ತನ್ನ ಸೀಮೆಗಳನ್ನು ವಿಸ್ತರಿಸುವಲ್ಲಿ ಅಮೆರಿಕಕ್ಕೆ ಆಸಕ್ತಿ ಇಲ್ಲದಿರಬಹುದು. ಆದರೆ. ಅನ್ಯ ದೇಶಗಳ ಆಂತರಿಕ ವ್ಯವಹಾರಗಳು ಮತ್ತು ವಿವಾದಗಳಲ್ಲಿ ಮೂಗು ತೂರಿಸಲು ಅದು ಸದಾ ಸಿದ್ಧವಾಗಿರುತ್ತದೆ. ಈ ಮೂಲಕ ಜಾಗತಿಕ ಶಕ್ತಿಯಾಗಿ ತನ್ನನ್ನು ತಾನು ಪ್ರತಿಷ್ಠಾಪಿಸಲು ಪರೋಕ್ಷವಾಗಿ ಸದಾ ಪ್ರಯತ್ನಿಸುತ್ತಲೇ ಇದೆ.
ಭಾರತವು ಅರುಣಾಚಲ ಪ್ರದೇಶದಲ್ಲಿ ಚೀನಾದ ಪ್ರಗತಿಯನ್ನು ತಡೆಯಬಲ್ಲದೇ ಮತ್ತು ಶೀಘ್ರದಲ್ಲೇ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿ ಸೇರಿಸಬಹುದೇ? ಚೀನಾದಂತಹ ಶಕ್ತಿಶಾಲಿ ರಾಷ್ಟ್ರವನ್ನು ನಿಭಾಯಿಸುವುದು ಭಾರತಕ್ಕೆ ನಿಜಕ್ಕೂ ದೊಡ್ಡ ಸವಾಲಿನ ಕೆಲಸವಾಗಿದೆ. ಆದರೆ, ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡುವ ವಿಚಾರದಲ್ಲಿ ಭಾರತವೆಂದೂ ಹಿಂದೆ ಬಿದ್ದಿಲ್ಲ. ತನ್ನ ಸೇನೆಯನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ಅಗತ್ಯ ಪ್ರಮಾಣದಲ್ಲಿ ಸಶಕ್ತಗೊಳಿಸುವ ಸ್ಥಿತಿಯಲ್ಲಿ ಭಾರತವಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಜಾಣತನದಿಂದ ಕಾರ್ಯ ನಿರ್ವಹಿಸಿದರೆ, ಜಾಗರೂಕತೆಯಿಂದ ಉಳಿದಿದ್ದರೆ ಮತ್ತು ರಕ್ಷಣಾ ಪಡೆಗಳ ಶ್ರೇಣಿ ಮತ್ತು ಫೈಲ್ ಅವರು ಹೊಂದಿರುವ ಹುದ್ದೆಗೆ ಸಮರ್ಪಿತವಾಗಿದ್ದರೆ ಸೇನೆಯು ಯಾವುದೇ ಎದುರಾಳಿಯನ್ನು ಹಿಮ್ಮೆಟ್ಟಿಸಬಲ್ಲದು. ಆಪರೇಷನ್ ಮೇಘದೂತ್ ಮೂಲಕ ಭಾರತವು ವಶಪಡಿಸಿಕೊಂಡಿರುವ ಸಿಯಾಚಿನ್ ಗ್ಲೇಸಿಯರ್ (ಹಿಮಪ್ರವಾಹ)ಗಳು, ಹಿಮಾಲಯದ ಪೂರ್ವ ಕಾರಕೋರಂ ಶ್ರೇಣಿಯಲ್ಲಿರುವ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಭಾಗವಾಗಿರುವ ಸಿಯಾಚಿನ್‌ನ ಮೇಲೆ ದುರಾಕ್ರಮಣ ಮಾಡುವ ಪಾಕಿಸ್ತಾನದ ಮೇಲೆ ಹದ್ದಿನ ಕಣ್ಣನ್ನಿಟ್ಟು, ಶಂಕಾಸ್ಪದ ಮಾರ್ಗಗಳನ್ನು ಮುಚ್ಚಿ, ಗಂಟುಮೂಟೆ ಕಟ್ಟುವಂತೆ ಮಾಡಬಲ್ಲದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಭಾರತಕ್ಕೆ ದುಬಾರಿಯಾದ NJ9842
