Karnataka news paper

ಭಾರತದಲ್ಲಿ ಗೂಗಲ್, ಫೇಸ್ ಬುಕ್ ವಾರ್ಷಿಕ ಆದಾಯ 23,313 ಕೋಟಿ ರೂ.!; ಸಂಸತ್ತಿಗೆ ಮಾಹಿತಿ


Source : Online Desk

ನವದೆಹಲಿ: ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳಲ್ಲಿ ಬರುವ ಸುದ್ದಿಗಳನ್ನು ಹೋಸ್ಟ್ ಮಾಡುವ ಮೂಲಕ ಫೇಸ್‌ಬುಕ್ , ಗೂಗಲ್‌ನಂತಹ ಟೆಕ್ ಸಂಸ್ಥೆಗಳಿಗೆ ಬರುವ ಆದಾಯ ಎಷ್ಟು ನಿಮಗೆ ತಿಳಿದಿದೆಯೇ?  ಈ ಕುರಿತು ದೇಶದ ಸಂಸತ್ತಿನಲ್ಲಿ ಉತ್ತರ ಲಭಿಸಿದೆ.

ಭಾರತದಲ್ಲಿ ಡಿಜಿಟಲ್ ಜಾಹೀರಾತು ಮಾರುಕಟ್ಟೆಯ ಶೇ 75 ರಷ್ಟು ಪಾಲು ಗೂಗಲ್, ಫೇಸ್‌ಬುಕ್ ವಶಪಡಿಸಿಕೊಂಡಿವೆ. ವರ್ಷಕ್ಕೆ ಗೂಗಲ್ 13,887 ಕೋಟಿ ರೂಪಾಯಿ, ಫೇಸ್‌ಬುಕ್ ವರ್ಷಕ್ಕೆ 9,326 ಕೋಟಿ ರೂಪಾಯಿ ಗಳಿಸುತ್ತಿದೆ. ಅಂದರೆ ಒಟ್ಟು 23,313 ಕೋಟಿ ರೂ. ಇದು ದೇಶದ ಟಾಪ್ 10 ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳ ಒಟ್ಟು ಆದಾಯಕ್ಕಿಂತ (ಕೇವಲ 8,396 ಕೋಟಿ ರೂ.) ಹೆಚ್ಚು’ ಎಂದು ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ ವಿವರಿಸಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಸುಶೀಲ್ ಮೋದಿ ವಿಷಯ ಪ್ರಸ್ತಾಪಿಸಿದರು.

ಫೇಸ್‌ಬುಕ್ ತನ್ನ ಆದಾಯದ ಶೇ 90ರಷ್ಟನ್ನು ತನ್ನ ಅಂತರರಾಷ್ಟ್ರೀಯ ಅಂಗ ಸಂಸ್ಥೆಗೆ, ಗೂಗಲ್ ಇಂಡಿಯಾ ತನ್ನ ಆದಾಯದ ಶೇ 87 ರಷ್ಟನ್ನು ಮಾತೃ ಸಂಸ್ಥೆಗೆ ವರ್ಗಾಯಿಸುತ್ತಿದೆ. ಆದಾಯದ ಒಂದಷ್ಟು ಭಾಗವನ್ನು ದೇಶದ ಸಾಂಪ್ರದಾಯಿಕ ಮಾಧ್ಯಮಗಳಿಗೆ ನೀಡಬೇಕು ಎಂದು ಸುಶೀಲ್ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಂಪ್ರದಾಯಿಕ ಮಾಧ್ಯಮಗಳ ಕಂಟೆಂಟ್‌ ಬಳಸಿ ಆ ಮೂಲಕ ಜಾಹೀರಾತಿಗಳಿಂದ ಶತಕೋಟಿ ಗಳಿಸುವ ಟೆಕ್ ಸಂಸ್ಥೆಗಳ ವ್ಯವಸ್ಥೆ ಮೇಲ್ವಿಚಾರಣೆ ನಡೆಸಲು ಹೊಸ ಸ್ವತಂತ್ರ ನಿಯಂತ್ರಕ ಸಂಸ್ಥೆ ಸ್ಥಾಪಿಸಬೇಕೆಂದು ಅವರು ಅವರು ಸಲಹೆ ನೀಡಿದರು.



Read more…