The New Indian Express
ನವದೆಹಲಿ: ದಕ್ಷಿಣ ಕೊರಿಯಾ ಮೂಲದ ಬಹುರಾಷ್ಟ್ರೀಯ ಕಾರು ಉತ್ಪಾದಕ ಸಂಸ್ಥೆ ಹ್ಯುಂಡೈ ಮೋಟಾರ್ ಇಂಡಿಯಾ ವಿರುದ್ಧ ಭಾರತದ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ.
ಟ್ವಿಟರ್ ನಲ್ಲಿ ಭಾನುವಾರದಂದು #BoycottHyundai ಎಂಬ ಅಭಿಯಾನ ಟ್ರೆಂಡಿಂಗ್ ಆಗಿದ್ದು, ಸ್ವತಃ ಸಂಸ್ಥೆ ಸ್ಪಷ್ಟನೆ ನೀಡಿ ನೆಟ್ಟಿಗರನ್ನು ಸಮಾಧಾನಪಡಿಸಲು ಪ್ರಯತ್ನಿಸಬೇಕಾಯಿತು.
ಆಗಿದ್ದಿಷ್ಟು.. ಪಾಕಿಸ್ತಾನದಲ್ಲಿನ ಹ್ಯುಂಡೈ ಡೀಲರ್ @hyundaiPakistanOfficial ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಕಾಶ್ಮೀರ ಐಕ್ಯತಾ ದಿನ (ಒಗ್ಗಟ್ಟಿನ ದಿನ) ಕ್ಕೆ ಬೆಂಬಲ ಸೂಚಿಸಿ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಇಷ್ಟಾಗಿದ್ದೇ ತಡ, ಭಾರತದಲ್ಲಿ ಟ್ವಿಟರ್ ಬಳಕೆಗಾದರರು #BoycottHyundai ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ರೆಂಡ್ ಸೃಷ್ಟಿಸಿ, ಭಾರತದಲ್ಲಿ ಜನತೆ ಹ್ಯುಂಡೈ ಸಂಸ್ಥೆಯ ಯಾವುದೇ ಉತ್ಪನ್ನಗಳನ್ನೂ ಖರೀದಿಸಕೂಡದೆಂದು ಪ್ರಚಾರ ಪ್ರಾರಂಭಿಸಿ ಕರೆ ನೀಡಿದರು.
ಈ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಹ್ಯುಂಡೈ ಮೋಟಾರ್ಸ್ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, ರಾಷ್ಟ್ರೀಯತೆಯನ್ನು ಗೌರವಿಸುವ ನೀತಿಗೆ ತಾನು ಎಂದಿಗೂ ಬದ್ಧವಾಗಿರುವುದಾಗಿ ಘೋಷಿಸಿದ್ದು ಭಾರತದ ಮಾರುಕಟ್ಟೆಗೂ ಬದ್ಧತೆಯನ್ನು ಪುನರುಚ್ಚರಿಸಿದೆ.
“ಹ್ಯುಂಡೈ ಮೋಟಾರ್ ಇಂಡಿಯಾ ಭಾರತದ ಮಾರುಕಟ್ಟೆಗೆ 25 ವರ್ಷಗಳಿಂದ ಬದ್ಧವಾಗಿದ್ದು, ರಾಷ್ಟ್ರೀಯತೆಯನ್ನು ಗೌರವಿಸುವ ನೀತಿಗೆ ಎಂದಿಗೂ ಬದ್ಧವಾಗಿದ್ದೇವೆ” ಎಂದು ಸ್ಪಷ್ಟಪಡಿಸಿದೆ.
ಅನಪೇಕ್ಷಿತ ಸಾಮಾಜಿಕ ಜಾಲತಾಣವನ್ನು ಹ್ಯುಂಡೈ ಮೋಟಾರ್ ಇಂಡಿಯಾಗೆ ತಳುಕುಹಾಕುವುದು ಈ ಶ್ರೇಷ್ಠ ರಾಷ್ಟ್ರಕ್ಕೆ ನಮ್ಮ ಬದ್ಧತೆ ಹಾಗೂ ಸೇವೆಗೆ ನೋವುಂಟು ಮಾಡುತ್ತದೆ ಎಂದೂ ಸಂಸ್ಥೆ ಹೇಳಿದೆ.
“ನಾವು ಸಂವೇದನಾರಹಿತ ಸಂವಹನಕ್ಕೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ, ಈ ರೀತಿ ಏನೇ ನಡೆದರೂ ಅದನ್ನು ಕಠಿಣವಾಗಿ ಖಂಡಿಸುತ್ತೇವೆ” ಎಂದು ಸಂಸ್ಥೆ ತಿಳಿಸಿದೆ.
Read more
[wpas_products keywords=”deal of the day”]