Karnataka news paper

ಲತಾ ಮಂಗೇಶ್ಕರ್‌: ‘ಬೆಳ್ಳನೆ ಬೆಳಗಾಯಿತು..’ ಎಂದು ಹಾಡಿದ್ದ ಗಾನ ಕೋಗಿಲೆ


ಬೆಂಗಳೂರು: 1966ರಲ್ಲಿ ತೆರೆ ಕಂಡ  ‘ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ’ ಚಿತ್ರದ ಎರಡು ಹಾಡುಗಳನ್ನು ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಹಾಡಿದ್ದಾರೆ. ಮತ್ತೊಂದು ಹಾಡಿಗೆ ಸಹೋದರಿ ಉಷಾ ಮಂಗೇಶ್ಕರ್‌ ಧ್ವನಿಯಾಗಿದ್ದಾರೆ.

ಬಿ.ಟಿ. ಅಥಣಿ ನಿರ್ದೇಶನದ ಚಿತ್ರದಲ್ಲಿ ವಿ.ಎಸ್‌. ಪಾಟೀಲ್‌, ಕಾಮಿನಿ ಕದಮ್‌, ದಾದಾ ಸಲವಿ, ರಾಜಶೇಖರ್‌ ಮುಂತಾದವರು ಅಭಿನಯಿಸಿದ್ದಾರೆ. 

ಭುಜಂಗ ಮಹಿಷಾವಾಡಿ ಅವರು ಬರೆದ ‘ಬೆಳ್ಳನೆ ಬೆಳಗಾಯಿತು’ ಹಾಡಿಗೆ ಧ್ವನಿಯಾಗಿರುವ ಲತಾ ಮಂಗೇಶ್ಕರ್‌ ಕನ್ನಡದ ಗಾಯಕಿಯಾಗಿ ಮೊದಲ ಬಾರಿಗೆ ಪರಿಚಿತರಾದರು. ಅದೇ ಚಿತ್ರದ ಮತ್ತೊಂದು ಹಾಡು ‘ಎಲ್ಲಾರೆ ಇರತೀರೋ ಎಂದಾರೆ ಬರತೀರೋ’ ಹಾಡನ್ನು ಅವರು ಹಾಡಿದ್ದಾರೆ.

ಲತಾ ಮಂಗೇಶ್ಕರ್‌ ಅವರ ಸಹೋದರಿ ಉಶಾ ಮಂಗೇಶ್ಕರ್‌ ಅವರು ‘ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ’ ಸಿನಿಮಾದ ‘ಯಾರಿವಾ ನನ್‌ ಮನ ಮರುಳಾಗಿಸಿದಾವಾ’ ಎಂಬ ಮತ್ತೊಂದು ಹಾಡಿಗೆ ಧ್ವನಿಯಾಗಿದ್ದಾರೆ.

‘ಬೆಳ್ಳನೆ ಬೆಳಗಾಯಿತು’ ಹಾಡು ಬಹಳ ಜನಪ್ರಿಯವಾಗಿ ಹೊರಹೊಮ್ಮಿತು. ಚಿತ್ರವು ಜನವರಿ 04, 1966ರಲ್ಲಿ ಬಿಡುಗಡೆಯಾಗಿದೆ.

1. ಬೆಳ್ಳನೆ ಬೆಳಗಾಯಿತು, ಲತಾ ಮಂಗೇಶ್ಕರ್‌

2. ಎಲ್ಲಾರೆ ಇರತೀರೋ ಎಂದಾರೆ ಬರತೀರೋ, ಲತಾ ಮಂಗೇಶ್ಕರ್

3. ಯಾರಿವಾ ನನ್‌ ಮನ ಮರುಳಾಗಿಸಿದಾವಾ, ಉಷಾ ಮಂಗೇಶ್ಕರ್‌



Read More…Source link

[wpas_products keywords=”deal of the day party wear for men wedding shirt”]