ANI
ಕೊವೈ: ಆಲ್ಕೋಹಾಲ್ ಎಂದು ತಿಳಿದು ಆಸಿಡ್ ಕುಡಿದು 55 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತ್ರಿಪುರದ ಕೊವೈ ಜಿಲ್ಲೆಯಲ್ಲಿ ನಡೆದಿದೆ.ಮೃತನನ್ನು ಕಾರ್ತಿಕ್ ದೆಬಾರ್ಮಾ ಎಂದು ಗುರುತಿಸಲಾಗಿದೆ. ಆಲ್ಕೋಹಾಲ್ ಎಂದು ತಪ್ಪಾಗಿ ತಿಳಿದು ಫುಲ್ ಬಾಟಲ್ ಆಸಿಡ್ ಕುಡಿದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕುಡಿತದ ಚಟ ಬೆಳೆಸಿಕೊಂಡಿದ್ದ ದೆಬಾರ್ಮಾ, ಶುಕ್ರವಾರ ರಾತ್ರಿ ಸ್ಥಳೀಯ ಲಿಕ್ಕರ್ ಅಂಗಡಿಯಿಂದ ಕಂಠಪೂರ್ತಿ ಕುಡಿದಿದ್ದಾನೆ. ನಂತರ ಮನೆಗೆ ಬಂದು ಮಲಿಗಿದ್ದಾನೆ. ಮಧ್ಯರಾತ್ರಿಯಲ್ಲಿ ಎದ್ದು ಮತ್ತೆ ಕುಡಿದಿದ್ದಾನೆ. ಆದರೆ, ತಪ್ಪಾಗಿ ಮಧ್ಯವೆಂದು ತಿಳಿದು ಫುಲ್ ಬಾಟಲ್ ಆಸಿಡ್ ಸೇವಿಸಿರುವುದಾಗಿ ಮೂಲಗಳು ಹೇಳಿವೆ.
ಆತ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ಕೂಡಲೇ ಆತನ ಕುಟುಂಬ ಸದಸ್ಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿರುವುದಾಗಿ ಮೂಲಗಳು ಹೇಳಿವೆ.
Read more
[wpas_products keywords=”deal of the day”]