300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಟಿ.ಆರ್.ಅಶ್ವತ್ಥನಾರಾಯಣ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತೀಚಿನವರೆಗೂ ಕನ್ನಡ ಚಿತ್ರರಂಗದಲ್ಲಿ ಟಿ.ಆರ್.ಅಶ್ವತ್ಥನಾರಾಯಣ ಸಕ್ರಿಯರಾಗಿದ್ದರು.
ವಯೋಸಹಜ ಕಾಯಿಲೆ
ಕಳೆದ ಹಲವು ದಿನಗಳಿಂದ ಟಿ.ಆರ್.ಅಶ್ವತ್ಥನಾರಾಯಣ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಟಿ.ಆರ್.ಅಶ್ವತ್ಥನಾರಾಯಣ ಕೊನೆಯುಸಿರೆಳೆದಿದ್ದಾರೆ.
ಗುಬ್ಬಿ ಕಂಪನಿ
ಗುಬ್ಬಿ ಕಂಪನಿ ಸೇರಿದಂತೆ ನಾಡಿನ ಪ್ರಮುಖ ವೃತ್ತಿ ನಾಟಕ ಕಂಪನಿಗಳಲ್ಲಿ ದಶಕಗಳ ಕಾಲ ಟಿ.ಆರ್.ಅಶ್ವತ್ಥನಾರಾಯಣ ನಟನೆ ಮಾಡಿದ್ದರು. ಸಿ.ಆರ್.ರಾವ್ ಆಕ್ಷನ್ ಕಟ್ ಹೇಳಿದ್ದ ‘ವಾಲ್ಮೀಕಿ’ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದರು.
ಡಾ.ರಾಜ್ ಕುಮಾರ್ ಕುಟುಂಬಕ್ಕೆ ಆಪ್ತ
‘ಚಂದವಳ್ಳಿಯ ತೋಟ’ ಸಿನಿಮಾದ ಪಾತ್ರ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿತ್ತು. ವರನಟ ಡಾ.ರಾಜ್ ಕುಮಾರ್ ಕುಟುಂಬಕ್ಕೆ ಆಪ್ತರಾಗಿದ್ದ ಟಿ.ಆರ್.ಅಶ್ವತ್ಥನಾರಾಯಣ, ಅವರ ನಿರ್ಮಾಣದ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ‘ಭಲೇ ಹುಚ್ಚ’, ‘ಮಣ್ಣಿನ ಮಗ’, ‘ಕವಿರತ್ನ ಕಾಳಿದಾಸ’, ‘ಜೀವನ ಚೈತ್ರ’ ಅವರು ನಟಿಸಿದ ಪ್ರಮುಖ ಸಿನಿಮಾಗಳು.
ರಾಜ್ ಕುಮಾರ್ ಮತ್ತು ತಂದೆ ಪುಟ್ಟಸ್ವಾಮಯ್ಯ, ರಾಜ್ ಪುತ್ರರ ಜೊತೆ ಮತ್ತು ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ಸೇರಿದಂತೆ ಅಣ್ಣಾವ್ರ ಕುಟುಂಬದ ನಾಲ್ಕು ತಲೆಮಾರಿನ ಜೊತೆ ನಟಿಸಿದ ಖ್ಯಾತಿ ಟಿ.ಆರ್.ಅಶ್ವತ್ಥನಾರಾಯಣ ಅವರದ್ದು.
ಕಂಬನಿ ಮಿಡಿದ ಡಾ.ಶಿವರಾಜ್ ಕುಮಾರ್
ಟಿ.ಆರ್.ಅಶ್ವತ್ಥನಾರಾಯಣ ಅವರ ನಿಧನಕ್ಕೆ ಡಾ.ಶಿವರಾಜ್‌ಕುಮಾರ್ ಕಂಬನಿ ಮಿಡಿದಿದ್ದಾರೆ.
ಲತಾ ಮಂಗೇಶ್ಕರ್ ಇನ್ನಿಲ್ಲ
ಭಾರತೀಯ ಚಿತ್ರರಂಗದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಕೂಡ ಭಾನುವಾರ (ಫೆಬ್ರವರಿ 6) ರಂದು ಇಹಲೋಕ ತ್ಯಜಿಸಿದರು. ಕೋವಿಡ್ 19 ಪಾಸಿಟಿವ್ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಐಸಿಯುನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್ ಸಾವನ್ನಪ್ಪಿದರು.
Read more
[wpas_products keywords=”deal of the day party wear dress for women stylish indian”]