Online Desk
ಚಾಮರಾಜನಗರ: ಈ ಬಾರಿ ರಾಜ್ಯದಲ್ಲಿ ನಿಗದಿಯಂತೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.
ಚಾಮರಾಜನಗರದ ರಾಮುಸಮುದ್ರದಲ್ಲಿ ದೀನಬಂಧು ಸಂಸ್ಥೆ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ದೀನಬಂಧು ವಿಜ್ಞಾನ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಅನೇಕ ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಿದ್ದರೂ ರಾಜ್ಯದಲ್ಲಿ ಶೇ.99 ರಷ್ಟು ಶಾಲೆಗಳು ತೆರೆದಿವೆ, ಮಕ್ಕಳ ಹಾಜರಾತಿಯೂ ಉತ್ತಮವಾಗಿದೆ. ನಿಗದಿಯಂತೆಯೇ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದರು.
ಮಕ್ಕಳು ವಿಜ್ಞಾನವನ್ನು ಪ್ರಯೋಗದ ಮೂಲಕ ಕಲಿಯಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಎಲ್ಲ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪನೆಗೆ ಒಂದೊಂದು ಶಾಲೆಗೆ 20 ಲಕ್ಷ ರೂ. ನೀಡುತ್ತಿದ್ದಾರೆ. ಸರ್ಕಾರ ಎನ್ ಜಿ ಒಗಳ ಸಹಕಾರದೊಂದಿಗೆ ಪ್ರತಿ ತಾಲೂಕಿನಲ್ಲಿ ಒಂದೊಂದು ವಿಜ್ಞಾನ ಸಂಕೀರ್ಣ ಸ್ಥಾಪನೆ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಚಾಮರಾಜನಗರದ ರಾಮಸಮುದ್ರದಲ್ಲಿ ದೀನಬಂಧು ಸಂಸ್ಥೆಯ ಶಾಲೆ ಆವರಣದಲ್ಲಿ ದೀನಬಂಧು ವಿಜ್ಞಾನ ಸಂಕೀರ್ಣ ಉದ್ಘಾಟಿಸಲಾಯಿತು.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀಸ್ವಾಮಿ ಮುಕ್ತಿದಾನಂದಜಿ, ಶಾಸಕರಾದ ಪುಟ್ಟರಂಗಶೆಟ್ಟಿ, ದೀನಬಂಧು ಟ್ರಸ್ಟ್ನ ಗೌರವ ಕಾರ್ಯದರ್ಶಿ ಜಿ.ಎಸ್ ಜಯದೇವ್ ಹಾಗೂ ಸಾಹಿತಿ ಹನೂರು ಕೃಷ್ಣಮೂರ್ತಿ ಉಪಸ್ಥಿತರಿದ್ದರು pic.twitter.com/bpGSNsyN1F
— B.C Nagesh (@BCNagesh_bjp) February 6, 2022
Read more
[wpas_products keywords=”deal of the day”]