Karnataka news paper

ದಿನದ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್‌ ಷೇರುಗಳಿವು!


ಹೈಲೈಟ್ಸ್‌:

  • ಷೇರು ಮಾರುಕಟ್ಟೆ ಪಾಲಿಗೆ ಬುಧವಾರ ಏರಿಳಿತದ ದಿನ
  • ದಿನದ ಆರಂಭದಲ್ಲಿ ಸ್ಥಿರತೆಯಿಂದಿದ್ದ ನಿಫ್ಟಿ ಅಂತಿಮವಾಗಿ 17221.40ರಲ್ಲಿ ಕೊನೆ
  • ಮುಕ್ತಾಯದ ವೇಳೆಗೆ 102 ಅಂಕ ಅಂದರೆ ಶೇಕಡ 0.6ರಷ್ಟು ಕುಸಿತ ದಾಖಲಿಸಿತ್ತು ನಿಫ್ಟಿ

ಷೇರು ಮಾರುಕಟ್ಟೆ ಪಾಲಿಗೆ ಬುಧವಾರ ಏರಿಳಿತದ ದಿನವಾಗಿತ್ತು. ನಿಫ್ಟಿ ಎರಡೂ ದಿಕ್ಕುಗಳ ಚಲನೆಯನ್ನು ದಾಖಲಿಸಿತು. ದಿನದ ಆರಂಭದಲ್ಲಿ ನಿಫ್ಟಿ ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ, ಮಾರುಕಟ್ಟೆಯ ವಹಿವಾಟು ಪ್ರಾರಂಭವಾದ ಕೆಲಹೊತ್ತಿನಲ್ಲೇ ಸ್ಥಿರತೆಯು ಕುಸಿತದ ಕಡೆಗೆ ಚಲಿಸಿತು. ದಿನದಲ್ಲಿ ಎರಡು ಬಾರಿ 17,200ರ ಪ್ರಮುಖ ಬೆಂಬಲ ಮಟ್ಟವನ್ನು ನಿಫ್ಟಿ ತಲುಪಿತ್ತು. ಎರಡು ಬಾರಿ ಜಿಗಿತ ಕಂಡರೂ ಅಂತಿಮವಾಗಿ 17221.40ರಲ್ಲಿ ಕೊನೆಯಾಯಿತು. ಮುಕ್ತಾಯದ ವೇಳೆಗೆ, ನಿಫ್ಟಿ 102 ಅಂಕ ಅಂದರೆ ಶೇಕಡ 0.6ರಷ್ಟು ಕುಸಿತ ದಾಖಲಿಸಿತು. ಇಂಡಿಯಾ VIX ಶೇ. 1.59 ರಷ್ಟು ಏರಿಕೆಯಾಗಿರುವುದರಿಂದ ಇಂದು ಮಾರುಕಟ್ಟೆಯಲ್ಲಿ ಏರಿಳಿತ ನಿಚ್ಚಳವಾಗಿತ್ತು.

ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್‌ಸರ್ವ್ ಮಾರುಕಟ್ಟೆಯ ಇಳಿಕೆಗೆ ಪ್ರಮುಖ ಕಾರಣವಾದ ಷೇರುಗಳಾಗಿದ್ದವು. ಆದರೆ ಸನ್ ಫಾರ್ಮಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸ್ವಲ್ಪ ಮಟ್ಟಿಗೆ ಮಾರುಕಟ್ಟೆಗೆ ಬೆಂಬಲ ನೀಡಿದವು. ನಿಫ್ಟಿ 17,200ರಿಂದ ಚೇತರಿಕೆಯನ್ನು ತೋರಿಸಿತು. ಕೆಲವು ಷೇರುಗಳು ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳುವ ಮೂಲಕ ಇದೇ ಪ್ರವೃತ್ತಿಯನ್ನು ತೋರಿದವು. ಕನಿಷ್ಠ ಹಂತದಿಂದ ಚೇತರಿಕೆಯು ಬಲವಾದ ಖರೀದಿ ವಲಯಗಳನ್ನು ಸೂಚಿಸುತ್ತದೆ ಮತ್ತು ನಾಳೆ (ಗುರುವಾರ) ಟ್ರೆಂಡಿಂಗ್‌ನಲ್ಲಿರುವ ಸಾಧ್ಯತೆಯಿದೆ.

ಬುಧವಾರ ಕನಿಷ್ಠ ಹಂತದಿಂದ ಚೇತರಿಸಿಕೊಂಡ ಷೇರುಗಳು ಇವು:

  • ಕ್ಯಾನ್‌ಫಿನ್‌ಹೋಮ್
  • ಜಿಪಿಪಿಎಲ್‌
  • ಲಾಲ್‌ಪತ್‌ಲ್ಯಾಬ್‌
  • ರಾಮ್ಕೊಸೆಮ್‌

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್‌ ಸ್ಟ್ರೀಟ್‌ ಇನ್ವೆಸ್ಟ್‌ಮೆಂಟ್‌ ಜರ್ನಲ್‌ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್‌ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.



Read more…