ಹೈಲೈಟ್ಸ್:
- ಸುಮಾರು 325 ಕೋಟಿ ರೂ. ಮೌಲ್ಯದ ದೇಶೀಯ ಮತ್ತು ರಫ್ತು ಆರ್ಡರ್‌ಗಳನ್ನು ಸ್ವೀಕರಿಸಿದ ಜೆನಸ್ ಪವರ್ ಇನ್‌ಫ್ರಾಸ್ಟ್ರಕ್ಚರ್ಸ್ ಕಂಪನಿ
- ಎಸ್.ಸಿ.ಜಿ ಇಂಟರ್‌ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜತೆಗೆ ಜಂಟಿ ಉದ್ಯಮಕ್ಕೆ ಒಪ್ಪಂದ ಮಾಡಿಕೊಂಡ ಬಿಗ್‌ಬ್ಲಾಕ್ ಕನ್‌ಸ್ಟ್ರಕ್ಷನ್ ಕಂಪನಿ
- ಹೊಸ ಕಂಪನಿಯಲ್ಲಿ ಬಿಗ್‌ಬ್ಲಾಕ್‌ಗೆ ಶೇ. 48, ಎಸ್‌ಸಿಜಿ ಇಂಟರ್‌ನ್ಯಾಷನಲ್ ಇಂಡಿಯಾ ಕಾರ್ಪೊರೇಷನ್‌ಗೆ ಶೇ. 52 ಷೇರು ಪಾಲು
“ಈ ಆರ್ಡರ್ ಮುಂದಿನ ತ್ರೈಮಾಸಿಕದಲ್ಲಿ ನಮ್ಮ ಆದಾಯಕ್ಕೆ ಸಾಕ್ಷಷ್ಟು ಗೋಚರತೆಯನ್ನು ನೀಡುತ್ತದೆ. ಇದು ನಮ್ಮ ಉದ್ಯಮಕ್ಕೆ ಆರ್ಡರ್‌ಗಳು ಹೆಚ್ಚಾಗುವ ಸಶಕ್ತ ಆರಂಭವನ್ನು ಸೂಚಿಸುತ್ತದೆ. ಗ್ಯಾಸ್ ಮೀಟರ್‌ಗಳ ಮುಂಬರುವ ವಿಭಾಗದಲ್ಲಿ ಆರ್ಡರ್‌ಗಳನ್ನು ಸ್ವೀಕರಿಸಲು ನಾವು ವಿಶೇಷವಾಗಿ ಸಂತೋಷಪಡುತ್ತೇವೆ. ಇದು ನಮ್ಮ ಆರ್ಡರ್ ಬುಕ್ಕಿಂಗ್ ಅನ್ನು ವೈವಿಧ್ಯಗೊಳಿಸಲಿದೆ. ರಫ್ತು ವಿಭಾಗದ ಆರ್ಡರ್‌ಗಳು ಉತ್ತಮ ಮಾರ್ಜಿನ್ ಪ್ರೊಫೈಲ್ ಮತ್ತು ನಗದು ಸಂಚಲನದೊಂದಿಗೆ ಲಾಭದಾಯಕವಾಗಿರಲಿವೆ. ಮುಂದಿನ ದಿನಗಳಲ್ಲಿ ಟೆಂಡರ್ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ನಿರೀಕ್ಷೆಯಲ್ಲಿದ್ದೇವೆ” ಎಂದು ಜೆನಸ್ ಪವರ್ ಇನ್‌ಫ್ರಾಸ್ಟ್ರಕ್ಚರ್ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಕುಮಾರ್ ಅಗರ್‌ವಾಲ್ ವಿನಿಮಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದ್ದಾರೆ.
ಬಿಗ್‌ಬ್ಲಾಕ್ ಕನ್‌ಸ್ಟ್ರಕ್ಷನ್ – ಕಂಪನಿಯು ಎಸ್.ಸಿ.ಜಿ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SCG INTL INDIA) ಜತೆಗೆ ಜಂಟಿ ಉದ್ಯಮಕ್ಕೆ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಘೋಷಿಸಿದೆ. ಇದು ವ್ಯಾಪಾರ ಕಾರ್ಯಾಚರಣೆಗಳ ವಿಸ್ತರಣೆಗಾಗಿ, ಸಿಯಾಮ್ ಸಿಮೆಂಟ್ ಪಬ್ಲಿಕ್ ಕಂಪನಿಯ ಸಂಪೂರ್ಣ ಸ್ವಾಮ್ಯ ಹೊಂದಿರುವ ಅಂಗಸಂಸ್ಥೆಯಾಗಿದೆ. ಹೊಸ ಜಂಟಿ ಉದ್ಯಮವು ಗುಜರಾತಿನಲ್ಲಿ ಅಂದಾಜು 2.6 ಮಿಲಿಯನ್ ಚದರ ಮೀಟರ್ (ಸುಮಾರು 2,50,000 ಘನ ಮೀಟರ್‌ಗಳು) ಹಗುರ ಕಾಂಕ್ರೀಟ್ ಪ್ಯಾನಲ್‌ಗಳು, ಬ್ಲಾಕ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳಲು ಯೋಜಿಸಿದೆ. ಗುಜರಾತ್‌ನಲ್ಲಿ ನಿರ್ಮಾಣ ವಲಯವು ದೊಡ್ಡ ಉದ್ಯಮವಾಗಿದ್ದು, ಬೆಳವಣಿಗೆಯನ್ನೂ ಕಾಣುತ್ತಿದೆ.
ಹೊಸ ಕಂಪನಿಯಲ್ಲಿ ಬಿಗ್‌ಬ್ಲಾಕ್ ಶೇ. 48 ಹಾಗೂ ಎಸ್‌ಸಿಜಿ ಇಂಟರ್‌ನ್ಯಾಷನಲ್ ಇಂಡಿಯಾ ಕಾರ್ಪೊರೇಷನ್ ಶೇ. 52 ಪಾಲನ್ನು ಹೊಂದಲಿದೆ. ಈ ಯೋಜನೆಯ ಒಟ್ಟು ಮೌಲ್ಯ 89.1 ಕೋಟಿ ರೂಪಾಯಿ. ಗುಜರಾತಿನ ಪ್ಲಾಂಟ್ ನಿರ್ಮಾಣವು ಒಂದು ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಂತರ ವಾಣಿಜ್ಯ ಚಟುವಟಿಕೆ ಆರಂಭವಾಗಲಿದೆ.
52 ವಾರಗಳ ಗರಿಷ್ಠ ಮಟ್ಟ ತಲುಪಿದ ಷೇರುಗಳು: ಪರ್ಲ್ ಪಾಲಿಮರ್ಸ್, ರಾಜಶ್ರೀ ಪಾಲಿಪ್ಯಾಕ್, ಭಾರ್ತೀಯ ಇಂಟರ್‌ನ್ಯಾಶನಲ್, ಎಕ್ಸ್‌ಪ್ಲಿಯೊ ಸೊಲ್ಯೂಷನ್ಸ್, ಟೋಟಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ಸ್ ಮತ್ತು ಆಗ್ರೋ ಫಾಸ್ ಇಂಡಿಯಾ ಇಂದು 52 ವಾರಗಳ ಗರಿಷ್ಠ ಹಂತವನ್ನು ಸಾಧಿಸಿವೆ. ಈ ಸ್ಮಾಲ್‌ಕ್ಯಾಪ್ ಸ್ಟಾಕ್‌ಗಳು 2021ರ ಡಿಸೆಂಬರ್ 16ರಂದು ಗುರುವಾರ ಮಾರುಕಟ್ಟೆಯಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ.
ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.
ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.