ಕಾರವಾರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸುಧಾರಣಾ ವಿರೋಧಿ ಎನ್ನುವುದು ಅವರ ನಡವಳಿಕೆ ಮೂಲಕ ವ್ಯಕ್ತವಾಗುತ್ತಿದೆ. ಯಾಕೆ ಇಸ್ಲಾಂನಲ್ಲಿ ಪರಿವರ್ತನೆಯಾಗುತ್ತಿಲ್ಲ? ಯಾಕೆ ಹೆಣ್ಣು ಮಕ್ಕಳು ಶೋಷಣೆಯ ಕೇಂದ್ರ ಬಿಂದುವಾಗಿರಬೇಕು? ಬುರ್ಖಾ, ಹಿಜಾಬ್ ಶೋಷಣೆಯ ಅಭಿವ್ಯಕ್ತತೆಯನ್ನು ತೋರಿಸುತ್ತದೆ. ಬದಲಾವಣೆಗೆ ಒಪ್ಪಿಕೊಳ್ಳಬೇಕು ಎಂದರು.
ಸೌದಿ ಅರೇಬಿಯಾ, ಇಂಡೋನೇಷ್ಯಾದಂಥ ಮುಸ್ಲಿಂ ಬಾಹುಳ್ಯದ ರಾಷ್ಟ್ರದಲ್ಲೇ ಇವೆಲ್ಲ ಕಡ್ಡಾಯವಿಲ್ಲ. ಆಯಾ ಶಾಲೆಯ ಸಮವಸ್ತ್ರ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಶಿಕ್ಷಣ ಕಾಯ್ದೆ ಹೇಳುತ್ತದೆ. ಸಿದ್ದರಾಮಯ್ಯನವರ ವಕೀಲರ ಬುದ್ಧಿ ಎಲ್ಲಿ ಮುಸುಕಾಗಿದೆ? ನೀವ್ಯಾಕೆ ಮತೀಯವಾದದ ಭೂತ ಹೊಕ್ಕಂತೆ ಹಿಜಾಬ್ ಪರ ವಕಾಲತ್ತು ವಹಿಸಿ ಮಾಡುತ್ತಿದ್ದೀರಿ? ಮತೀಯವಾದದ ಭೂತ ಹೊಕ್ಕಂತೆ ಆಡಿದರೆ ಮತ ಬರುತ್ತದೆಂಬ ದುರಾಸೆಗೆ ತಾಲಿಬಾನ್ ವಾದವನ್ನು ಕಾಲೇಜುಗಳಲ್ಲೂ ತರಲು ಪ್ರಯತ್ನ ಮಾಡುತ್ತಿದ್ದೀರಿ. ಇದರಿಂದ ಸಮಾಜಕ್ಕೆ, ದೇಶಕ್ಕೆ ಯಾವತ್ತೂ ಒಳ್ಳೆಯದಾಗುವುದಿಲ್ಲ ಎಂದರು.
ಹಿಜಾಬ್‌ಗೆ ಕಡ್ಡಾಯವಾಗಿ ಅವಕಾಶ ನೀಡಬೇಕೆಂದು ಭಾರತ್ ಎಜ್ಯುಕೇಶನ್ ಸೊಸೈಟಿ ವಿರುದ್ಧ ಫರೀದಾ ಸೈಯದ್ ಖಾನ್ ಎಂಬುವರು 2001ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಆಯಾ ಶಾಲೆಯಲ್ಲಿ ಯಾವ ಸಮವಸ್ತ್ರ ನಿಯಮವಿದೆಯೋ ಅದನ್ನೇ ಪಾಲಿಸಬೇಕೆಂದು ತೀರ್ಪು ನೀಡಿತ್ತು ಎಂದು ಸಿ. ಟಿ. ರವಿ ಹೇಳಿದರು.
ನಾಳೆ ಪೊಲೀಸ್ ಆದವರು ನನ್ ಧರ್ಮ, ನಾನು ಬುರ್ಖಾ ಹಾಕಿಕೊಂಡು ಬರುತ್ತೇನೆ ಎಂದರೆ ಕಳ್ಳ ಯಾರು, ಪೊಲೀಸ್ ಯಾರು ಗೊತ್ತಾಗುವುದು ಹೇಗೆ? ಪೊಲೀಸರಿಗೊಂದು ಸಮವಸ್ತ್ರ ಇರುತ್ತದೆ. ಹಾಗೆ ಶಾಲೆಯಲ್ಲೂ ಮತೀಯವಾದ, ಪ್ರತ್ಯೇಕತಾವಾದ ಬೆಳೆಸುವುದಾಗಲಿ ಸಮಾಜದ ದೃಷ್ಟಿಯಿಂದ, ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿಯ ಮತೀಯವಾದಕ್ಕೆ ಪ್ರೋತ್ಸಾಹ ನೀಡುವುದನ್ನು ಕಾಂಗ್ರೆಸ್ ಬಿಡಬೇಕು ಎಂದರು.
