Karnataka news paper

ಸಿ.ಎಂ ಇಬ್ರಾಹಿಂ ಭಾಷಣ ಕೇಳಲು ಹೋಗುತ್ತಿದ್ದದ್ದು ನಿಜ! ಸಿದ್ದರಾಮಯ್ಯ


ಬೆಂಗಳೂರು: ಸಿ.ಎಂ ಇಬ್ರಾಹಿಂ ಭಾಷಣ ಕೇಳಲು ಹೋಗುತ್ತಿದ್ದದ್ದು ನಿಜ! ಟೌನ್ ಹಾಲ್ ನಲ್ಲಿ ಭಾಷಣ ಕೇಳಲು ಹೋಗಿದ್ದೆ. ಇದನ್ನು ನಾನೇ ಇಬ್ರಾಹಿಂ ಗೆ ಹೇಳಿದ್ದೆ. ಆಗ ವಿದ್ಯಾರ್ಥಿ ಆಗಿದ್ದಾಗ ಸೈಕಲ್ ಇರಲಿಲ್ಲ, ಮೋಟಾರ್‌ ಸೈಕಲ್ ಇರಲಿಲ್ಲ ಎಂದರು.

ನನ್ನ ಭಾಷಣ ಕೇಳಲು ಸಿದ್ದರಾಮಯ್ಯ ಮೋಟರ್ ಸೈಕಲ್ ನಲ್ಲಿ ಬರ್ತಿದ್ದರು ಎಂಬ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಮತ್ತು ನನ್ನ ಸಂಬಂಧ ಮುಗಿದ ಅಧ್ಯಾಯ! ಸಿ.ಎಂ ಇಬ್ರಾಹಿಂ

ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರವಾಗಿ ಮಾತನಾಡಿ,ಇಬ್ರಾಹಿಂ ಪಾರ್ಟಿ ಬಿಡುವುದಿಲ್ಲ. ಅವರು ಎನಾದ್ರೂ ಮಾಡಲಿ ಅದಕ್ಕೆ ಸಂಬಂಧ ಇಲ್ಲ. ಅವರು ಪಕ್ಷ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಸಿಎಂ ಇಬ್ರಾಹಿಂ ಬಳಿ ಮಹಾದೇವಪ್ಪ ಮಾತಾಡಿದ್ದಾರೆ. ಕೋಪ ಕಡಿಮೆ ಆಗ್ಲಿ, ಅಮೇಲೆ ಭೇಟಿ ಮಾಡ್ತೀನಿ. ಕೋಪ ಇರುತ್ತೆ ವಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲ ಅಂತ ಕೋಪ ಇರುತ್ತದೆ ಎಂದರು.

ವೀರೇಂದ್ರ ಪಾಟೀಲ್ ಜೊತೆ ಇಬ್ರಾಹಿಂ ಕಾಂಗ್ರೆಸ್ ಜೊತೆ ಹೋಗಿದ್ದರು.ಅಮೇಲೆ ನನ್ನ ಜೊತೆ ಕಾಂಗ್ರೆಸ್ ಬಂದರು.ಬಿಡಿ ಇಬ್ರಾಹಿಂ ನನ್ನ ಸ್ನೇಹಿತ ಜಾಸ್ತಿ ಪ್ರಶ್ನೆ ಕೇಳಬೇಡಿ ಎಂದರು.

ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಕನಸು ಇದೆ ಅಂತ ಕುಮಾರಸ್ವಾಮಿ ಹೇಳಿಕೆಯ ಪ್ರಶ್ನೆಗೆ, ಯಾರು ಕುಮಾರಸ್ವಾಮಿ? ಪ್ರಶ್ನಿಸಿದರು. ಈ ವೇಳೆಎಚ್ ಡಿ ಕುಮಾರಸ್ವಾಮಿ ಸಾರ್ ಎಂದಿದ್ದಕ್ಕೆ, ಓ ಆ ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ ಎಂದರು.

ನಾನು ಹಿಜಾಬ್ ಬಗ್ಗೆ ಮಾತನಾಡಿದ್ದು ನಿಜ, ಆದ್ರೆ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ.ಅವರು ಯಾರು ನನ್ನ ಬಗ್ಗೆ ಮಾತನಾಡೋಕೆ? ಅವರದ್ದು ಒಂದು ರಾಜಕೀಯ ಪಕ್ಷದ ನಾಯಕರು ನಾನು ಅವರ ಬಗ್ಗೆ ಮಾತನಾಡಲ್ಲ. ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ.? ಎಂದು ಮರು ಪ್ರಶ್ನೆ ಹಾಕಿದರು.



Read more

[wpas_products keywords=”deal of the day sale today offer all”]