ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ ನಾಲ್ಕು ದಿನ ಮೊದಲು ಈ ತೀರ್ಮಾನ ಹೊರಬಿದ್ದಿದೆ. ಆಯೋಗದ ನಿರ್ಧಾರದಿಂದಾಗಿ ಇದುವರೆಗೆ ವರ್ಚುವಲ್ ಆಗಿಯೇ ಸಭೆ ನಡೆಸುತ್ತಿದ್ದ ರಾಜಕೀಯ ನಾಯಕರು ಇನ್ನು ಬೃಹತ್ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಬಹುದು. ಪಂಜಾಬ್, ಗೋವಾ, ಉತ್ತರಾ ಖಂಡಗಳಲ್ಲಿ ಫೆ.14ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಹೆಚ್ಚಿನ ರ‍್ಯಾಲಿಗಳನ್ನು ಆಯೋಜಿಸಲು ಪಕ್ಷಗಳಿಗೆ ಅವಕಾಶ ಸಿಗುವುದಿಲ್ಲ.
ಮಣಿಪುರದಲ್ಲಿ ಫೆ.27, ಮಾರ್ಚ್ 3ರಂದು ಎರಡು ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಏಳನೇ ಹಂತದ ಮತದಾನ ಮಾರ್ಚ್ 7ರಂದು ನಡೆಯಲಿದೆ. ಹೀಗಾಗಿ ಈ ಎರಡು ರಾಜ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಲು ಪಕ್ಷಗಳಿಗೆ ಸಾಧ್ಯವಾಗುತ್ತದೆ. ‘ಒಳಾಂಗಣದಲ್ಲಿ ನಡೆಯುವ ಸಭೆಗಳಲ್ಲಿ ಶೇ.50ರಷ್ಟು ಆಸನಗಳ ಭರ್ತಿಗೆ ಅವಕಾಶವಿದೆ. ಬಹಿರಂಗವಾಗಿ ನಡೆಯುವ ರ‍್ಯಾಲಿಗಳಲ್ಲಿ ಕ್ರೀಡಾಂಗಣ ಅಥವಾ ಆ ಪ್ರದೇಶದ ವ್ಯಾಪ್ತಿಯ ಶೇ.30ರಷ್ಟು ಭಾಗದಲ್ಲಿ ಜನ ಸೇರಬಹುದು ಇಲ್ಲವೇ ಸಾಮಾಜಿಕ ಅಂತರ ಸೇರಿದಂತೆ ಅಗತ್ಯ ಮುಂಜಾಗ್ರತೆ ಕೈಗೊಂಡು ಬೃಹತ್ ಸಭೆ ನಡೆಸಲು ಆಯಾ ಜಿಲ್ಲಾ ಚುನಾವಣಾ ಅಧಿಕಾರಿ ಅನುಮತಿ ನೀಡಬಹುದು’ ಎಂದು ತಿಳಿಸಿದೆ.
‘ಒಳಾಂಗಣ ಸಭೆಗಳಲ್ಲಿ ಶೇ.50ರಷ್ಟು ಆಸನದಲ್ಲಿ ಮಾತ್ರ ಜನ, ಕಾರ್ಯಕರ್ತರು ಕುಳಿತುಕೊಳ್ಳುವುದನ್ನು ಆಯಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ದೃಢಪಡಿಸಿಕೊಳ್ಳಬೇಕು. ಬಹಿರಂಗ ಸಭೆಗಳಲ್ಲಿ ಸಾಮಾಜಿಕ ಅಂತರ, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ನಿರ್ಮಾಣದ ಕುರಿತು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು. ಇ-ಸುವಿಧಾ ಪೋರ್ಟಲ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡವರಿಗೆ ರ‍್ಯಾಲಿ ನಡೆಸಲು ಅನುಮತಿ ನೀಡಬೇಕು’ ಎಂದು ಸೂಚಿಸಿದೆ. ರೋಡ್‌ಶೋ, ಪಾದಯಾತ್ರೆ ನಿಷೇಧ: ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಭೀತಿ ಮಾತ್ರ ಹಾಗೆಯೇ ಇರುವುದರಿಂದ ಚುನಾವಣೆ ಆಯೋಗವು ರೋಡ್‌ಶೋ, ಪಾದಯಾತ್ರೆ, ಸೈಕಲ್ ಸೇರಿ ಯಾವುದೇ ವಾಹನಗಳ ರ‍್ಯಾಲಿ ಮೇಲೆ ಹೇರಿರುವ ನಿಷೇಧವನ್ನು ಮುಂದುವರಿಸಿದೆ.
Read more
[wpas_products keywords=”deal of the day sale today offer all”]