ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”ಈ ಮೂವರು ನಾಯಕರ ಕುಮ್ಮಕ್ಕಿನಿಂದಲೇ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆ, ಕಾಲೇಜುಗಳಿಗೆ ಬರುತ್ತಿದ್ದಾರೆ. ಶಾಂತಿ, ಸಾಮರಸ್ಯಕ್ಕೆ ಹೆಸರಾಗಿರುವ ಕರ್ನಾಟಕವನ್ನು ತಾಲಿಬಾನ್ ಆಗಲು ರಾಜ್ಯ ಸರಕಾರ ಅವಕಾಶ ನೀಡುವುದಿಲ್ಲ. ಅಮಾಯಕ ಮುಸ್ಲಿಂ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿರುವ ಇಂಥವರು ದೇಶದಲ್ಲೇ ಇರಬಾರದು” ಎಂದು ತರಾಟೆಗೆ ತೆಗೆದುಕೊಂಡರು.
”ಹಿಂದೆ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಮಾಜಿ ಸಚಿವ ಅಜಿತ್ ಸೇಠ್ ಕೋಮು ಗಲಭೆ ಸೃಷ್ಟಿಸಿಯೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಈಗ ಅವರ ಪುತ್ರ ತನ್ವೀರ್ ಸೇಠ್ ಅವರು ಮತ್ತೆ ಕೋಮು ಸಂಘರ್ಷ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಸರಕಾರ ಅವಕಾಶ ಕೊಡುವುದಿಲ್ಲ” ಎಂದರು.
Hijab row: ಹಿಜಾಬ್ ಹಿಡನ್ ಅಜೆಂಡಾ ಬಗ್ಗು ಬಡಿಯುತ್ತೇವೆ: ಸಚಿವ ವಿ. ಸುನಿಲ್ ಕುಮಾರ್ ವಾರ್ನಿಂಗ್..!
ರಾಜ್ಯದಲ್ಲಿ ಹಿಂದು, ಮುಸ್ಲಿಮರು ಸಹೋದರರಂತೆ ಬಾಳುತ್ತಿದ್ದಾರೆ. ನಮಗೆ ಹಿಜಾಬ್ ಮುಖ್ಯವಲ್ಲ, ಕೇಸರಿ ಶಾಲು ಕೂಡ ಬೇಕಿಲ್ಲ. ಎಲ್ಲರೂ ಓದಿ ಉತ್ತಮ ಶಿಕ್ಷಣ ಪಡೆದು ಸತ್ಪ್ರಜೆಗಳಾಗಬೇಕು. ವಿದ್ಯಾರ್ಥಿಗಳು ಇಂತಹ ಬೇಡದ ವಿಷಯಗಳ ಬಗ್ಗೆ ಗಮನಹರಿಸದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಆಲೋಚಿಸುವಂತೆ ರೇಣುಕಾಚಾರ್ಯ ಸಲಹೆ ನೀಡಿದರು.
ಷಡ್ಯಂತ್ರ ಅಡಗಿದೆ:
ಉಡುಪಿ ಜಿಲ್ಲೆ ಕುಂದಾಪುರದಲ್ಲಿಕೇವಲ 6 ವಿದ್ಯಾರ್ಥಿಗಳಿಂದ ಆರಂಭವಾದ ವಿವಾದ ಇಂದು ರಾಜ್ಯಾದ್ಯಂತ ವಿಸ್ತರಿಸಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿರುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆ ಮತ್ತು ಉಗ್ರರ ಕೈವಾಡವಿರುವ ಶಂಕೆ ಕೂಡ ಇದೆ. ಈ ವಿಷಯವಾಗಿ ರಾಜ್ಯದಲ್ಲೇ ಏನೇ ಅನಾಹುತ ಸಂಭವಿಸಿದರೂ ಅದಕ್ಕೆ ಕಾಂಗ್ರೆಸ್ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಸಚಿವ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕೆಂದು ನಿರ್ಧರಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ವರಿಷ್ಠರ ಜತೆ ಚರ್ಚಿಸಿ ಸೂಕ್ತ ಕಾಲದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ದಾವಣಗೆರೆಗೆ ಮಂತ್ರಿ ಸ್ಥಾನ ಅವಕಾಶ ಸಿಕ್ಕಿಲ್ಲ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿದೆ. ಈ ಬಾರಿ ಅವಕಾಶ ಕೊಡಬೇಕೆಂದು ಮನವಿ ಮಾಡಲಾಗಿದೆ.
– ಎಂ.ಪಿ.ರೇಣುಕಾಚಾರ್ಯ, ಶಾಸಕ, ಹೊನ್ನಾಳಿ.
Read more
[wpas_products keywords=”deal of the day sale today offer all”]