ಆಪರೇಷನ್ ಮೇಘದೂತ್‌ನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಶ್ರಮಿಸಿದ ಯೋಧರು ಭಾರತೀಯ ರಕ್ಷಣಾ ಸಿಬ್ಬಂದಿಗೆ ಸದಾ ಸ್ಫೂರ್ತಿಯಾಗಬೇಕು. ಆದರೆ ಬೆರಳೆಣಿಕೆಯಷ್ಟು ಸಂಖ್ಯೆಯ ಕೆಚ್ಚೆದೆಯ ಅಧಿಕಾರಿಗಳು ಇಲ್ಲದಿರುತ್ತಿದ್ದರೆ ಪಾಕಿಸ್ತಾನವು ಸಿಯಾಚಿನ್ ಅನ್ನು ತನ್ನ ಕೈವಶ ಮಾಡಿಕೊಳ್ಳಲು ಭಾರತವೇ ಅವಕಾಶ ನೀಡಿದಂತಾಗುತ್ತಿತ್ತು. ಭಾರತದ ವಿಭಜನೆ ಮತ್ತು ಕಾಶ್ಮೀರಕ್ಕಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಯುದ್ಧವು ಸಿಯಾಚಿನ್ ಸಂಘರ್ಷದ ಮೂಲವಾಗಿದೆ. 1949ರಲ್ಲಿ, ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರದಲ್ಲಿ ವಿಶ್ವ ಸಂಸ್ಥೆಯು ಎಳೆದಿರುವ ಕದನ ವಿರಾಮದ ರೇಖೆಯನ್ನು ಅಂಗೀಕರಿಸಿವೆ. ಕದನ ವಿರಾಮದ ರೇಖೆಯ ಅತ್ಯಂತ ಪೂರ್ವ ಭಾಗವನ್ನು NJ9842 ಎಂಬ ಬಿಂದುವನ್ನು ಮೀರಿ ಗುರುತಿಸಲಾಗಿಲ್ಲ, ಮುಖ್ಯವಾಗಿ ಇದು ನಿರಾಶ್ರಯ ಪ್ರದೇಶವಾಗಿದ್ದು, ತಾಪಮಾನವು 6 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿರುತ್ತದೆ. ಆದರೆ ಪಾಕಿಸ್ತಾನದ ಕಾರಣಕ್ಕಾಗಿ NJ9842 ಮೀರಿದ ಗೆರೆಯನ್ನು ಎಳೆಯದಿರುವುದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿದೆ.
ಸಿಯಾಚಿನ್ ಗ್ಲೇಸಿಯರ್ ಭಾರತ ಮತ್ತು ಪಾಕಿಸ್ತಾನದ ನಡುವಿರುವ ಆಯಕಟ್ಟಿನ ಸ್ಥಳವಾಗಿದೆ. NJ9842 ಬಿಂದುವಿನಿಂದ, ರೇಖೆಯು “ಹೀಗೆ ಉತ್ತರಕ್ಕೆ ಹಿಮನದಿಗಳಿಗೆ: ಸಿಯಾಚಿನ್ ಗ್ಲೇಸಿಯರ್, ರಿಮೋ ಮತ್ತು ಬಾಲ್ಟೋರೊ”ಗೆ ಹೋಗುತ್ತದೆ. ಈ ಬಿಂದುವನ್ನು NJ 980420 ಎಂದೂ ಕರೆಯಲಾಗುತ್ತದೆ. ಇದು ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ಕದನ ವಿರಾಮದ ರೇಖೆಯ ಉತ್ತರದ ಗಡಿರೇಖೆಯ ಬಿಂದುವಾಗಿದೆ. ಇದನ್ನು ಲೈನ್ ಆಫ್ ಕಂಟ್ರೋಲ್ (LoC) ಎಂದು ಉಲ್ಲೇಖಿಸಲಾಗುತ್ತದೆ. 1971ರ ಯುದ್ಧದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಜಯ ಗಳಿಸಿದರೂ, NJ9842ಕ್ಕಿಂತ ಆಚೆಗಿನ ರೇಖೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಪ್ರದೇಶವು ನಿರ್ಜನವಾಗಿತ್ತು ಮತ್ತು ಈ ಕಾರಣಕ್ಕಾಗಿ ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ವ್ಯಾಪ್ತಿಯನ್ನು ಮೀರಿದ್ದೆಂದು ಭಾವಿಸಲಾಗಿದೆ.
