Karnataka news paper

ಕುಡಿದು ಪೆಟ್ರೋಲ್ ಬಂಕ್‌ ಕೆಳಗೆ ಬಿದ್ದಿದ್ದ ಹಾಸನದ ಕೆಇಬಿ ನೌಕರನಿಂದ 11 ಲಕ್ಷ ಎಗರಿಸಿದ ಖದೀಮರು!


ಹಾಸನ : ಮದ್ಯದ ನಶೆಯಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಬಿದ್ದಿದ್ದ ಕೆಇಬಿ ನೌಕರನ ಬಳಿಯಿದ್ದ 11 ಲಕ್ಷ ರೂ.ಗಳನ್ನು ಎಗರಿಸಿದ್ದ ಕಳ್ಳರನ್ನು ಸೆರೆಹಿಡಿಯುವಲ್ಲಿ ಬಡಾವಣೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರಸನ್ನ ಹಾಗೂ ಜೋಡಿ ಕೃಷ್ಣಾಪುರ ಗ್ರಾಮದ ಮಂಜುನಾಥ್‌ ಬಂಧಿತ ಆರೋಪಿಗಳು.

ಜೋಡಿ ಕೃಷ್ಣಾಪುರ ಗ್ರಾಮದ ಕೆಇಬಿ ನೌಕರ ಸಂತೋಷ್‌ ಜ.27ರಂದು ನಗರದ ರಿಂಗ್‌ ರಸ್ತೆಯಲ್ಲಿರುವ ಬ್ಯಾಂಕ್‌ವೊಂದ ರಿಂದ ಹೋಂ ಲೋನ್‌ 11 ಲಕ್ಷ ರೂ.ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದರು. ಈ ನಡುವೆ ದೊಡ್ಡ ಮೊತ್ತದ ಹಣವನ್ನು ಜತೆಯಲ್ಲಿಟ್ಟು ಕೊಂಡೇ ಮಾರ್ಗಮಧ್ಯೆ 3 ಬಾರ್‌ಗೆ ತೆರಳಿ ಮಧ್ಯಸೇವನೆ ಮಾಡಿದ್ದರು ಎನ್ನಲಾಗಿದೆ.

ಅದೇ ವೇಳೆ ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ಒಂದೇ ಊರಿನ ಪ್ರಸನ್ನ, ಸಂತೋಷ್‌ ಬಳಿ ಹಣ ಇರುವುದನ್ನು ಗಮನಿಸಿದ್ದ. ಕೂಡಲೇ ತನ್ನ ಸ್ನೇಹಿತ ಮಂಜುನಾಥ್‌ಗೆ ಕರೆ ಮಾಡಿ ಕರೆಸಿ ಕೊಂಡಿದ್ದ. ಬಳಿಕ ಇಬ್ಬರೂ ಬಾರ್‌ನಿಂದ ಹೊರಟ ಸಂತೋಷ್‌ನನ್ನು ಹಿಂಬಾಲಿಸಿ ದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆಗಾಗಲೇ ಮತ್ತೇರಿ ತೂರಾಡು ತ್ತಿದ್ದ ಸಂತೋಷ್‌ ಬೈಕ್‌ಗೆ ಪೆಟ್ರೋಲ್‌ ಹಾಕಿಸಲು ನಗರದ ಆರ್‌ಟಿಒ ಬಳಿ ಇರುವ ಪೆಟ್ರೋಲ್‌ ಬಂಕ್‌ಗೆ ತೆರಳಿದ್ದು, ಆಗಲೂ ಹಣದ ಕವರ್‌ ಆತನ ಜತೆಯಲ್ಲೇ ಇತ್ತು ಎನ್ನಲಾಗಿದೆ.

ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಹಲ್ಲೆಗೆರೆ ಶಂಕರ್‌ ಮನೆಯಲ್ಲಿ ಭೂತದ ಕಾಟ? ಅಸಲಿಯತ್ತು ಏನು?

ಒಂದು ಸಾವಿರದ ಪೆಟ್ರೋಲ್‌ ಹಾಕಿಸಿದ ಸಂತೋಷ್‌, ಆ ಹಣವನ್ನು ಗೂಗಲ್‌ ಪೇ ಮಾಡಿದ. ಅಲ್ಲಿಂದ ಮುಂದೆ ಹೋಗಲು ಸಾಧ್ಯವಾಗದೆ ಅಲ್ಲೇ ಮಲಗಿ ನಿದ್ರೆಗೆ ಜಾರಿದ. ಈ ವೇಳೆ ಎಚ್ಚೆತ್ತ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಂತೋಷ್‌ ಬಳಿ ಹಣ ಇರುವುದನ್ನು ಗಮನಿಸಿ ಕೂಡಲೇ ಮಾಲೀಕರಿಗೆ ಕರೆ ಮಾಡಿ ತಿಳಿಸಿದ. ಹಣ ಇದ್ದ ಕವರನ್ನು ಜೋಪಾನವಾಗಿ ಎತ್ತಿಡು, ಮಲಗಿರುವವರ ಬಳಿ ಮೊಬೈಲ್‌ ಇದ್ದರೆ ಅವರ ಮನೆಯವರಿಗೆ ತಿಳಿಸು ಎಂದಿದ್ದಾರೆ.

ಆದರೆ ಸಂತೋಷ್‌ ಬಳಿಯಿದ್ದ ಮೊಬೈಲ್‌ ಲಾಕ್‌ ಗೊತ್ತಾಗದ ಕಾರಣ ಬಂಕ್‌ ಕಚೇರಿಯಲ್ಲಿ ಚಾಜ್‌ರ್‍ಗೆ ಹಾಕಿದ್ದ ತನ್ನ ಮೊಬೈಲ್‌ ತರಲು ಹುಡುಗ ಒಳ ಹೋಗಿದ್ದಾನೆ. ಇದೆಲ್ಲವನ್ನೂ ಸುಮಾರು 45 ನಿಮಿಷ ಕಾಯುತ್ತಾ ನಿಂತಿದ್ದ ಇಬ್ಬರು ಖದೀಮರು ಕೂಡಲೇ ಹಣ ಎಗರಿಸಿ ಪರಾರಿಯಾಗಿದ್ದರು.

ಇದನ್ನು ಗಮನಿಸಿದ ಬಂಕ್‌ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ನಂತರ ಸ್ಥಳಕ್ಕಾಗಮಿಸಿದ ಬಡಾವಣೆ ಇನ್ಸ್‌ಪೆಕ್ಟರ್‌ ಕೃಷ್ಣರಾಜು ಮತ್ತವರ ತಂಡ ಬಂಕ್‌ ಸಿಬ್ಬಂದಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರು.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿಯಶಸ್ಚಿಯಾಗಿದ್ದಾರೆ. ಆರೋಪಿಗಳಿಂದ 9.12 ಲಕ್ಷ ರೂ. 2 ಮೊಬೈಲ್‌ ಹಾಗೂ 1 ಪಲ್ಸರ್‌ ಬೈಕ್‌ ವಶ ಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಕೃಷ್ಣರಾಜು ತಿಳಿಸಿದರು.



Read more

[wpas_products keywords=”deal of the day sale today offer all”]