Gadgets
oi-Mutthuraju H M
ಸದ್ಯ ಮೊಬೈಲ್ ಪ್ರತಿಯೊಬ್ಬರ ಅಗತ್ಯ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಫೋನ್ ಜೊತೆಗೆ ಇದೀಗ ಇಯರ್‌ಫೋನ್, ಹೆಡ್‌ಫೋನ್ ಹಾಗೂ ಇಯರ್‌ಬಡ್‌ಗಳು ಸಹ ಅಗತ್ಯ ಎನಿಸುವಂತಾಗಿವೆ. ಹೀಗಾಗಿ ಅನೇಕ ಫೋನ್ ಬಳಕೆದಾರರು ತಮ್ಮ ಫೋನ್‌ಗೆ ಸೂಕ್ತ ಇಯರ್‌ಬಡ್ ಅಥವಾ ಇಯರ್‌ಫೋನ್ ಖರೀದಿ ಮಾಡುತ್ತಾರೆ. ಅದಾಗ್ಯೂ ಸದ್ಯ ಇಯರ್‌ಬಡ್‌ಗಳು ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಂಡಿವೆ. ಈ ಹಲವು ಇಯರ್‌ಬಡ್ ಸಾಧನಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೆ ಇವೆ.

ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಇಯರ್‌ಬಡ್ಸ್‌ಗಳು ಲಭ್ಯ ಆಗುತ್ತವೆ. ಆದರೆ ಜನಪ್ರಿಯ ಕಂಪನಿಗಳ ಇಯರ್‌ಬಡ್ಸ್ ಗಳು ಹೆಚ್ಚು ಗುಣಮಟ್ಟ ಅದರೊಂದಿಗೆ ಅತ್ಯುತ್ತಮ ಆಡಿಯೋ ಕ್ವಾಲಿಟಿ ಹೊಂದಿರುತ್ತವೆ. ಹೀಗಾಗಿ ಅನೇಕ ಗ್ರಾಹಕರು ಪ್ರಮುಖ ಸಂಸ್ಥೆಗಳ ಇಯರ್‌ಬಡ್ ಡಿವೈಸ್ ಖರೀದಿಗೆ ಮುಂದಾಗುತ್ತಾರೆ. ಇನ್ನು ಕೆಲವರು ಬಜೆಟ್ ಬೆಲೆ ಯಲ್ಲಿಯೇ ಸಿಗುವ ಉತ್ತಮ ಆಡಿಯೊ ಇಯರ್‌ಬಡ್ಸ್‌ಗಳನ್ನು ಆಯ್ಕೆ ಮಾಡಿ ಕೊಳ್ಳುತ್ತಾರೆ. ಹಾಗಾದರೇ ಮಾರುಕಟ್ಟೆಯಲ್ಲಿ ಲಭ್ಯ ಇರುವ ಕೆಲವು ಜನಪ್ರಿಯ ಇಯರ್‌ಬಡ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಒಟ್ಟು 252 mAh ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಉತ್ತಮ ಬ್ಯಾಕ್‌ಅಪ್ ನೀಡಲಿದೆ. ಹಾಗೆಯೇ ಇಯರ್‌ಬಡ್ಸ್‌ಗಳು 58mAh ಬ್ಯಾಟರಿ ಸಾಮರ್ಥ್ಯ ಒಳಗೊಂಡಿವೆ. ಬ್ಲೂಟೂತ್ V5.0 ಸಾಮರ್ಥ್ಯ, 2 ಮೈಕ್, ಸೌಲಭ್ಯಗಳನ್ನು ಒಳಗೊಂಡಿದೆ. ಇನ್ನು ಈ ಡಿವೈಸ್ ತೂಕವು ಕೇವಲ 6 ಗ್ರಾಂ ಆಗಿದೆ.
ಬೋಟ್ ಇಯರ್‌ಪೋಡ್
ಆಡಿಯೋ ಡಿವೈಸ್‌ಗಳಲ್ಲಿ ಹೆಸರುವಾಸಿಯಾಗಿರುವ ಬೋಟ್ ಕಂಪನಿಯ ಈ ಇಯರ್‌ಬಡ್ಸ್(311v2) ಬ್ಲೂಟೂತ್ V5.0 ಸಾಮರ್ಥ್ಯವನ್ನು ಪಡೆದಿದ್ದು, ಆಕ್ಟಿವ್ ವಾಯಿಸ್ ಅಸಿಸ್ಟಂಟ್ ಸೌಲಭ್ಯವನ್ನು ಹೊಂದಿದೆ. ನೀರಿನ ಮತ್ತು ಬೆವರಿನ ಪ್ರತಿರೋಧ ಸೌಲಭ್ಯ ಹೊಂದಿದ್ದು, ಜಾಗಿಂಗ್ ಮತ್ತು ಫಿಟ್ನೆಸ್ ಚಟುವಟಿಕೆಗಳನ್ನು ಮಾಡುವಾಗ ಕಂಫರ್ಟ್ ಅನಿಸಲಿದೆ. ಹೆಚ್‌ಡಿ ಆಡಿಯೊ ಕ್ವಾಲಿಟಿ ಪಡೆದಿದ್ದು, 500mAh ಬ್ಯಾಟರಿ ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 3.5ಗಂಟೆಗಳ ಬ್ಯಾಕ್‌ಅಪ್ ನೀಡುತ್ತದೆ. ಆನ್‌ಲೈನ್ ತಾಣಗಳಲ್ಲಿ ಖರೀದಿಸಬಹುದಾಗಿದೆ.

