ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಗೆದ್ದಿದ್ದ ಶರತ್ ಇತ್ತೀಚೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯನಾಗಿ ಸೇರ್ಪಡೆಗೊಂಡಿದ್ದರು. ಶರತ್ ಕಾಂಗ್ರೆಸ್ ಸೇರ್ಪಡೆಗೊಂಡ ಆರಂಭದಲ್ಲಿ ಎಲ್ಲವೂ ಸರಿಯಿದ್ದರೂ ಇದೀಗ ಅಸಮಾಧಾನ
ಮೂಲ ಕಾಂಗ್ರೆಸ್ಸಿಗರಿಂದ ಶುರುವಾಗಿದೆ.
ಶರತ್ ಬಚ್ಚೇಗೌಡ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡುತ್ತಿದ್ದಾರೆ. ತಮ್ಮ ತಂದೆಯ ಶೈಲಿಯ ರಾಜಕೀಯ ಆರಂಭಿಸಿದ್ದಾರೆ. ಕುಟುಂಬ ಸದಸ್ಯರ ಟೀಮ್ ಮಾಡಿಕೊಂಡಿದ್ದಾರೆ ಎಂಬುದು ಅಸಮಾಧಾನಿತ ಕೈ ಕಾರ್ಯಕರ್ತರ ಆರೋಪವಾಗಿದೆ.
ಎಂಟಿಬಿ, ಶರತ್ ಬಚ್ಚೇಗೌಡ ನಡುವೆ ಮತ್ತೆ ವಾಕ್ಸಮರ, ಶುಕ್ರವಾರ ಹೊಸಕೋಟೆಯಲ್ಲಿ ಹೈಡ್ರಾಮ
ಈ ಹಿಂದೆ ನಾವೆಲ್ಲ ಬಚ್ಚೇಗೌಡರ ಕುಟುಂಬದ ದೌರ್ಜನ್ಯದ ವಿರುದ್ಧ ಹೋರಾಡಿದ್ದೇವೆ. ಕೋರ್ಟ್ ಗಳಲ್ಲಿ ಕೇಸುಗಳು ಈಗಲೂ ಇವೆ ಎಂಬುದು ಅಸಮಾಧಾನಿತರ ವಾದವಾಗಿದೆ. ಆದರೆ ಇದೀಗ ಶರತ್ ತಮ್ಮದೇ ಆದ ಟೀಮ್ ಕಟ್ಟಿಕೊಂಡು ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಮಾಡುತ್ತಿದ್ದಾರೆ.
ಹೊಸಕೋಟೆ ಕಾಂಗ್ರೆಸ್ ಭದ್ರಕೋಟೆ ಒಬಿಸಿ ಯವರಿಗೆ ಟಿಕೆಟ್ ಇಲ್ಲಿ ಫಿಕ್ಸ್ ಆಗಿತ್ತು. ಇದೀಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶರತ್ ಗೆ ಮುಂದೆ ಟಿಕೆಟ್ ಕೊಟ್ಟರೆ ಒಬಿಸಿ ನಾಯಕರು ಎಲ್ಲಿಗೆ ಹೋಗಬೇಕು? ಎಂಬುದು ಕೆಲವು ಕಾರ್ಯಕರ್ತರ ವಾದವಾಗಿದೆ.
ಶರತ್ ಗೆ ಕಾಂಗ್ರೆಸ್ ಟಿಕೆಟ್ ಕೊಡುವುದು ಬೇಡ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಈ ಹಿಂದಿನ ಬಚ್ಚೇಗೌಡರ ರೀತಿಯ ಹೊಸಕೋಟೆ ಆಗಲಿದೆ. ತಂದೆ ಬಿಜೆಪಿ ಸಂಸದ ಕಾಂಗ್ರೆಸ್ ಸೇರ್ಪಡೆ ಆದರೂ ಬಿಜೆಪಿ ಜೊತೆ ಶರತ್ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು
ಶರತ್ ಬಚ್ಚೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಸಮಾಧಾನಿತರು, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶರತ್ ಗೆ ಟಿಕೆಟ್ ಕೊಡದಂತೆ ಸಿದ್ದು ಭೇಟಿಯಾಗಿ ಎರಡು ದಿನದ ಹಿಂದೆ ದೂರು ನೀಡಿದ್ದಾರೆ. ಪತ್ರದ ಮೂಲಕ ದೂರನ್ನು ನೀಡಿದ್ದಾರೆ. ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಪ್ರಸಾದ್ ಮತ್ತು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ನೇತ್ರತ್ವದಲ್ಲಿ ಸಿದ್ದುಗೆ ದೂರು ನೀಡಲಾಗಿದೆ. ಸಚಿವ ಎಂಟಿಬಿ ನಾಗರಾಜ್ ರನ್ನು ಪಕ್ಷಕ್ಕೆ ವಾಪಸ್ ಕರೆ ತರುವಂತೆಯೂ ಸಿದ್ದುಗೆ ಒತ್ತಡ ಹೇರಲಾಗಿದೆ. ಆದರೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದನ್ನು ಹೇಗೆ ಪರಿಗಣಿಸುತ್ತಾರೆ? ಎಂಬುದು ಸದ್ಯದ ಕುತೂಹಲ.
Read more
[wpas_products keywords=”deal of the day sale today offer all”]