ಕರ್ನಲ್ ನರೇಂದ್ರ ಬುಲ್ ಕುಮಾರ್
ಆದರೆ ಪಾಕಿಸ್ತಾನವು 1964ರಿಂದ 1972ರವರೆಗೂ ದುಷ್ಕೃತ್ಯಗಳಲ್ಲಿ ತೊಡಗಿತ್ತು. ಕದನ ವಿರಾಮ ರೇಖೆಯು NJ9842ರಿಂದ ಕಾರಕೋರಂ ಪಾಸ್‌ನ ಪಶ್ಚಿಮಕ್ಕೆ ವಿಸ್ತರಿಸಿದೆ ಎಂದು ತೋರಿಸುವುದರ ಮೂಲಕ ಇದು ಪ್ರಾರಂಭವಾಯಿತು. ಕದನ ವಿರಾಮ ರೇಖೆಯ ಒಪ್ಪಂದಕ್ಕೆ ಅದು ನಿಷ್ಠವಾಗಿಲ್ಲ ಮತ್ತು ಉತ್ತರದ ಕಡೆಗೆ ರೇಖೆಯನ್ನು ನಿರ್ವಹಿಸುತ್ತಿದೆ. ಅಮೆರಿಕದ ರಕ್ಷಣಾ ಮ್ಯಾಪಿಂಗ್ ವಿಭಾಗವು ಚಿತ್ರಿಸಿದ ಜಾಗತಿಕ ಪರ್ವತಾರೋಹಣ ನಕ್ಷೆಗಳಲ್ಲಿ ಇದು ಪ್ರತಿಫಲಿಸುತ್ತದೆ.
ಸೂಕ್ಷ್ಮವಾದ ಆದರೆ ನಿರ್ಣಾಯಕ ಬದಲಾವಣೆಗಳನ್ನು ಭಾರತ ಸರ್ಕಾರವು ಗಮನಿಸಲಿಲ್ಲ. ಆದರೆ ಸೇನಾಧಿಕಾರಿ ಕರ್ನಲ್ ನರೇಂದ್ರ ಬುಲ್ ಕುಮಾರ್ ಅವರು ಗಮನಿಸಿದರು. ಅವರು ಅನುಭವಿ ಪರ್ವತಾರೋಹಿಯಾಗಿದ್ದು, ಒಮ್ಮೆ ಸಿಂಧೂ ನದಿಯಲ್ಲಿ ಜರ್ಮನ್ ರಾಫ್ಟಿಂಗ್ ದಂಡಯಾತ್ರೆಗೆ ಮಾರ್ಗದರ್ಶನ ನೀಡಿದ್ದರು. ಇದು 1975ರಲ್ಲಿ ಆಗಿತ್ತು. 1977ರ ಹೊತ್ತಿಗೆ, ಅವರು ಗುಲ್ಮಾರ್ಗ್‌ನ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನ ಕಮಾಂಡೆಂಟ್ ಆಗಿದ್ದರು. ಕುಮಾರ್ ಅವರು ಎಲ್‌ಒಸಿ (LoC) ಪ್ರದೇಶದ ಭೂಗೋಳ ಮತ್ತು ನಕ್ಷಾಶಾಸ್ತ್ರದ (ಕಾರ್ಟೋಗ್ರಫಿ) ಬಗ್ಗೆ ಚೆನ್ನಾಗಿ ತಿಳಿದಿದ್ದರು. 1977ರಲ್ಲಿ ರಾಫ್ಟಿಂಗ್ ಯಾತ್ರೆಯನ್ನು ಕೈಗೊಳ್ಳಲು ಅವರು ಜರ್ಮನ್ ತಂಡದೊಂದಿಗೆ ಇದ್ದಾಗ, ಆ ತಂಡವು ಅಮೆರಿಕದ ಮ್ಯಾಪ್ ಏಜೆನ್ಸಿಯಿಂದ ಚಿತ್ರಿಸಲಾಗಿದ್ದ NJ 9842 ಪಾಯಿಂಟ್‌ನ ಹೊಸ ನಕ್ಷೆಗಳನ್ನು ಹೊಂದಿತ್ತು.
