Karnataka news paper

ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ; ಬಿಜೆಪಿ ಶಾಸಕನನ್ನು ಬ್ಲ್ಯಾಕ್‌ಮೇಲ್ ಮಾಡಿದ ನಾಲ್ವರ ಬಂಧನ


ಬೆಂಗಳೂರು: ಬಿಜೆಪಿ ಪಕ್ಷದ ಶಾಸಕರೊಬ್ಬರಿಗೆ ಫೇಸ್‌ಬುಕ್‌ ಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದ ಮೇರೆಗೆ ವಿಧಾನಸೌಧ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

‘ಉತ್ತರ ಕರ್ನಾಟಕದ ಶಾಸಕರೊಬ್ಬರು ನನಗೆ ಅನ್ಯಾಯ ಮಾಡಿದ್ದಾರೆ. ಅವರಿಂದ ನನಗೆ ಮಗು ಆಗಿದೆ’ ಎಂದು ಫೇಸ್‌ಬುಕ್‌ನಲ್ಲಿ ಮಹಿಳೆ ಬರೆದುಕೊಂಡಿದ್ದಾರೆ. ಅಲ್ಲದೆ, ಸಂತ್ರಸ್ತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೇಸ್‌ಬುಕ್‌ ಪೇಜ್‌ಗೆ ಟ್ಯಾಗ್‌ ಮಾಡಿ ತನಗಾಗಿರುವ ಅನ್ಯಾಯ ಕುರಿತು ಬರೆದುಕೊಂಡಿದ್ದು, ಸಾರ್ವಜನಿಕವಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ವಿಧಾನಸೌಧ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದು ವಿಚಾರಣೆ ಮುಂದುವರಿಸಿದ್ದಾರೆ.
ಬೆಳಗಾವಿ: ಯಡಿಯೂರಪ್ಪ ಯುಗ ಮುಗಿದಿದೆ, ಕರ್ನಾಟಕಕ್ಕೆ ಎರಡನೇ ನಾಯಕತ್ವದ ಅಗತ್ಯ ಇದೆ ಎಂದ ಯತ್ನಾಳ
ಅಗಿದ್ದೇನು:
‘ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಲವ್‌ ಮಾಡಿ ಮದುವೆಯಾಗುವುದಾಗಿ ನಂಬಿಸಿ ಮಗು ಜನಿಸಿದ ನಂತರ ವಂಚಿಸಿದ್ದಾನೆ. ನಾನು ನಿಮ್ಮನ್ನು ಭೇಟಿ ಮಾಡಲು ಬಂದರೂ ಆಗಲಿಲ್ಲ. ನನಗೆ ನ್ಯಾಯ ಕೊಡಿಸಬೇಕು’ ಎಂದು ಮಹಿಳೆಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೇಸ್‌ಬುಕ್‌ ಪೇಜ್‌ನಲ್ಲೇ ಬರೆದು ನೀಡಿ ಅಳಲು ತೋಡಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು, ಆತ್ಮನಿರ್ಭರ ಅರ್ಥವ್ಯವಸ್ಥೆ ಕುರಿತು ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಮೂರು ದಿನಗಳ ಹಿಂದೆ ಪೋಸ್ಟ್‌ ಮಾಡಿದ್ದರು. ಸಿಎಂ ಅವರ ಈ ಪೋಸ್ಟ್‌ಗೆ ಮಹಿಳೆ ಈ ರೀತಿ ಉತ್ತರಿಸಿದ್ದು ವೈರಲ್‌ ಆಗಿತ್ತು. ‘ಮದುವೆಯಾಗುವುದಾಗಿ ಶಾಸಕರು ನನಗೆ ವಂಚಿಸಿದ್ದಾರೆ. ಈಗ ನನಗೆ ಒಂದು ಮಗು ಜನಿಸಿದೆ. ಈ ಶಾಸಕರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಅದಕ್ಕಾಗಿ ನನಗೆ ಕಾನೂನು ನೆರವು ಬೇಕಾಗಿದೆ. ಅದು ಸಿಕ್ಕ ಬಳಿಕ ಮುಂದಿನ ಹೋರಾಟ ನಡೆಸಲಾಗುವುದು. ನ್ಯಾಯ ಸಿಗುವ ತನಕವೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದರು.



Read more

[wpas_products keywords=”deal of the day sale today offer all”]