ಮಾದನ್ನ ಪೇಟ್ ಕಾಲೊನಿಯ ಬಾಘ್–ಇ–ಜಹಾನರಾ ಪ್ರದೇಶದಲ್ಲಿ ಮೇಕೆಗಳ ಬಲಿ ನೀಡಲಾಗಿದೆ. ಸಮಾರಂಭವನ್ನು ಆಯೋಜಿಸಿ, ಮೊದಲು ಓವೈಸಿ ಆವರ ಪ್ರಾಣರಕ್ಷಣೆಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ಬಳಿಕ ಮೇಕೆಗಳ ರುಂಡ ಕತ್ತರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆಗಿದ್ದೇನು?
ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವ ಅಸಾದುದ್ದೀನ್ ಓವೈಸಿ, ಇತ್ತೀಚೆಗೆ ಉತ್ತರಪ್ರದೇಶದ ಮೀರತ್ ನಿಂದ ದೆಹಲಿಗೆ ತೆರಳುವ ವೇಳೆ ಟೋಲ್ ಪ್ಲಾಜಾ ಬಳಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. 3-4 ಸುತ್ತು ಗುಂಡಿನ ದಾಳಿ ನಡೆದರೂ, ಓವೈಸಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು.
ಘಾಜಿಯಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ 4 ಸುತ್ತಿನ ಗುಂಡಿನ ದಾಳಿ ಆರೋಪ!
ಬಾಗ್‌ಪತ್‌ನ ಛಪ್ರೌಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, “ನನ್ನ ಕಾರಿನ ಮೇಲೆ ದಾಳಿ ಮಾಡಲಾಯಿತು, ನಾಲ್ಕು ಗುಂಡು ಹಾರಿಸಲಾಯಿತು, ಗುಂಡು ಹಾರಿಸಿದವರು (ವಾಹನದ ಮೇಲೆ) ಯಾರೆಂದರೆ, ಗಾಂಧೀಜಿಯನ್ನು ಗುಂಡು ಹಾಕಿ ಕೊಂದವರು. ನಾನು ಜನರ ಹಕ್ಕುಗಳ ಬಗ್ಗೆ ಮಾತನಾಡುತ್ತೇನೆ, ಹಾಗಾಗಿ ನನ್ನ ಮೇಲೆ ಬುಲೆಟ್ ಹಾರಿಸಲಾಗಿದೆ.
ನಾನು ಮುಸಲ್ಮಾನರ ಕುರಿತು ಮಾತನಾಡುತ್ತೇನೆ, ಆದ್ದರಿಂದ ಗುಂಡು ಹಾರಿಸಲಾಗಿದೆ, ನಾನು ಸಂವಿಧಾನದ ವ್ಯಾಪ್ತಿಯಲ್ಲಿ ಮಾತನಾಡಿದಾಗ, ದುಷ್ಕರ್ಮಿಗಳು ಅದನ್ನು ಸಹಿಸುವುದಿಲ್ಲ, ಅವರ ಗುಂಡುಗಳು ನನ್ನ ಧ್ವನಿಯನ್ನು ಮೌನಗೊಳಿಸುತ್ತವೆ ಎಂದು ಈ ಮೂರ್ಖರು ಭಾವಿಸುತ್ತಾರೆ, ಒಬ್ಬ ಓವೈಸಿ ಸತ್ತರೆ , ಲಕ್ಷಗಟ್ಟಲೆ ಓವೈಸಿಯನ್ನು ಹುಟ್ಟತ್ತಾರೆ ಎನ್ನುವುದನ್ನು ನಾನೀಗಲೇ ಬರೆದುಕೊಡುತ್ತೇನೆ’ ಎಂದು ಓವೈಸಿ ಹೇಳಿದ್ದರು. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
Read more
[wpas_products keywords=”deal of the day sale today offer all”]