ಲೀಗ್‌ನಲ್ಲಿ ಈವರೆಗೆ ಒಟ್ಟು 19 ಪಂದ್ಯಗಳನ್ನು ಆಡಿರುವ ಬೆಂಗಳೂರು ಬುಲ್ಸ್ 9 ಗೆಲುವು, 8 ಸೋಲು ಮತ್ತೆರಡು ಡ್ರಾ ಫಲಿತಾಂಶಗಳೊಂದಿಗೆ ಒಟ್ಟು 55 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಗೆಲುವಿಗಾಗಿ ಬುಲ್ಸ್ ಕೊನೇ ಕ್ಷಣದವರೆಗೆ ಹೋರಾಟ ನಡೆಸಿತು. ಆದರೆ, ಎದುರಾಳಿ ತಂಡದ ಪ್ರಮುಖ ರೇಡರ್ ಪರ್ದೀಪ್ ಕುಮಾರ್ ತಮ್ಮ ಕೊನೇ ರೇಡ್‌ನಲ್ಲಿ 4 ಅಂಕಗಳನ್ನು ತಂದುಕೊಡುವ ಮೂಲಕ ಜಯಂಟ್ಸ್ ಜಯದ ರೂವಾರಿಸಿ ಎನಿಸಿದರು. ಗುಜರಾತ್ 40-36 ಅಂಕಗಳಿಂದ ಜಯ ದಕ್ಕಿಸಿಕೊಂಡರೆ, ಕೊನೇ ಕ್ಷಣದ ಎಡವಟ್ಟಿನ ಕಾರಣ ಬುಲ್ಸ್‌ಗೆ ಕಣ್ಣೀರಲ್ಲಿ ಕೈ ತೊಳೆಯುವಂತ್ತಾಯಿತು.
ರೋಚಕ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟ ಬೆಂಗಳೂರು ಬುಲ್ಸ್!
ಪರ್ದೀಪ್ ಕುಮಾರ್ ಪಂದ್ಯದಲ್ಲಿ ಒಟ್ಟಾರೆ 14 ಅಂಕಗಳನ್ನು ಕಲೆಹಾಕಿದರು. ಜಯಂಟ್ಸ್ ತಂಡದ ಕಪ್ತಾನ ಸುನಿಲ್ ಕುಮಾರ್ ಡಿಫೆನ್ಸ್‌ನಲ್ಲಿ ಗಮನ ಸೆಳೆದು ಬಲ ಮೂಲೆಯಿಂದ 5 ಅಂಕಗಳನ್ನು ಎಳೆದುಕೊಡುವಲ್ಲಿ ಸಫಲರಾದರು.
ಇನ್ನು ಬುಲ್ಸ್ ಈ ಸೋಲಿಗೆ ತನ್ನನ್ನೇ ಹೊಣೆಯನ್ನಾಗಿಸಿಕೊಳ್ಳಬೇಕು. ಏಕೆಂದರೆ ಪಂದ್ಯದ ಬಹುಪಾಲು ಸಮಯ ಪ್ರಾಬಲ್ಯ ಮೆರದು ಅಂತಿಮ ಗಳಿಗೆಯಲ್ಲಿ ಯಮಾರಿತ್ತು. ಅಂತಿಮ ಕ್ಷಣದ ಒತ್ತಡ ನಿಭಾಯಿಸಲುವಲ್ಲಿ ವಿಫಲವಾಗಿ 4 ಅಂಕಗಳನ್ನು ಕೈಚೆಲ್ಲಿ ಬೆಪ್ಪಾಯಿತು. ತಂಡದ ಪರ ರೇಡರ್‌ಗಳಾದ ನಾಯಕ ಪವನ್ ಕುಮಾರ್ ಸೆಹ್ರಾವತ್ ಮತ್ತು ಭರತ್ ಸೂಪರ್ 10 ಸಾಧನೆ ಮೆರೆದರೂ ಕೂಡ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಯುಪಿ ಯೋಧಾ ಕಟ್ಟಿದ ಭದ್ರ ಕೋಟೆಯಲ್ಲಿ ಸೆರೆಯಾದ ಬೆಂಗಳೂರು ಬುಲ್ಸ್!
ಪಂದ್ಯದ ಮೊದಲಾರ್ಧದಲ್ಲಿ ಪವನ್ ಕುಮಾರ್ ಭರ್ಜರಿ ದಾಳಿ ಸಂಘಟಿಸಿ ಬುಲ್ಸ್‌ಗೆ ಮೇಲುಗೈ ತಂದುಕೊಟದ್ಟರೂ 20 ನಿಮಿಷಗಳ ಮುಕ್ತಾಯಕ್ಕೆ ಇತ್ತಂಡಗಳು ಬಹುತೇಕ ಸಮಬಲ ಸಾಧಿಸಿದ್ದವು. ಒಂದು ಹಂತದಲ್ಲಿ ಈ ಪಂದ್ಯ ಡ್ರಾ ಫಲಿತಾಂಶ ಕಾಣುವುದು ಖಚಿತ ಎಂದೇ ಅಂದಾಜಿಸಲಾಗಿತ್ತು. ಆದರೆ ಅಂತಿಮ ಗಳಿಗೆಯಲ್ಲಿ ಜಯಂಟ್ಸ್ ಜಯ ಕಸಿದುಕೊಂಡಿದೆ.
ಬೆಂಗಳೂರು ಬುಲ್ಸ್ ತನ್ನ ಕೊನೆಯ 5 ಪಂದ್ಯಗಳಲ್ಲಿ ಮೂರು ಸೋಲು, ಜೊತೆಗೆ ಮತ್ತೊಂದು ಡ್ರಾ ಸಾಧಿಸಿ ಕೇವಲ ಒಂದು ಜಯ ಮಾತ್ರವೇ ದಕ್ಕಿಸಿಕೊಳ್ಳಲು ಯಶಸ್ವಿಯಾಗಿದೆ. ಅದೇ ಗುಜರಾತ್ ಜಯಂಟ್ಸ್ ಲೀಗ್‌ನಲ್ಲಿ ತನ್ನ 6ನೇ ಜಯದೊಂದಿಗೆ ನಾಕ್‌ಔಟ್ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ. ಸದ್ಯ ಜಯಂಟ್ಸ್ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದೆ.
‘ಪವನ’ ಶಕ್ತಿಯಿಂದ ಡೆಲ್ಲಿ ಸದ್ದಡಗಿಸಿದ ಬೆಂಗಳೂರು ಬುಲ್ಸ್!
ಸೋಮವಾರದ ಪಂದ್ಯಗಳು
ಗುಜರಾತ್ ಜಯಂಟ್ಸ್ – ಜೈಪುರ ಪಿಂಕ್ ಪ್ಯಾಂಥರ್ಸ್
ಬೆಂಗಾಲ್ ವಾರಿಯರ್ಸ್ – ತೆಲುಗು ಟೈಟನ್ಸ್
Read more
[wpas_products keywords=”deal of the day sale today offer all”]