Karnataka news paper

ಹೊಸ ಔಡಿ A8L ಕಾರ್ ಖರೀದಿಸಿದ ನಟಿ ಕಿಯಾರ ಅಡ್ವಾಣಿ


ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ನಟಿ ಕಿಯಾರ ಅಡ್ವಾಣಿ ಹೊಸ ಔಡಿ ಸೆಡಾನ್ ಕಾರ್ ಖರೀದಿಸಿದ್ದಾರೆ.

ಔಡಿ A8L ಲಕ್ಷುರಿ ಕಾರ್ ಇದಾಗಿದ್ದು, ದೇಶದಲ್ಲಿ ₹1.56 ಕೋಟಿ (ಎಕ್ಸ್ ಶೋರೂಂ) ದರ ಹೊಂದಿದೆ.

ಕಿಯಾರ ಅಡ್ವಾಣಿ ಅವರಿಗೆ ಕಾರ್ ಹಸ್ತಾಂತರ ಮಾಡುತ್ತಿರುವ ಫೋಟೊವನ್ನು ಔಡಿ ಇಂಡಿಯಾ ಟ್ವೀಟ್ ಮಾಡಿದೆ.

ಅಲ್ಲದೆ, ಔಡಿ ಇಂಡಿಯಾದ ರಾಯಭಾರಿಯಾಗಿಯೂ ಕಿಯಾರ ಅಡ್ವಾಣಿ ನಿಯೋಜಿಸಲ್ಪಟ್ಟಿದ್ದಾರೆ.

2020ರ ಫೆಬ್ರುವರಿಯಲ್ಲಿ ಔಡಿ A8L ಲಕ್ಷುರಿ ಸೆಡಾನ್ ಕಾರು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.

ಹೊಸ ಕಾರ್ ಜತೆ ಕಿಯಾರ ಅಡ್ವಾಣಿ ಅವರು ನಿಂತುಕೊಂಡಿರುವ ಫೋಟೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.



Read More…Source link