ಜೆಬಿಎಲ್ ಟ್ಯೂನ್ ಇಯರ್‌ಪೋಡ್
ಜೆಬಿಎಲ್ ಸಂಸ್ಥೆಯ ಟ್ಯೂನ್ 120TWS ಇಯರ್‌ಬಡ್ಸ್ ಬ್ಲೂಟೂತ್ V4.2 ಸಾಮರ್ಥ್ಯವನ್ನು ಹೊಂದಿದ್ದು, 73ಗ್ರಾಂ ತೂಕವನ್ನು ಪಡೆದಿದೆ. 85mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಕೇವಲ 15 ನಿಮಿಷದ ಚಾರ್ಜ್ ಸುಮಾರು 1 ಗಂಟೆ ಬಾಳಿಕೆ ನೀಡಲಿದೆ. ಬ್ಲ್ಯಾಕ್, ಬ್ಲೂ, ಗ್ರೀನ್, ವೈಟ್, ಪಿಂಕ್, ಯೆಲ್ಲೊ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಆನ್‌ಲೈನ್ ತಾಣದಲ್ಲಿ ಸಿಗಲಿದೆ
Blaupunkt BTW01 (ಬ್ಲೂಪಂಕ್ಟ್)
ಬ್ಲೂಪಂಕ್ಟ್ ಇಯರ್‌ಬಡ್ ಡಿವೈಸ್ 590mAh ಬ್ಯಾಟರಿ ಲೈಫ್ ಹೊಂದಿದ್ದು, ಸುಮಾರು 6 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಸೌಲಭ್ಯ ನೀಡಲಿದೆ. ಹೆಚ್‌ಡಿ ಆಡಿಯೋ ಬೆಂಬಲ ಪಡೆದಿರುವ ಈ ಡಿವೈಸ್ ಗೂಗಲ್ ಅಸಿಸ್ಟಂಟ್ ಹಾಗೂ ಆಪಲ್ ಸಿರಿ ವಾಯಿಸ್ ಅಸಿಸ್ಟಂಟ್ ಸೌಲಭ್ಯಗಳನ್ನು ಒಳಗೊಂಡಿದೆ. ಆನ್‌ಲೈನ್ ತಾಣದಲ್ಲಿ ಖರೀದಿಗೆ ಲಭ್ಯ.
ಸ್ಕಲ್‌ಕ್ಯಾಂಡಿ ಪುಶ್ ಇಯರ್‌ಬಡ್ಸ್
ಈ ಇಯರ್‌ಬಡ್ಸ್‌ನ ಮುಖ್ಯ ಆಕರ್ಷಣೆ ಎಂದರೇ ಬ್ಯಾಟರಿ ಲೈಫ್ ಆಗಿದ್ದು, ಒಟ್ಟು 12 ಗಂಟೆಗಳ ಬ್ಯಾಕ್‌ಅಪ್ ಪಡೆದಿದೆ. ಫಿಟ್‌ಫಿನ್ ಇಯರ್ ಜೆಲ್ ಡಿಸೈನ್ ಹೊಂದಿರುವ ಈ ಡಿವೈಸ್ ಕಿವಿಗಳಲ್ಲಿ ಕಂಫರ್ಟ್ ಆಗಿ ಕುಳಿತುಕೊಳ್ಳುತ್ತವೆ. ಡಿವೈಸ್‌ನಲ್ಲಿ ಬಟನ್‌ಗಳ ರಚನೆಯಿದ್ದು, ಅವುಗಳು ವಾಯಿಸ್ ಅಸಿಸ್ಟಂಟ್ ಮತ್ತು ಸೌಂಡ್ ನಿಯಂತ್ರಿಸಲು ಅನುಕೂಲ ಒದಗಿಸುತ್ತವೆ.
Best Mobiles in India
English summary
These Popular Wireless Earbuds Available at User Friendly Price.