ಅಮೆರಿಕದ ವಿಕೃತ ನಕ್ಷೆ
ಜರ್ಮನ್ ತಂಡವು ಬಳಸಿದ, ಅಮೆರಿಕವು ರಚಿಸಿದ್ದ ನಕ್ಷೆಯು ಸೂಕ್ತವಲ್ಲ ಎಂದು ಕುಮಾರ್ ಗ್ರಹಿಸಿದ್ದರು. ಏಕೆಂದರೆ, ಈ ಮಾರ್ಗವು NJ9843 ರಿಂದ ಉತ್ತರದ ಕಡೆಗೆ ಸಾಲ್ಟೊರೊ ರಿಡ್ಜ್ ಮೂಲಕ ಸಾಗಬೇಕು ಎಂಬುದು ಅವರಿಗೆ ಚೆನ್ನಾಗಿ ನೆನಪಿನಲ್ಲಿತ್ತು. ಆದರೆ ಹೊಸ ನಕ್ಷೆಯು ಕಣಿವೆಗಳು ಮತ್ತು ಸಿಯಾಚಿನ್ ಗ್ಲೇಸಿಯರ್ ಮೂಲಕ ಕಾರಕೋರಂ ಪಾಸ್‌ಗೆ ಹಾದುಹೋಗುವ ರೇಖೆಯನ್ನು ತೋರಿಸಿತ್ತು. ಈ ಅಸಂಗತತೆಯನ್ನು ಅವರು ಯಾರೊಂದಿಗೂ ಚರ್ಚಿಸಲಿಲ್ಲ. ಆದರೆ ಜರ್ಮನ್ ತಂಡದಿಂದ ನಕ್ಷೆಯನ್ನು ಪಡೆದುಕೊಂಡರು.
