Karnataka news paper

ಮೋದಿ ಪರ ಅಲೆ ಇದೆ, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಬಿಎಸ್‌ವೈ ವಿಶ್ವಾಸ


ಕಾರವಾರ (ಉತ್ತರ ಕನ್ನಡ): ಪ್ರಧಾನಿ ಮೋದಿಯವರ ಪರವಾಗಿ ಅಲೆ ಇದೆ, ಮೋದಿಯವರ ಪರ ಜನ ಇದ್ದಾರೆ. ಅವರ ಆಶೀರ್ವಾದದಿಂದ ಬರುವ ಎಲ್ಲಾ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರವಾರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಗಳಲ್ಲಿ ಬಹಳ ದೊಡ್ಡ ಅಂತರದಲ್ಲಿ ನಾವು ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದರು.

ಮಾಧ್ಯಮಗಳಲ್ಲಿ ಏನೇ ವರದಿ ಬರಲಿ, ಗೋವಾದಲ್ಲೂ ಸಹ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ಬೆಳೆ ಹಾನಿಗೊಳಗಾದ ಉತ್ತರ ಕನ್ನಡದ ರೈತರಿಗೆ ಶೀಘ್ರವೇ ಪರಿಹಾರ: ಬಿಎಸ್‌ವೈ ಭರವಸೆ
ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಅಲೆ ಇರುವುದರಿಂದ ನಮಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ಎಲ್ಲಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಗೆದ್ದು, ಸರ್ಕಾರ ರಚನೆ ಮಾಡಲಿದೆ. ಕೋವಿಡ್ ಕೊಂಚ ಕಡಿಮೆಯಾದ ಮೇಲೆ ರಾಜ್ಯದಲ್ಲಿಯೂ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿ ಪಕ್ಷವನ್ನ ಬಲಪಡಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 135- 140 ಸೀಟುಗಳನ್ನು ಗೆಲ್ಲಲೇ ಬೇಕು. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಈ ಸಂಬಂಧ ಶನಿವಾರಷ್ಟೇ ಪಕ್ಷದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದೇನೆ ಎಂದು ತಿಳಿಸಿರುವ ಯಡಿಯೂರಪ್ಪ, ನಿಶ್ಚಿತವಾಗಿ ಬಿಜೆಪಿ ಮುಂಬರುವ ದಿನದಲ್ಲೂ ರಾಜ್ಯದಲ್ಲಿ ಸರ್ಕಾರವನ್ನ ರಚನೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಿಲ್ಲಿ ಪ್ರವಾಸಕ್ಕೂ ಮುನ್ನ ಕುತೂಹಲ ಮೂಡಿಸಿದ ಯಡಿಯೂರಪ್ಪ- ಸಿಎಂ ಬೊಮ್ಮಾಯಿ ಭೇಟಿ!
ಇನ್ನು ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸಿಎಂ ಬಿಎಸ್‌ವೈ, ದೇಶ ಕಂಡ ಅಪ್ರತಿಮ ಗಾಯಕಿ ಲತಾ ಮಂಗೇಶ್ಕರ್ ಅವರು ದೈವಾಧೀನರಾಗಿರುವುದು ಇಡೀ ದೇಶದ ಜನರಿಗೆ ನೋವು ತರುವ ಸಂಗತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ. ಕೋಟ್ಯಂತರ ಜನ ಲತಾ ಮಂಗೇಶ್ಕರ್ ಅವರ ಸಂಗೀತವನ್ನ ಕೇಳಿ ಆನಂದ ಪಡುತ್ತಿದ್ದರು. ಅವರಿಗೆಲ್ಲ ನೋವಾಗಿದೆ. ಅವರಿಗೆ ನೋವು ಭರಿಸುವ ಶಕ್ತಿ ಭಗವಂತ ಕೊಡಲಿ ಎಂದರು.

ಇನ್ನು ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಭುಗಿಲೆದ್ದಿರುವ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ಮಾಜಿ ಸಿಎಂ ಯಡಿಯೂರಪ್ಪ ನಿರಾಕರಿಸಿದರು.

ನನ್ನ ಜೀವಮಾನದಲ್ಲಿ ಯಡಿಯೂರಪ್ಪಗೆ ದ್ರೋಹ ಮಾಡಲ್ಲ: ಸಚಿವ ನಾರಾಯಣಗೌಡ



Read more

[wpas_products keywords=”deal of the day sale today offer all”]