Karnataka news paper

ಕಾಂಗ್ರೆಸ್‌ನ 14 ಪರಿಷತ್‌ ಸದಸ್ಯರ ಅಮಾನತು; ಸಭಾಪತಿ ಬಸವರಾಜ ಹೊರಟ್ಟಿ ಆದೇಶ


ಹೈಲೈಟ್ಸ್‌:

  • ಕಾಂಗ್ರೆಸ್‌ನ 14 ಪರಿಷತ್‌ ಸದಸ್ಯರನ್ನು ಅಮಾನತುಗೊಳಿಸಿದ ಸಭಾಪತಿ
  • ಸಭಾಪತಿಗಳ ಆದೇಶ ಉಲ್ಲಂಘಿಸಿದ ಹಿನ್ನೆಲೆ ಒಂದು ದಿನದ ಮಟ್ಟಿಗೆ ಅಮಾನತು
  • ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಅವರಿಂದ ಅಮಾನತು ಆದೇಶ

ಬೆಳಗಾವಿ: ವಿಧಾನ ಪರಿಷತ್‌ನ 14 ಕಾಂಗ್ರೆಸ್‌ ಸದಸ್ಯರನ್ನು ಅಮಾನತುಗೊಳಿಸಿ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ. ವಿಪಕ್ಷ ನಾಯಕ ಎಸ್‌ಆರ್ ಪಾಟೀಲ್‌, ಬಿಕೆ ಹರಿಪ್ರಸಾದ್‌, ಸಿಎಂ ಇಬ್ರಾಹಿಂ, ಪಿಆರ್‌ ರಮೇಶ್‌, ಯುಬಿ ವೆಂಕಟೇಶ್‌ ಸೇರಿ 14 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ಸಚಿವ ಬೈರತಿ ಬಸವರಾಜ್‌ ಅವರ ವಿರುದ್ಧದ ಭೂ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ 14 ಪರಿಷತ್‌ ಸದಸ್ಯರನ್ನು ಅಮಾನತು ಮಾಡಲಾಗಿದೆ. ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ವಿಧಾನ ಪರಿಷತ್‌ನಲ್ಲಿ ಪಟ್ಟುಹಿಡಿದಿದ್ದರು. ಆದರೆ, ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಒಂದು ಗಂಟೆಗಳ ಕಾಲ ಪರಿಷತ್‌ನಲ್ಲಿ ಚರ್ಚೆ ನಡೆದಿದೆ.

ಆದರೆ, ಇನ್ನು ಚರ್ಚೆಗೆ ಅವಕಾಶ ನೀಡಬೇಕೆಂದು ಹಾಗೂ ಸಚಿವ ಬೈರತಿ ಬಸವರಾಜ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಸಭಪತಿ ಬಸವರಾಜ ಹೊರಟ್ಟಿ ಎಷ್ಟೇ ಹೇಳಿದರೂ ಕೇಳದ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕಾರಣದಿಂದ ಕೋಪಗೊಂಡ ಸಭಾಪತಿ ಬಸವರಾಜ್‌ ಹೊರಟ್ಟಿ ಕಾಂಗ್ರೆಸ್‌ನ 14 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದೇವೆ; ಹೊರಟ್ಟಿ
ಎಸ್‌ಆರ್‌ ಪಾಟೀಲ್‌, ಬಿಕೆ ಹರಿಪ್ರಸಾದ್‌, ಎಂ ನಾರಾಯಣಸ್ವಾಮಿ, ಎಂಎ ಗೋಪಾಲಸ್ವಾಮಿ, ನಾಸಿರ್‌ ಅಹ್ಮದ್‌, ಸಿಎಂ ಲಿಂಗಪ್ಪ, ಯುಬಿ ವೆಂಕಟೇಶ್‌, ಅರವಿಂದ್‌ ಅರಳಿ, ಪ್ರತಾಪ್‌ ಚಂದ್ರ ಶೆಟ್ಟಿ, ಸಿಎಂ ಇಬ್ರಾಹಿಂ, ಹರೀಶ್‌ ಕುಮಾರ್‌, ವೀಣಾ ಅಚ್ಚಯ್ಯ, ಆರ್‌ಬಿ ತಿಮ್ಮಾಪುರ ಮತ್ತು ಬಸವರಾಜ ಇಟಗಿ ಅವರನ್ನು ಅಮಾನತುಗೊಳಿಸಿ ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶಿಸಿದ್ದಾರೆ.

