Karnataka news paper

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪನ


PTI

ಹೊಸದಿಲ್ಲಿ:  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ. ಇಂದು ಬೆಳಗ್ಗೆ 9.49ಕ್ಕೆ ಈ ಕಂಪನದ ಅನುಭವವಾಗಿದೆ.

ಈ ಮಧ್ಯೆ, ಪಾಕಿಸ್ತಾನದಲ್ಲೂ 7.3 ತೀವ್ರತೆಯ ಭೂಕಂಪದ ಆಗಿರುವ ಬಗ್ಗೆ ವರದಿ ಬಂದಿದೆ. ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಿಂದ ಸುಮಾರು 189 ಕಿ.ಮೀ. ದೂರದಲ್ಲಿದೆ. ಈ ಸ್ಥಳವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಹಿಂದೂಕುಶ್ ಬೆಟ್ಟಗಳ ಸಮೀಪದಲ್ಲಿದೆ.

181 ಕಿಮೀ ಆಳದಲ್ಲಿ 36.34 ಡಿಗ್ರಿ ಉತ್ತರ ಮತ್ತು ರೇಖಾಂಶ 71.05 ಡಿಗ್ರಿ ಪೂರ್ವದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಭಾರತದಲ್ಲಿರುವ ನೋಯ್ಡಾ ಮತ್ತು ಚಂಡೀಗಢ ಹಾಗೂ ಕಣಿವೆ ರಾಜ್ಯದಲ್ಲಿ ಭೂಕಂಪದ ಭಯದಿಂದ ಜನರು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಆದರೆ, ಇದುವರೆಗೆ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.



Read more

[wpas_products keywords=”deal of the day”]