Karnataka news paper

ಮೇಲ್ಮನೆ ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ- ಡಿಕೆ ಶಿವಕುಮಾರ್


Source : Online Desk

ಬೆಂಗಳೂರು: ಮೇಲ್ಮನೆ ಚುನಾವಣಾ ಫಲಿತಾಂಶ ಸಮಾಧಾನ ತಂದಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಹಲವು ಕಡೆ ಕೊನೆ ಕ್ಷಣಕ್ಕೆ ಅಭ್ಯರ್ಥಿ ಹಾಕಿ ಅಲ್ಪ ಮತದಿಂದ ಸೋತಿದ್ದೇವೆ. ನಮ್ಮ ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ ಎಂದರು.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಕೊಡಗಿನಲ್ಲಿ ಬಿಜೆಪಿ, ಹಾಸನದಲ್ಲಿ ಸೂರಜ್ ರೇವಣ್ಣ, ಬೀದರ್ ನಲ್ಲಿ ಕಾಂಗ್ರೆಸ್ ಗೆಲುವು

ಆಡಳಿತಾರೂಢ ಪಕ್ಷಕ್ಕೆ ಒಂದು ಲಾಭ ಇದ್ದೇಯಿದೆ. ಅದನ್ನು ಅವರು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಸೋತ ಕಡೆಈ ಬಾರಿ ನಾವು ಗೆದ್ದಿದ್ದೇವೆ. ಕೆಲವು ಕಡೆ ಸೀಟು ಕಳೆದುಕೊಂಡಿರುವುದಾಗಿ ತಿಳಿಸಿದರು.

ಪರಿಷತ್ ನಲ್ಲಿ ಬಹುಮತಕ್ಕಾಗಿ ನಾವು ಹೋರಾಟ ಮಾಡಿಲ್ಲ. ಅದನೆಲ್ಲಾ ನಾವು ಲೆಕ್ಕ ಹಾಕಿಲ್ಲ. ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದ್ದೇವೆ. ಒಟ್ಟಾರೇ ಫಲಿತಾಂಶ ಸಮಾಧಾನ ತಂದಿದೆ ಎಂದರು.



Read more