ವಿಧಾನ ಪರಿಷತ್‌ನ 14 ಕಾಂಗ್ರೆಸ್‌ ಸದಸ್ಯರ ಅಮಾನತು ಮಾಡಿದರೂ ಸದನದ ಬಾವಿಗಿಳಿದು ಗಲಾಟೆ ಮಾಡುತ್ತಿರುವುದು ಮುಂದುವರಿದಿತ್ತು. ಸದನದಿಂದ ಹೊರ ಹೋಗುವಂತೆ ಸೂಚಿಸಿದರೂ ಗಲಾಟೆ ಕಂಡು ಬಂದಿತ್ತು. ಸದನದ ಬಾವಿಯಿಂದ ಕದಲದ ಕಾಂಗ್ರೆಸ್‌ ಸದಸ್ಯರು, ಭೂತದ ಬಾಯಲ್ಲಿ ಭಗವದ್ಗೀತೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಶಾಲೆ ಏನ್‌ ನಿಮ್‌ ಅಪ್ಪಂದಾ?: ಸಚಿವ ಮಾಧುಸ್ವಾಮಿ ಕೆಂಡ
ಇನ್ನು, ಸಭಾಪತಿ ಕೊಠಡಿಯಲ್ಲಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ಆರ್ ಪಾಟೀಲ್ ಕೂಡ ಚರ್ಚೆ ನಡೆಸಿದ್ದರು. ನಿಮ್ಮ ಸದಸ್ಯರ ವರ್ತನೆ ಸರಿ ಇಲ್ಲ ಎಂದು ಹೊರಟ್ಟಿ ಅವರು ಎಸ್‌ಆರ್‌ ಪಾಟೀಲ್ ಮೇಲೆ ಗರಂ ಆಗಿದ್ದರು. ಇನ್ನು, ಅಮಾನತುಗೊಳಗಾದವರ ಮಾತುಗಳು ಯಾವುದು ರೆಕಾರ್ಡ್ಗೆ ಹೋಗಬಾರದು ಎಂದು ಸಭಾಪತಿ ಅವರಿಗೆ ತೇಜಸ್ವಿನಿ ಗೌಡ ಮನವಿ ಮಾಡಿದ್ದಾರೆ.

ಮೇಲ್ಮನೆಯಲ್ಲಿ ಬಹುಮತ ಸಾಧಿಸಲು ಬಿಜೆಪಿ ಸಫಲ: ‘ಕೈ’ – ‘ತೆನೆ’ ಕಿತ್ತಾಟದಲ್ಲಿ ಗೆದ್ದವರು ಯಾರು..?!
ಕಾಂಗ್ರೆಸ್‌ ಸದಸ್ಯರ ಗಲಾಟೆ ಹಿನ್ನೆಲೆ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ. ಕೂಡಲೇ ಕ್ರಮ ಜಾರಿಗೊಳಿಸಬೇಕು. ಮಾರ್ಷಲ್ಸ್ ಕರೆಸಿ ಸದನದಿಂದ ಹೊರಹಾಕಲಿ. ಈ ತಮಾಷೆಯನ್ನ ಜಾಸ್ತಿ ಹೊತ್ತು ನೋಡಬಾರದು. ಧಿಕ್ಕಾರ ಧಿಕ್ಕಾರ ಎಂದು ಆಯನೂರು ಮಂಜುನಾಥ ಪರಿಷತ್ನಲ್ಲಿ ಗರಂ ಆಗಿದ್ದಾರೆ. ಗಲಾಟೆ ನಿಲ್ಲದ ಹಿನ್ನೆಲೆ ಗುರುವಾರ ಬೆಳಗ್ಗೆ 11ಕ್ಕೆ ಮುಂದೂಡಿ ಸಭಾಪತಿ ಆದೇಶಿಸಿದರು.



Read more