Karnataka news paper

ಯೋಗಿ ಆದಿತ್ಯನಾಥ್ ಗಂಗಾಸ್ನಾನ ಮಾಡಲಿಲ್ಲ ಏಕೆಂದರೆ ಗಂಗೆ ಕಲುಷಿತ ಅಂತ ಅವರಿಗೆ ಗೊತ್ತು: ಅಖಿಲೇಶ್ ಯಾದವ್


Source : PTI

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಭೇಟಿಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತೊಮ್ಮೆ ಬಿಜೆಪಿ ನಾಯಕರನ್ನು ಗುರಿಯಾಗಿಸಿದ್ದಾರೆ. 

ಪ್ರಧಾನಿ ಮೋದಿಯವರು ಗಂಗಾನದಿಯಲ್ಲಿ ಸ್ನಾನ ಮಾಡಿದರು ಎಂಬ ನೆಪದಲ್ಲಿ ಅಖಿಲೇಶ್ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿದ್ದಾರೆ. ಗಂಗಾ ನದಿಯನ್ನು ಸ್ವಚ್ಛಗೊಳಿಸಿಲ್ಲ ಎಂಬುದು ಸಿಎಂ ಯೋಗಿ ಅವರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರು ಗಂಗೆಯಲ್ಲಿ ಸ್ನಾನ ಮಾಡಿಲ್ಲ ಎಂದು ಹೇಳಿದರು. ಕಾಶಿ ವಿಶ್ವನಾಥ ಧಾಮ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಗಂಗಾನದಿಯಲ್ಲಿ ಸ್ನಾನ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಜೊತೆ ಸಿಎಂ ಯೋಗಿ ಕೂಡ ಉಪಸ್ಥಿತರಿದ್ದರು. ಆದರೆ ಅವರು ಗಂಗಾನದಿಯಲ್ಲಿ ಸ್ನಾನ ಮಾಡಲಿಲ್ಲ. ನಂತರ ಅವರು ಟ್ವಿಟ್ ಮಾಡಿದ ಫೋಟೋದಲ್ಲಿ ಪ್ರಧಾನಿಯವರು ಗಂಗಾನದಿಯಲ್ಲಿ ಸೊಂಟದ ಆಳದ ನೀರಿನಲ್ಲಿ ನಿಂತು ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಗಂಗಾಮಾತೆಯ ಮಡಿಲಲ್ಲಿ ಹೊಸ ಕಾಶಿಯ ಸೃಷ್ಟಿಕರ್ತ ಎಂದು ಈ ಫೋಟೋದೊಂದಿಗೆ ಬರೆಯಲಾಗಿದೆ. 800 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಾಶಿ ವಿಶ್ವನಾಥ ಧಾಮದ ಉದ್ಘಾಟನೆ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

‘ದೇಶದ ಸಾಂಸ್ಕೃತಿಕ ರಾಜಧಾನಿ ವಾರಣಾಸಿಯಲ್ಲಿ ಕೊಳಕು ಪರಿಸ್ಥಿತಿ ಒಂದು ಕಳಂಕದಂತಿತ್ತು. ಮಹಾತ್ಮ ಗಾಂಧಿ ಇಲ್ಲಿಗೆ ಬಂದು ಇಲ್ಲಿನ ಅವ್ಯವಸ್ಥೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು ಎಂದು ಯೋಗಿ ಹೇಳಿದರು. ಅಂದಿನಿಂದ ಅನೇಕ ಸರ್ಕಾರಗಳು ಬಂದವು. ಗಾಂಧೀಜಿಯವರ ಹೆಸರಿನಲ್ಲಿ ಅಧಿಕಾರಕ್ಕೆ ಬರುವುದು, ಆದರೆ ಗಾಂಧೀಜಿಯವರ ಕನಸು ಈಗ ನನಸಾಗಿದೆ, ಇದು ಮೊದಲ ಬಾರಿಗೆ ಸಂಭವಿಸಿದೆ ಎಂದು ಹೇಳಿದ್ದರು. 



Read more