Karnataka news paper

ನಿಲ್ಲುತ್ತಿಲ್ಲ ವಿದ್ಯಾರ್ಥಿಗಳ ಹಿಜಾಬ್-ಕೇಸರಿ ವಿವಾದ; ಕುಂದಾಪುರದಲ್ಲಿ ಮತ್ತೆರಡು ಕಾಲೇಜಿಗೆ ವಿಸ್ತರಣೆ!


| Vijaya Karnataka Web | Updated: Feb 7, 2022, 1:51 PM

Hijab and saffron shawl Controversy: ಉಡುಪಿಯಲ್ಲಿ ಆರಂಭಗೊಂಡಿದ್ದ ಹಿಬಾಜ್ ವಿವಾದ ಉಡುಪಿಯ ಆಸುಪಾಸಿನ ಕಾಲೇಜುಗಳಿಗಿಂತ ಕುಂದಾಪುರ ತಾಲೂಕಿನ ಕಾಲೇಜುಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ‌. ಸೋಮವಾರ ಮತ್ತೆರಡು ಕಾಲೇಜಿನಲ್ಲಿ ಈ ವಿವಾದ ವ್ಯಾಪಿಸಿದೆ. ಉಪನ್ಯಾಸಕರು ಮಧ್ಯೆ ಪ್ರವೇಶಿಸಿ ನಮ್ಮಲ್ಲಿ ಹಿಜಾಬ್ ಹಾಗೂ ಕೇಸರಿ ಎರಡಕ್ಕೂ ಅವಕಾಶವಿಲ್ಲ ಎಂದರು. ಹಿಜಾಬ್ ತೊಟ್ಟ ವಿದ್ಯಾರ್ಥಿನಿಯರು ವಾಪಾಸು ಮನೆಗೆ ತೆರಳಿದ್ರೆ, ಕೇಸರಿ ತೊಟ್ಟು ವಿದ್ಯಾರ್ಥಿಗಳು ಶಾಲು ಕಳಚಿ ತರಗತಿಗೆ ಹಾಜರಾದರು. ಕುಂದಾಪುರದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ಕ್ಯಾಂಪಸ್ ಒಳಗಡೆ ಬಿಟ್ಟರೂ ಕ್ಲಾಸ್‌ಗೆ ಹಾಜರಾಗಲು ಬಿಡದೆ ಕಾಲೇಜಿನಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

 

hijab saffron

ಹೈಲೈಟ್ಸ್‌:

  • ಆರುತ್ತಿಲ್ಲ ವಿದ್ಯಾರ್ಥಿಗಳ ಹಿಜಾಬ್-ಕೇಸರಿ ಸಮರ
  • ಕುಂದಾಪುರದಲ್ಲಿ ಮತ್ತೆರಡು ಕಾಲೇಜಿಗೆ ವಿಸ್ತರಣೆ!
  • ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ
  • ಹಿಜಾಬ್‌ಗೆ ಅವಕಾಶ ಕೊಟ್ಟರೂ ಪ್ರತ್ಯೇಕ ಕೊಠಡಿ!
ಉಡುಪಿ:ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿದ್ದ ಹಿಜಾಬ್ ವಿವಾದ ದಿನೇ ದಿನೇ ಜಿಲ್ಲೆಯ ಅನ್ಯ ಕಾಲೇಜುಗಳಿಗೆ ವಿಸ್ತರಣೆಗೊಳ್ಳುತ್ತಿದೆ. ಸರಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಕೊಟ್ಟರೂ ವಿದ್ಯಾರ್ಥಿಗಳ ಹಿಜಾಬ್-ಕೇಸರಿ ಸಮರ ಭುಗಿಲೆದ್ದಿದೆ.

