Karnataka news paper

ನಿಗದಿಗಿಂತ ಒಂದು ವಾರ ಮೊದಲೇ ಪ್ರದರ್ಶನ: ಫೆ. 18ಕ್ಕೆ ‘ಬೈ ಟು ಲವ್’ ಬಿಡುಗಡೆ


ಬಜಾರ್ ಹೀರೋ ಧನ್ವೀರ್ ಹಾಗೂ ಹರಿ ಸಂತು…ಸುಪ್ರಿತ್ ಈ ತ್ರಿವಳಿಗಳ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಬೈ ಟು ಲವ್…’  ಫೆಬ್ರವರಿ 25ರ ಬದಲಾಗಿ ಫೆಬ್ರವರಿ 18ರಂದು ತೆರೆ ಕಾಣಲಿದೆ.

ಬೈ ಟು ಲವ್ ಸಿನಿಮಾ ಆರಂಭದಿಂದ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಪೋಸ್ಟರ್, ಟೀಸರ್ ಹಾಗೂ ಹಾಡುಗಳು… ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆ ಹುಟ್ಟಿಸಿರುವ ‘ಬೈ ಟು ಲವ್’ ಸಿನಿಮಾದಲ್ಲಿ ಧನ್ವೀರ್ ಹಾಗೂ ಶ್ರೀಲೀಲಾ ಜೋಡಿಯ ಮ್ಯಾಜಿಕ್‌ ನೋಡಬೇಕು ಎಂದು ಹೇಳಿದೆ ಚಿತ್ರತಂಡ. ಈ ಹಿಂದೆ ಮಾಸ್‌ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್‌, ಈ ‘ಬೈ ಟು ಲವ್‌’ನಲ್ಲಿ ಲವರ್‌ ಬಾಯ್‌ ಪಾತ್ರ ಮಾಡಿದ್ದಾರೆ. ಶ್ರೀಲೀಲಾ ಮುದ್ದು ಮುದ್ದಾಗಿ ಮಲೆನಾಡ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್ಸ್ ಅಡಿ ನಿಶಾ ವೆಂಕಟ್ ಕೋಣಂಕಿ ‘ಬೈ ಟು ಲವ್‌’ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.



Read More…Source link

[wpas_products keywords=”deal of the day party wear for men wedding shirt”]