Karnataka news paper

2022–23ನೇ ಸಾಲಿನ ಬಜೆಟ್‌ಗೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ!


The New Indian Express

ಬೆಂಗಳೂರು: ಬಿಬಿಎಂಪಿ ಚುನಾವಣೆ ಶೀಘ್ರವೇ ನಡೆಯುವ ಸಾಧ್ಯತೆಗಳಿದ್ದು, ಇದರ ನಡುವೆಯೇ ಬಿಬಿಎಂಪಿ ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಲು ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಬಜೆಟ್ ಕುರಿತು ಚರ್ಚೆಗಳು ಆರಂಭವಾಗಿವೆ. ಸರ್ಕಾರ ನಿಗದಿಪಡಿಸಿದ ಹಣ, ಸರ್ಕಾರ ಘೋಷಿಸಿದ ಕಾರ್ಯಕ್ರಮಗಳು ಮತ್ತು ಯೋಜನೆಗಳು, ಇದುವರೆಗೆ ಮಾಡಿದ ಕೆಲಸಗಳು, ಚಾಲ್ತಿಯಲ್ಲಿರುವ ಯೋಜನೆಗಳ ಪ್ರಗತಿ, ಬಿಬಿಎಂಪಿಯಲ್ಲಿ ಲಭ್ಯವಿರುವ ಹಣ, ಆದಾಯ ಮತ್ತು ವೆಚ್ಚಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಚರ್ಚೆ ವೇಳೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಗಣಿಸಿ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಪೂರ್ವಾನುಮತಿ ಪಡೆಯದೆ ರಸ್ತೆಗೆ ಹಾನಿ ಮಾಡಿದರೆ, ಕ್ರಿಮಿನಲ್‌ ಮೊಕದ್ದಮೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ

ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ ನಂತರ ಈ ಸಂಬಂಧ ಕರಡು ರಚಿಸಲಾಗುತ್ತದೆ. ಬೊಮ್ಮಾಯಿ ಅವರು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವುದರಿಂದ ಅವರೊಂದಿಗೆ ಕೆಲಸ ಮಾಡಲಾಗುತ್ತಿದೆ. ಬಜೆಟ್ ಸಿದ್ಧಪಡಿಸುವ ವೇಳೆ ನಾಗರಿಕರು, ತಜ್ಞರು ಮತ್ತು ಮತ್ತು ಸಂಸ್ಥೆಗಳ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಜನರು ಇಂದಿರಾ ಕ್ಯಾಂಟೀನ್ ಬಳಕೆ ಕಡಿಮೆ ಮಾಡುತ್ತಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿ, ಇದು ಕಳವಳಕಾರಿ ವಿಷಯವಾಗಿದ್ದು, ಪ್ರತಿ ಕ್ಯಾಂಟೀನ್ ಮತ್ತು ವಾರ್ಡ್ ಮಟ್ಟದಲ್ಲಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಮೌಲ್ಯಮಾಪನದ ಬಳಿಕ ಈ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆಹಾರದ ಗುಣಮಟ್ಟ ಮತ್ತು ಗುತ್ತಿಗೆದಾರರ ವಿವರಗಳನ್ನೂ ಕೂಡ ಮೌಲ್ಯಮಾಪನದ ಸಂದರ್ಭದಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. 

ಇದನ್ನೂ ಓದಿ: ಕೋವಿಡ್ ಸೋಂಕು ತಡೆಯಲು ಪರಿಣಾಮಕಾರಿ ಕ್ರಮಗಳ ಕೈಗೊಳ್ಳಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನೆ

ಹದಗೆಟ್ಟ ರಸ್ತೆಗಳಿಗೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲಿಸುವ ನಿರ್ಧಾರದ ಕುರಿತು ಮಾತನಾಡಿ, ರಸ್ತೆಗಳನ್ನು ಅಕ್ರಮವಾಗಿ ಅಗೆದಿದ್ದಲ್ಲಿ ಅಥವಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದರೆ ವಲಯ ಅಧಿಕಾರಿಗಳಿಗೆ ಕಾನೂನು ಮೂಲಕ ಕ್ರಮ ಕೈಗೊಳ್ಳುವ ಅಧಿಕಾರವಿದೆ. ರಸ್ತೆ ಅಗೆಯುವುದಕ್ಕೂ ಮುನ್ನ ಅನುಮತಿ ಪಡೆದವರ ವಿರುದ್ಧ ಎಫ್ಐಆರ್ ದಾಖಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. 



Read more

[wpas_products keywords=”deal of the day”]