ಉಡುಪಿಯಲ್ಲಿ ಆರಂಭಗೊಂಡಿದ್ದ ಹಿಬಾಜ್ (Hijab) ವಿವಾದ ಉಡುಪಿಯ ಆಸುಪಾಸಿನ ಕಾಲೇಜುಗಳಿಗಿಂತ ಕುಂದಾಪುರ ತಾಲೂಕಿನ ಕಾಲೇಜುಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ‌. ಸೋಮವಾರ ಮತ್ತೆರಡು ಕಾಲೇಜಿನಲ್ಲಿ ಹಿಜಾಬ್-ಕೇಸರಿ (Saffron) ವಿವಾದ ವ್ಯಾಪಿಸಿದೆ. ಕುಂದಾಪುರದ ವೆಂಕಟರಮಣ ಪಿಯು ಕಾಲೇಜು ಹಾಗೂ ಕೋಟೇಶ್ವರ ಕಾಗೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಹಿಜಾಬ್ ಹಾಕಿದ್ದಕ್ಕೆ ನೂರಾರು ಮಂದಿ ವಿದ್ಯಾರ್ಥಿಗಳು ಕೇಸರಿ (Kesari) ಶಾಲು ತೊಟ್ಟು ಬಂದರು. ಉಪನ್ಯಾಸಕರು ಮಧ್ಯೆ ಪ್ರವೇಶಿಸಿ ನಮ್ಮಲ್ಲಿ ಹಿಜಾಬ್ ಹಾಗೂ ಕೇಸರಿ ಎರಡಕ್ಕೂ ಅವಕಾಶವಿಲ್ಲ. ಮನೆಗೆ ತೆರಳುವಂತೆ ಸೂಚಿಸಿದರು. ಹಿಜಾಬ್ ತೊಟ್ಟ ವಿದ್ಯಾರ್ಥಿನಿಯರು ವಾಪಾಸು ಮನೆಗೆ ತೆರಳಿದ್ದು, ಕೇಸರಿ ತೊಟ್ಟು ವಿದ್ಯಾರ್ಥಿಗಳು ಶಾಲು ಕಳಚಿ ತರಗತಿಗೆ ಹಾಜರಾದರು. ವೆಂಕಟರಮಣ ಕಾಲೇಜಿನಲ್ಲೂ ಸಮವಸ್ತ್ರ ಕಡ್ಡಾಯ ಎಂದಾಕ್ಷಣ ವಿದ್ಯಾರ್ಥಿಗಳು ತರಗತಿಗೆ ಹಾಜರಾದರು.
ಕುಂದಾಪುರದ ಕಾಲೇಜ್‌ನಲ್ಲಿ ಹಿಜಾಬ್ ಧರಿಸಲು ಸಿಕ್ಕಿತು ಅನುಮತಿ; ಆದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ!
ಪ್ರತ್ಯೇಕ ಕೊಠಡಿ ವ್ಯವಸ್ಥೆ
ಕೆಲ ದಿನಗಳಿಂದ ಗೇಟ್‌ನ ಹೊರಗಡೆಯೇ ನಿಂತು ಹಿಜಾಬ್‌ಗೆ ಅವಕಾಶ ನೀಡುವಂತೆ ಕೇಳುತ್ತಿದ್ದ ಕುಂದಾಪುರ ಜೂನಿಯರ್ ಕಾಲೇಜಿನ 22 ವಿದ್ಯಾರ್ಥಿನಿಯರು ಸೋಮವಾರವೂ ಗೇಟ್ ಸಮೀಪ ನಿಂತು ಪ್ರತಿಭಟನೆ ನಡೆಸಿದರು. ಈ ಕಾಲೇಜು ರಸ್ತೆಗೆ ಅನತಿ ದೂರದಲ್ಲಿರುವುದರಿಂದ ಯಾವುದೇ ಅನಾಹುತ, ಗುಂಪು ಘರ್ಷಣೆ ಆಗದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸೂಚನೆ ಮೇರೆಗೆ ವಿದ್ಯಾರ್ಥಿನಿಯರನ್ನು ಕ್ಯಾಂಪಸ್ ಒಳಗಡೆ ಬಿಡಲಾಯಿತು. ಕ್ಲಾಸ್‌ಗೆ ಹಾಜರಾಗುವುದಕ್ಕೆ ಅವಕಾಶ ನೀಡಿಲ್ಲ. ಕಾಲೇಜಿನಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಧ್ಯಮದವರಿಗೆ ಪ್ರವೇಶ ನಿರ್ಬಂಧ ಹಾಕಲಾಗಿದೆ. ನಾವುಂದ ಹಾಗೂ ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಪೋಷಕರ ಸಭೆ ನಡೆಯುತ್ತಿದೆ.
‘ನಿಮ್ಮ ತಾತ ಕೂಡ ಹಿಂದೂ ಆಗಿದ್ದರು ಎಂಬುದನ್ನು ಮರೀಬೇಡಿ’; ತನ್ವೀರ್‌ ಸೇಠ್‌ಗೆ ಪ್ರತಾಪ್‌ ಸಿಂಹ ತಿರುಗೇಟು
ವಿದ್ಯಾರ್ಥಿನಿಯರ ಮನವೊಲಿಸಲು ಯತ್ನ
ಸರಕಾರ ಸಮವಸ್ತ್ರ ಕಡ್ಡಾಯಗೊಳಸಿ‌ ಆದೇಶಿಸಿದ್ದರೂ ಉಡುಪಿ ಎಂಜಿಎಂ‌ ಕಾಲೇಜಿನ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ 100 ಕ್ಕೂ ಅಧಿಕ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡೇ ಬಂದಿದ್ದರು. ಇದನ್ನು ಉಳಿದ ವಿದ್ಯಾರ್ಥಿಗಳು ಪ್ರಶ್ನಿಸಿದ್ದು, ಸಮವಸ್ತ್ರ ಬಿಟ್ಟು ಬೇರೆ ಯಾವ ಉಡುಪುಗಳನ್ನು ತೊಟ್ಟರೂ ನಾವು ಕೇಸರಿ ಶಾಲು ಧರಿಸಿಯೇ ಬರುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಪ್ರಾಂಶುಪಾಲರು, ಉಪನ್ಯಾಸಕರು ಹಿಜಾಬ್ ಧರಿಸಿದ್ದ‌ ವಿದ್ಯಾರ್ಥಿಗಳ ಪ್ರತ್ಯೇಕ ಸಭೆ ಕರೆದು ಸಮವಸ್ತ್ರ ಕಡ್ಡಾಯದ ಬಗ್ಗೆ ಮನವರಿಕೆ ಮಾಡಿದ್ದಾರೆ. ಫೆ. 8 ರಿಂದ ಸಮವಸ್ತ್ರದಲ್ಲೇ ಬರಬೇಕೆಂದಿದ್ದಾರೆ. ಉಳಿದ ವಿದ್ಯಾರ್ಥಿಗಳು ಕೂಡಾ ನಾಳೆ ತ‌ನಕ ಕಾಯುತ್ತೇವೆ. ನಮ್ಮ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಪ್ರಾಂಶುಪಾಲರ ಸಮ್ಮುಖದಲ್ಲಿ ಹೇಳಿದ್ದಾರೆ.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : the hijab and saffron shawl controversy is an extension of two colleges in kundapur
Kannada News from Vijaya Karnataka, TIL Network



Read more

[wpas_products keywords=”deal of the day sale today offer all”]