ಹೈಲೈಟ್ಸ್:
- ಪಶ್ಚಿಮ ಬಂಗಾಳದಲ್ಲಿ ರಾಜ್ಯದ ಮೊದಲ ಓಮಿಕ್ರಾನ್ ತಳಿ ಕೋವಿಡ್ ಪತ್ತೆ
- ಅಬುದಾಬಿಯಿಂದ ಬಂದಿದ್ದ ಏಳು ವರ್ಷದ ಬಾಲಕನಲ್ಲಿ ಓಮಿಕ್ರಾನ್
- ಬಾಲಕನ ಜತೆಗೆ ಇದ್ದರೂ ಆತನ ಪೋಷಕರಲ್ಲಿ ಕೊರೊನಾ ವೈರಸ್ ನೆಗೆಟಿವ್
- ಹೈದರಾಬಾದ್‌ನಲ್ಲಿ ಇಬ್ಬರು ವಿದೇಶಿ ಪ್ರಜೆಗಳಲ್ಲಿ ಓಮಿಕ್ರಾನ್ ತಳಿ ಪತ್ತೆ
ಈ ಬಾಲಕ ತನ್ನ ಪೋಷಕರ ಜತೆ ಅಬುದಾಬಿಯಿಂದ ಹೈದರಾಬಾದ್‌ಗೆ ಬಂದಿದ್ದ. ಅಲ್ಲಿಂದ ಮುರ್ಷಿದಾಬಾದ್ ಜಿಲ್ಲೆಗೆ ತೆರಳಿದ್ದ. ಈತನ ತಂದೆ ತಾಯಿ ಇಬ್ಬರಲ್ಲಿಯೂ ಕೋವಿಡ್ 19 ನೆಗೆಟಿವ್ ಬಂದಿದೆ ಎಂದು ವರದಿಗಳು ತಿಳಿಸಿವೆ. ಬಾಲಕನನ್ನು ಮುರ್ಷಿದಾಬಾದ್‌ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ 8 ಜನಕ್ಕೆ ಓಮಿಕ್ರಾನ್..! ಆದ್ರೆ, ಒಬ್ಬರೂ ವಿದೇಶದಿಂದ ಬಂದವರಲ್ಲ..!
ಇದಕ್ಕೂ ಮುನ್ನ ತೆಲಂಗಾಣದ ಹೈದರಾಬಾದ್‌ನಲ್ಲಿ ಇಬ್ಬರು ವಿದೇಶಿಗರಲ್ಲಿ ಓಮಿಕ್ರಾನ್ ತಳಿ ವೈರಸ್ ದೃಢಪಟ್ಟಿತ್ತು. ಮೊದಲ ವ್ಯಕ್ತಿ ಕೀನ್ಯಾದ 24 ವರ್ಷದ ಮಹಿಳೆಯಾಗಿದ್ದು, ಮತ್ತೊಬ್ಬ 23 ವರ್ಷದ ಸೊಮಾಲಿಯಾ ನಾಗರಿಕನಾಗಿದ್ದಾನೆ. ಇಬ್ಬರೂ ಡಿಸೆಂಬರ್ 12ರಂದು ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದ್ದರಿಂದ, ಅವುಗಳ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ರವಾನಿಸಲಾಗಿತ್ತು. ಎಂದು ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಬಾಲಕನ ಪ್ರಕರಣದೊಂದಿಗೆ ದೇಶದಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಬುಧವಾರ 64ಕ್ಕೆ ಏರಿಕೆಯಾಗಿದೆ. ಓಮಿಕ್ರಾನ್ ಹೆಚ್ಚು ಅಪಾಯಕಾರಿಯಾಗಿ ಈವರೆಗೆ ಕಾಣಿಸದೆ ಇದ್ದರೂ, ಈ ಹಿಂದಿನ ಕೋವಿಡ್ 19 ತಳಿಗಳಲ್ಲಿ ಕಾಣಿಸದೆ ಇರುವಷ್ಟು ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಓಮಿಕ್ರಾನ್ ಏರಿಕೆ ನಡುವೆ ಸಂತಸದ ಸುದ್ದಿ: 571 ದಿನಗಳಲ್ಲಿಯೇ ಕಡಿಮೆ ಕೋವಿಡ್ ಪ್ರಕರಣ
‘ವಾಸ್ತವ ಏನೆಂದರೆ ಓಮಿಕ್ರಾನ್ ಈವರೆಗೆ ಪತ್ತೆಯಾಗದೆ ಇದ್ದರೂ ಬಹುಶಃ ಬಹಳಷ್ಟು ದೇಶಗಳಲ್ಲಿ ಇದೆ. ಓಮಿಕ್ರಾನ್ ತೀವ್ರತೆಯ ಕಾಯಿಲೆ ಉಂಟುಮಾಡುವುದು ಕಡಿಮೆಯಾಗಿದ್ದರೂ, ಸಿದ್ಧಗೊಳ್ಳದ ಆರೋಗ್ಯ ವ್ಯವಸ್ಥೆಯಲ್ಲಿ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆ ಇದೆ’ ಎಂದು ಡಬ್ಲ್ಯೂಎಚ್‌ಒ ಹೇಳಿದೆ.