Karnataka news paper

‘ನಿಮ್ಮ ತಾತ ಕೂಡ ಹಿಂದೂ ಆಗಿದ್ದರು ಎಂಬುದನ್ನು ಮರೀಬೇಡಿ’; ತನ್ವೀರ್‌ ಸೇಠ್‌ಗೆ ಪ್ರತಾಪ್‌ ಸಿಂಹ ತಿರುಗೇಟು


ಮೈಸೂರು: ‘ಇದು ನಮ್ಮ ತಾತನದ್ದೇ ದೇಶ. ನಿಮ್ಮ ತಾತ ಕೂಡ ಹಿಂದು ಆಗಿದ್ದರು ಎಂಬುದನ್ನು ಮರೆಯಬೇಡಿ’ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿಕೆಗೆ ಸಂಸದ ಪ್ರತಾಪ್‌ಸಿಂಹ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತನ್ವೀರ್‌ ಸೇಠ್‌ ಪೂರ್ವ ಜರು ಮೆಕ್ಕಾ, ಮದೀನಾದಿಂದ ಬಂದವರಲ್ಲ. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡವರು. ಇಲ್ಲೇ ಹುಟ್ಟಿ ಬೆಳೆದು ನಂತರ ಮತಾಂತರಗೊಂಡರು. ಯಾರೂ ಮೆಕ್ಕಾ, ಮದೀನ, ರೋಮ್‌, ಬೆತ್ಲಹೇಮ್‌ನಿಂದ ಬಂದವರಲ್ಲ. ಇದನ್ನು ತನ್ವೀರ್‌ ಸೇಠ್‌ ಅರ್ಥ ಮಾಡಿಕೊಂಡು ಮಾತನಾಡಿದರೆ ಒಳಿತು’ ಎಂದರು.
ಹಿಂದೂ ಸಂಸ್ಕೃತಿ ಹಾಳಾಗಬಾರದು, ಎಲೆಕ್ಷನ್ ಟೈಂಗೆ ಸಿದ್ದರಹೀಮ್ಅಯ್ಯ ಆಗಿ ಬರ್ತಾರೆ: ಪ್ರತಾಪ್‌ ಸಿಂಹ ವ್ಯಂಗ್ಯ
ಹಿಜಾಬ್‌ (Hijab) ಬೇಕು ಅನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂಬ ಸಂಸದರ ಹೇಳಿಕೆ ‘ಈ ದೇಶ ಸಂಸದ ಪ್ರತಾಪ್‌ಸಿಂಹ ಅವರ ತಾತನ ಆಸ್ತಿಯಾ’ ಎಂದು ಶಾಸಕ ತನ್ವೀರ್‌ ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ‘ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಧರಿಸಬೇಕು ಎಂದು ಸರಕಾರ ಆದೇಶ ಹೊರಡಿಸಿರುವುದನ್ನು ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಶಿಕ್ಷಣ ಸಚಿವರು ಹಾಗೂ ಸರಕಾರವನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

ಸಂಸದರಿಂದ ಸಂವಿಧಾನ ವಿರೋಧಿ ಹೇಳಿಕೆ- ಎಸ್‌ಡಿಪಿಐ ಆರೋಪ
ಮಡಿಕೇರಿ: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್‌ ಸಿಂಹ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾಪೋಕ್ಲು ನಾಲ್ಕುನಾಡು ಎಸ್‌ಡಿಪಿಐ ಬ್ಲಾಕ್‌ ಅಧ್ಯಕ್ಷ ಬಿ.ಎಸ್‌ ಅಬೂಬಕ್ಕರ್‌ ಆರೋಪಿಸಿದರು.
‘ನೀವು ನಮ್ಮ ಊರಲ್ಲಿ ಜಿ.ಪಂ ಸ್ಥಾನ ಗೆದ್ದರೆ ನಿಮಗೆ ಶರಣಾಗುತ್ತೇನೆ’; ಪ್ರತಾಪ್‌ ಸಿಂಹಗೆ ಶಾಸಕ ನಾಗೇಂದ್ರ ಸವಾಲ್‌
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್‌ ಹಾಕಿಕೊಂಡೇ ಕಲಿಯಬೇಕು ಎಂದಾದರೆ ಮದ್ರಸಾಗೆ ಅಥವಾ ಪಾಕಿಸ್ತಾನಕ್ಕೆ ಹೋಗಿ ಎಂದಿರುವ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ಖಂಡನೀಯ. ಕೋಮು ಗಲಭೆ ಸೃಷ್ಟಿಸುವ ಮೂಲಕ ಸಂಸದ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂಬುದನ್ನು ಇಸ್ಲಾಂ ಧರ್ಮ ತಿಳಿಸಿಕೊಟ್ಟಿದ್ದು, ಅದೇ ಕಾರಣಕ್ಕೆ ಇನ್ನೂ ಸಮಾಧಾನದಿಂದಲೇ ಇದ್ದೇವೆ. ರಾಜಕೀಯ ದುರುದ್ದೇಶದಿಂದ ಧರ್ಮ ಧರ್ಮಗಳ ನಡುವಿನ ಸೌಹಾರ್ದತೆ ಕೆಡಿಸುತ್ತಿರುವುದು ಸರಿಯಲ್ಲ. ಇನ್ನು ಮುಂದಾದರೂ ಮಾತನಾಡುವ ಮುನ್ನ ಆಲೋಚಿಸಲಿ ಎಂದರು.

ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವ ಬದಲು ಕೋಮು ವಿಷ ಬೀಜ ಬಿತ್ತಲೆಂದೇ ಸಂಸದರು ಕೊಡಗಿಗೆ ಬಂದಿದ್ದಾರೆ. ಮುಸಲ್ಮಾನರ ಮತ ಪಡೆದು ಸಂಸದರಾದ ಪ್ರತಾಪ್‌ ಸಿಂಹ, ಇದೀಗ ಮುಸಲ್ಮಾನರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿರುವ ಅಬೂಬಕ್ಕರ್‌, ಜಿಲ್ಲೆಯಲ್ಲಿಹಿಂದೂ ಮುಸ್ಲಿಮರ ನಡುವೆ ಅನ್ಯೋನ್ಯತೆ ಇದೆ. ಶೇ.10ರಷ್ಟು ಮಂದಿ ಮಾತ್ರ ಕೋಮು ಗಲಭೆ ಸೃಷ್ಟಿಸುತ್ತಿದ್ದು, ಉಳಿದವರೆಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.

ಎಸ್‌ಡಿಪಿಐ ಕೊಟ್ಟಮುಡಿ ಅಧ್ಯಕ್ಷ ನಾಸಿರ್‌ ಎ.ಎ., ಹೊದವಾಡ ಅಜಾದ್‌ನಗರ ಕಾರ್ಯದರ್ಶಿ ಮಹಮ್ಮದ್‌ ಸಿದ್ದಿಕ್‌ ಉಪಸ್ಥಿತರಿದ್ದರು.



Read more

[wpas_products keywords=”deal of the day sale today offer all”]