ಶಾಲೆಯಲ್ಲೂ ವಿಭಜನೆಯ ಸೂತ್ರವನ್ನು ಅನುಸರಿಸಲು ಹೊರಡೋದು ಭಾರತದ ವಿಭಜನೆಗಿಂತಲೂ ಅಪಾಯಕಾರಿ. ಭಾರತವನ್ನು ಹೇಗೆ ವಿಭಜಿಸಿದರೋ, ಅದಕ್ಕಿಂತ ದೊಡ್ಡ ಅಪಾಯಕಾರಿ ಈ ಸಮಾಜವನ್ನು, ಶಾಲೆಯನ್ನು, ಶಾಲೆಯ ಮಕ್ಕಳಲ್ಲಿ ಮತೀಯವಾದದ ಭೂತವನ್ನು ತುಂಬೋದು. ಹಿಜಾಬ್ ಎನ್ನುವುದು ಮುಸ್ಲಿಂ ಮಹಿಳೆಯರ ಶೋಷಣೆಯ ಸಂಕೇತವಷ್ಟೇ ಅಲ್ಲ, ಮತೀಯವಾದದ ಸಂಕೇತವೂ ಹೌದು ಎಂದರು ಸಿ. ಟಿ. ರವಿ.
ಹೀಗೆ ಶಾಲೆಗಳಲ್ಲಿ ವಿಭಜನೆ ಮಾಡುವ ಸಂಚಿನ ಹಿಂದೆ ತುಕಡೆ ಗ್ಯಾಂಗ್‌ಗಳೆಲ್ಲ ಕಾಂಗ್ರೆಸ್‌ಗೆ ಸೇರಿದ್ದೇ ಕಾರಣ. ಅವರ ಹಿಡನ್ ಅಜೆಂಡಾ ಪ್ರಕಾರ ಅದನ್ನು ಅನುಷ್ಠಾನಗೊಳಿಸಲು ಶಾಲೆಯನ್ನೂ ಅಖಾಡವಾಗಿ ಬಳಸಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಸಮವಸ್ತ್ರ ಇರಲೇಬೇಕು. ಕಾಂಗ್ರೆಸ್ ನಾಯಕರುಗಳಿಗೆ ಅಷ್ಟೂ ಗೊತ್ತಿಲ್ಲದಿದ್ದರೆ ಅವರಿಗೆ ಹಿಡಿದಿರುವ ತಾಲಿಬಾನ್ ಭೂತವನ್ನು ಓಡಿಸಲು ರಾಜ್ಯ, ದೇಶದ ಜನ ಈಗಾಗಲೇ ಪಾಠ ಕಲಿಸಿದ್ದಾರೆ, ಮತ್ತೂ ಪಾಠ ಕಲಿಸಬೇಕಾಗುತ್ತದೆ ಎಂದರು.
ಫ್ರಾನ್ಸ್, ನೆದರ್‌ಲ್ಯಾಂಡ್, ಚೀನಾ ಏನು ಮಾಡಿದೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ. ಚೀನಾ ಕೇವಲ ಬುರ್ಖಾವನ್ನಷ್ಟೇ ಅಲ್ಲ, ಮದರಸಾವನ್ನೂ ಬ್ಯಾನ್ ಮಾಡಿದೆ. ದೇಶಕ್ಕೆ ಅಪಾಯಕಾರಿಯಾದರೆ ನಾವೂ ಮದರಸಾವನ್ನೂ ಬ್ಯಾನ್ ಮಾಡಬೇಕಾಗುತ್ತದೆ. ಭಯೋತ್ಪಾದನೆಯ ಬೀಜವನ್ನು ಮದರಸಾ ಬಿತ್ತೋಕೆ ಪ್ರಾರಂಭಿಸಿದರೆ, ಅದನ್ನಿಟ್ಟುಕೊಂಡು ಇನ್ನಷ್ಟು ಜನ ಸೈನಿಕರು, ನಾಗರಿಕರನ್ನು ಬಲಿ ಕೊಡಬೇಕಾ? ತಾಲಿಬಾನ್‌ನವರು ಎಕೆ- 47 ಹಿಡಿದ ಮೇಲೆ ಜಗತ್ತಿಗೆ ಗೊತ್ತಾಯಿತು. ಆದರೆ ಹಿಡಿಯುವಂತೆ ಪ್ರಚೋದಿಸಿದ್ದು ಯಾರು? ಅದನ್ನು ಅಧ್ಯಯನ ಮಾಡಿದರೆ ಮದರಸಾ ಇರಬೇಕೋ, ಬೇಡವೋ ಎಂದು ನೀವೇ ಹೇಳುತ್ತೀರಿ ಎಂದರು ಸಿ. ಟಿ. ರವಿ..
Read more
[wpas_products keywords=”deal of the day sale today offer all”]