Karnataka news paper

ಮಲಯಾಳಂ ಚಿತ್ರರಂಗಕ್ಕೆ ತೆರಳಿದ ನಟಿ ರಾಗಿಣಿ ದ್ವಿವೇದಿ


ಬೆಂಗಳೂರು: ದಕ್ಷಿಣ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ತುಪ್ಪದ ಹುಡುಗಿ ಖ್ಯಾತಿಯ ನಟಿ ರಾಗಿಣಿ ದ್ವಿವೇದಿ ಮತ್ತೊಮ್ಮೆ ಮಲಯಾಳಂ ಚಿತ್ರರಂಗಕ್ಕೆ ತೆರಳಿದ್ದಾರೆ.

ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ತೆರೆಕಾಣಲಿರುವ ಹೊಸ ಚಿತ್ರವೊಂದರಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ.

ಹೊಸ ಚಿತ್ರಕ್ಕೆ ಮಲಯಾಳಂನಲ್ಲಿ ‘ಶೈಲಾ‘ ಎಂಬ ಹೆಸರನ್ನು ತಾತ್ಕಾಲಿಕವಾಗಿ ನೀಡಲಾಗಿದ್ದು, ಕನ್ನಡದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ.

ಕೇರಳದಲ್ಲಿನ 200 ವರ್ಷ ಹಳೆಯ ಟೀ ಎಸ್ಟೇಟ್ ಒಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಸಿನಿಮಾ ಹೊಂದಿದೆ.

ಬಾಲು ನಾರಾಯಣ್ ನಿರ್ದೇಶನದ ಚಿತ್ರಕ್ಕೆ ದೃಶ್ಯಂ ಖ್ಯಾತಿಯ ಅನಿಲ್ ಜಾನ್ಸನ್ ಸಂಗೀತವಿದೆ.

ಬೋಲ್ಡ್ ಆಗಿರುವ ವಿಧವೆಯ ಪಾತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.





Read More…Source link