯಕ ರೋಹಿತ್‌ ಶರ್ಮಾ ಜೊತೆ ಮಾತನಾಡಿದ ಚಹಲ್‌, “ದಕ್ಷಿಣ ಆಫ್ರಿಕಾದಲ್ಲಿ ನಾನು ಹೆಚ್ಚು ಗೂಗ್ಲಿಗಳನ್ನು ಬೌಲಿಂಗ್ ಮಾಡದಿರುವ ಬಗ್ಗೆ ಪಂದ್ಯಕ್ಕೂ ಮುನ್ನ ನಡೆದಿದ್ದ ಮಾತುಕತೆ ನನ್ನ ಮನಸ್ಸಿನಲ್ಲಿತ್ತು. ವಿಂಡೀಸ್‌ ಬ್ಯಾಟ್ಸ್‌ಮನ್‌ಗಳು ಹಾರ್ಡ್ ಹಿಟ್ಟರ್‌ಗಳೆಂದು ತಿಳಿದಿದೆ. ಒಮ್ಮೆ ಅವರು ತಮ್ಮ ಹೊಡೆತಗಳಿಗೆ ಹೋಗಲು ನಿರ್ಧರಿಸಿದರೆ, ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ,” ಎಂದರು.

“ನೀವು(ರೋಹಿತ್‌) ಹೇಳಿದಂತೆ, ಗೂಗ್ಲಿಗಿಂತ ನನ್ನ ಲೆಗ್‌ ಸ್ಪಿನ್‌ ಹೆಚ್ಚು ಪರಿಣಾಮಕಾರಿಯಾಗಿತ್ತು. ಹಾಗಾಗಿ ಇದನ್ನು ನಾನು ಮಿಶ್ರಣ ಮಾಡಿದೆ. ಅದರಲ್ಲೂ ವಿಶೇಷವಾಗಿ ಕೈರೊನ್‌ ಪೊಲಾರ್ಡ್‌ಗೆ ನೀವು ಹೇಳಿದಂತೆ ಮುಂದೆ ಪಿಚ್‌ ಹಾಕಿ ಗೂಗ್ಲಿ ಮಾಡಿದೆ. ಅದರಂತೆ ಪೊಲಾರ್ಡ್‌ ಔಟ್‌ ಆದರು,” ಎಂದು ಹೇಳಿದರು.

‘ಪರಿಪೂರ್ಣ ಆಟದಲ್ಲಿ ನನಗೆ ನಂಬಿಕೆ ಇಲ್ಲ’ ಗೆಲುವಿನ ಬಳಿಕ ರೋಹಿತ್ ಹೇಳಿದ್ದಿದು!

100 ಓಡಿಐ ವಿಕೆಟ್‌ ಪೂರ್ಣಗೊಳಿಸಿದ ಬಗ್ಗೆ ಮಾತನಾಡಿ, “ಅದ್ಭುತ ಭಾವನೆ ಉಂಟಾಗುತ್ತಿದೆ. ಕಳೆದ ಐದು ವರ್ಷಗಳಿಂದ ನನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದೇನೆ. ಓಡಿಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಕಬಳಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದು ದೊಡ್ಡ ಸಂಗತಿ. ಇಷ್ಟು ಬೇಗ ಈ ಮೈಲುಗಲ್ಲು ಸ್ಥಾಪಿಸುತ್ತೇನೆಂದು ಅಂದುಕೊಂಡಿರಲಿಲ್ಲ,” ಎಂದು ತಿಳಿಸಿದರು.

ತಮ್ಮ ಸಹ ಆಟಗಾರ ಕುಲ್ದೀಪ್‌ ಯಾದವ್‌ ಬಳಿಕ ಓಡಿಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಕಬಳಿಸಿದ ಎರಡನೇ ಭಾರತೀಯ ಸ್ಪಿನ್ನರ್‌ ಎಂಬ ಖ್ಯಾತಿಗೆ ಯುಜ್ವೇಂದ್ರ ಚಹಲ್‌ ಭಾಜನರಾದರು.

ಪಂದ್ಯದ ಗೆಲುವಿನ ಹೊರತಾಗಿಯೂ ಬೇಸರ ಹೊರಹಾಕಿದ ವಾಷಿಂಗ್ಟನ್‌!

ಅಂದಹಾಗೆ ಯುಜ್ವೇಂದ್ರ ಚಹಲ್‌ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ, ಈ ಬಾರಿ ಚಹಲ್‌ ತಮ್ಮ ಕೌಶಲದ ಮೇಲೆ ಹೆಚ್ಚಿನ ಪರಿಶ್ರಮ ಪಡುವ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ.

“ಒಂದು ವೇಳೆ ವಿಕೆಟ್‌ ನಿಧಾನಗತಿಯಿಂದ ಕೂಡಿದ್ದರೆ ಬೌಲ್‌ ಮಾಡುವ ಆಂಗಲ್‌ ಅನ್ನು ಬದಲಾಯಿಸುತ್ತೇನೆ. ತಂಡದಲ್ಲಿ ಸ್ಥಾನ ಕಳೆದುಕೊಂಡಾಗ ನಾನು ಯಾವ ಅಂಶದಲ್ಲಿ ಸುಧಾರಣೆ ಕಂಡುಕೊಳ್ಳಬೇಕೆಂಬುದರ ಕಡೆಗೆ ಗಮನ ಹರಿಸುತ್ತೇನೆ. ನೆಟ್ಸ್‌ನಲ್ಲಿ ಬೇರೆ ಬೌಲರ್‌ಗಳ ಸೈಡ್ ಆರ್ಮ್‌ ಬೌಲಿಂಗ್‌ ಅನ್ನು ವೀಕ್ಷಿಸಿದ್ದೇನೆ. ಆ ಮೂಲಕ ನಾನು ಇನ್ನಷ್ಟು ವೇಗವಾಗಿ ಬೌಲ್‌ ಮಾಡಬೇಕೆಂಬುದು ಅರಿವಾಯಿತು,” ಎಂದು ತಿಳಿಸಿದರು.

‘ಆದಷ್ಟು ಬೇಗ ಈ ತಪ್ಪು ತಿದ್ದಿಕೊಳ್ಳಿ’ ಕೊಹ್ಲಿಗೆ ಗವಾಸ್ಕರ್‌ ವಾರ್ನಿಂಗ್!



Read more

[wpas_products keywords=”deal of the day gym”]