ಅವರು ದೆಹಲಿಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಟಿಎನ್ ರೈನಾ ಅವರನ್ನು ಭೇಟಿ ಮಾಡಿದರು ಮತ್ತು ವ್ಯತ್ಯಾಸಗಳ ಬಗ್ಗೆ ಚರ್ಚಿಸಲು ಆ ನಕ್ಷೆಯನ್ನು ತೋರಿಸಿದರು. ಅನಂತರ ಅವರು ಮೇಜರ್ ಜನರಲ್ ಎಂ.ಎಲ್. ಚಿಬ್ಬರ್ ಅವರಿಂದ ಮಾರ್ಗದರ್ಶನ ಪಡೆದರು. ಸೇನಾ ಕಾರ್ಯಾಚರಣೆಗಳ ನಿರ್ದೇಶನಾಲಯದ ಅಧಿಕಾರಿಗಳು ಹಳೆಯ ನಕ್ಷೆಗಳೊಂದಿಗೆ ಹೊಸ ನಕ್ಷೆಯನ್ನು ತಾಳೆ ಹಾಕಿದರು. ವ್ಯತ್ಯಾಸಗಳು ಸ್ಪಷ್ಟವಾಗಿದ್ದವು. ಕುಮಾರ್ ಅವರ ಒತ್ತಾಯದ ಮೇರೆಗೆ ಸೇನಾ ಮುಖ್ಯಸ್ಥರು NJ9842 ಆಚೆಗಿನ ಸಿಯಾಚಿನ್ ಗ್ಲೇಸಿಯರ್ ಯಾತ್ರೆಗೆ ಅನುಮತಿ ನೀಡಿದರು. ಅದೇ ಮೊದಲ ಬಾರಿಗೆ ಭಾರತೀಯರೊಬ್ಬರು ಆ ಸ್ಥಳವನ್ನು ಅನ್ವೇಷಿಸಿದ್ದರು. ಅವರು ವಿಡಿಯೋ ಮತ್ತು ಸ್ಟಿಲ್ ಕ್ಯಾಮೆರಾಗಳೆರಡನ್ನೂ ಹೊಂದಿದ್ದರು. ಅವರು ಲಡಾಖ್ ಸ್ಕೌಟ್ಸ್‌ನ ಅಧಿಕಾರಿಗಳು ಮತ್ತು ನಾಗರಿಕರ ಸಣ್ಣ ಗುಂಪಿನೊಂದಿಗೆ ಮತ್ತು ಅವರು ಮುಖ್ಯಸ್ಥರಾಗಿದ್ದ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನ ಸ್ವಯಂಸೇವಕರೊಂದಿಗೆ ತೆರಳಿದರು. ತಂಡವು ಈ ಪ್ರದೇಶದಲ್ಲಿ ಸುಮಾರು 45 ದಿನಗಳನ್ನು ಕಳೆಯಿತು. ಈ ಸಮಯದಲ್ಲಿ ಅವರು ಸಾಲ್ಟೊರೊ ರಿಡ್ಜ್‌ನಲ್ಲಿರುವ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಜಪಾನಿನ ಬಿಸ್ಕತ್ತು ಪ್ಯಾಕೇಜ್‌ಗಳು, ನೀರಿನ ಬಾಟಲಿಗಳು ಮತ್ತು ಪಾಕಿಸ್ತಾನಿ ಧ್ವಜಗಳನ್ನು ಪತ್ತೆ ಮಾಡಿದರು.
ಆ ಪ್ರದೇಶಗಳಿಗೆ ಪಾಕಿಸ್ತಾನ ಪ್ರವಾಸಿಗರನ್ನು ಕಳುಹಿಸುತ್ತಿರುವುದು ಸ್ಪಷ್ಟವಾಗಿತ್ತು. ಪಾಕಿಸ್ತಾನವು ಪಿಒಕೆ (PoK)ಯಿಂದ ಸ್ಕರ್ಡು ಮೂಲಕ ಮತ್ತು ಬಿಲಾಫೊಂಡ್ ಲಾ ಪಾಸ್ ಮೂಲಕ ಜನರನ್ನು ಕಳುಹಿಸುತ್ತಿರಬೇಕು ಎಂದು ಭಾವಿಸಲಾಗಿತ್ತು. ಪಾಕಿಸ್ತಾನವು ಈ ಪ್ರದೇಶಗಳ ಮೇಲೆ ಕಣ್ಣಿಟ್ಟಿದೆ ಮತ್ತು ಅವುಗಳನ್ನು ಅನ್ವೇಷಿಸುತ್ತಿದೆ ಎಂಬುದು ಸ್ಪಷ್ಟವಾಯಿತು. ಅದೇ ಪ್ರದೇಶಗಳಿಗೆ ಇನ್ನೂ ಎರಡು ಯಾತ್ರೆಗಳನ್ನು ನಡೆಸಲಾಯಿತು. ಒಂದು 1978ರಲ್ಲಿ ಮತ್ತು ಇನ್ನೊಂದು 1981ರಲ್ಲಿ. ಕರ್ನಲ್ ಕುಮಾರ್ ಎಲ್ಲ ಯಾತ್ರೆಗಳ ನೇತೃತ್ವ ವಹಿಸಿದ್ದರು. ಅವರ ತಂಡವು ಈ ಪ್ರದೇಶಗಳನ್ನು ನಕ್ಷೆ ಮಾಡಿದೆ.
