Karnataka news paper

ಧರ್ಮ ಸಂಸದ್ ನಲ್ಲಿನ ಹೇಳಿಕೆಗಳು ಹಿಂದುತ್ವವಲ್ಲ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ 


The New Indian Express

ನಾಗ್ಪುರ: ಇತ್ತೀಚೆಗೆ ಧರ್ಮ ಸಂಸದ್ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಬಂದ ಹೇಳಿಕೆಗಳು ಹಿಂದೂ ಹೇಳಿಕೆಗಳಲ್ಲ, ಹಿಂದುತ್ವವನ್ನು ಆಚರಿಸುವವರು ಆ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. 

ಲೋಕಮಾತ್ ಮೀಡಿಯಾ ಸಮೂಹದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಹಿಂದುತ್ವ ಹಾಗೂ ರಾಷ್ಟ್ರೀಯ ಸಮಗ್ರತೆ ಎಂಬ ವಿಷಯದ ಬಗ್ಗೆ  ಮಾತನಾಡಿರುವ ಮೋಹನ್ ಭಾಗ್ವತ್,  ಇತ್ತೀಚೆಗಷ್ಟೇ ಧರ್ಮ ಸಂಸದ್ ನಲ್ಲಿ ಬಂದ ಹೇಳಿಕೆಗಳು ಹಿಂದೂಗಳ ಶಬ್ದಗಳಲ್ಲ. ಯಾರಾದರೂ ಕೋಪದಲ್ಲಿ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ. ಆರ್ ಎಸ್ಎಸ್ ಅಥವಾ ಹಿಂದುತ್ವವನ್ನು ಪಾಲಿಸುವ ಯಾರೇ ಆಗಿರಲಿ ಅದರಲ್ಲಿ ನಂಬಿಕೆ ಹೊಂದಿರುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಚತ್ತೀಸ್ ಗಢದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರು ಮಹಾತ್ಮ ಗಾಂಧಿ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿ ನಾಥುರಾಮ್ ಗೋಡ್ಸೆ ಅವರನ್ನು ಸ್ತುತಿಸುತ್ತಿದ್ದ ಪ್ರಕರಣ ಹಾಗೂ ಉತ್ತರಾಖಂಡ್ ನಲ್ಲಿ ಡಿಸೆಂಬರ್ ನಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಭಾಗವಹಿಸಿದ್ದವರು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ಭಾಷಣ ಮಾಡಿದ್ದರ ಪ್ರಕರಣಗಳ ಬಗ್ಗೆ ಮೋಹನ್ ಭಾಗ್ವತ್ ತಮ್ಮ ಅಭಿಪ್ರಾಯವನ್ನು ಭಾಷಣದಲ್ಲಿ ವ್ಯಕ್ತಪಡಿಸಿದ್ದಾರೆ. 

ಮುಂದುವರೆದು ಮಾತನಾಡಿರುವ ಆರ್ ಎಸ್ ಎಸ್ ಮುಖ್ಯಸ್ಥರು, ಸಾವರ್ಕರ್ ಸಹ ಹಿಂದೂ ಸಮುದಾಯ ಒಗ್ಗೂಡಬೇಕು, ಸಂಘಟಿತವಾಗಬೇಕು ಎಂದು ಹೇಳಿದ್ದರೆ, ಅದು ಭಗವದ್ಗೀತೆಯ ಬಗ್ಗೆ ಮಾತಾಡುತ್ತದೆಯೇ ಹೊರತು ಮತ್ತೋರ್ವರನ್ನು ಹಿಂಸಿಸುವ ಬಗ್ಗೆಯಲ್ಲ ಎಂದು ಮೋಹನ್ ಭಾಗ್ವತ್ ತಿಳಿಸಿದ್ದಾರೆ. 

ಇನ್ನು ಇದೇ ವೇಳೆ ಭಾರತ ಹಿಂದೂ ರಾಷ್ಟ್ರವಾಗುವ ಹಾದಿಯಲ್ಲಿದೆಯೇ? ಎಂಬ ಬಗ್ಗೆಯೂ ಮಾತನಾಡಿರುವ ಅವರು, “ಹಿಂದೂ ರಾಷ್ಟ್ರವೆಂಬುದು ಸೃಷ್ಟಿಸುವುದಲ್ಲ. ಯಾರು ಒಪ್ಪಲಿ, ಬಿಡಲಿ ಹಿಂದೂ ರಾಷ್ಟ್ರ ಇದ್ದೇ ಇದೆ” ಎಂದು ಹೇಳಿದ್ದಾರೆ.



Read more

[wpas_products keywords=”deal of the day”]