ಆಪರೇಷನ್ ಮೇಘದೂತ್!
ಮಿಲಿಟರಿ ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ ಸೇರಿ ವಿವಿಧ ಮೂಲಗಳಿಂದ 1982ರಲ್ಲಿ ಲಭ್ಯವಾದ ಗುಪ್ತಚರ ವರದಿಗಳು, ಪಾಕಿಸ್ತಾನಿಗಳು ಯುರೋಪಿಯನ್ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಸ್ನೋಸೂಟ್‌ಗಳನ್ನು ಖರೀದಿಸುತ್ತಿದ್ದಾರೆಂದು ಸೂಚಿಸಿದವು. ಹಿಮನದಿಯನ್ನು ಆಕ್ರಮಿಸಿಕೊಳ್ಳುವ ಉತ್ಸುಕತೆಯ ಎಲ್ಲ ಲಕ್ಷಣಗಳನ್ನು ಪಾಕಿಸ್ತಾನವು ತೋರಿಸಿದೆ. ಈ ಗುಪ್ತಚರ-ಮಾಹಿತಿ ಸಂಗ್ರಹವು ಭಾರತೀಯ ಸೇನೆಯನ್ನು ಕಟ್ಟೆಚ್ಚರದಲ್ಲಿರುವಂತೆ ಮಾಡಿತು. ಇದು ಡಿಸೆಂಬರ್ 1982ರಲ್ಲಿ ಸಾರ್ಟೊರೊ ರಿಡ್ಜ್ ಪ್ರದೇಶಗಳಿಗೆ ದಂಡೆತ್ತಿ ಹೋಗಿ ಆಕ್ರಮಿಸುವ ಯೋಜನೆಯನ್ನು ಪ್ರಾರಂಭಿಸಿತು. ಆಗಿನ ಪ್ರಧಾನಿ ಇಂದಿರಾಗಾಂಧಿ ಇದಕ್ಕೆ ಒಪ್ಪಿಗೆಯನ್ನೂ ನೀಡಿದ್ದರು. ಬ್ರಿಗೇಡಿಯರ್ ಚನ್ನ ಅವರು ಏಪ್ರಿಲ್ 13, 1984ರಂದು ಪಾಕಿಸ್ತಾನಕ್ಕೆ ಆಘಾತವನ್ನು ನೀಡಲು ನಿರ್ಧರಿಸಿದರು. ಈ ಕಾರ್ಯಾಚರಣೆಗೆ ‘ಮೇಘದೂತ್’ ಎಂದು ಹೆಸರಿಡಲಾಯಿತು. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ ವೈಶಾಖಿ (ಬೈಸಾಖಿ) ಇದ್ದ ಕಾರಣ ಅವರು ಆ ದಿನವನ್ನು ಆರಿಸಿಕೊಂಡರು. ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಜನರು ಯುದ್ಧದಲ್ಲಿ ತೊಡಗುವ ಬದಲು ವಿಶ್ರಾಂತಿ ಪಡೆಯುತ್ತಾರೆ.
ಏಪ್ರಿಲ್ 13ರಂದು ಬೆಳಗ್ಗೆ 5.30ರ ಸುಮಾರಿಗೆ ಕ್ಯಾಪ್ಟನ್ ಸಂಜಯ್ ಕುಲಕರ್ಣಿ ಮತ್ತು ಒಬ್ಬ ಸೈನಿಕ ಹಿಮನದಿ (ಗ್ಲೇಸಿಯರ್)ಗೆ ತೆರಳಿದರು. ಅನಂತರ, ಸಿಯಾಚಿನ್ ಗ್ಲೇಸಿಯರ್‌ಗೆ ಪಾಕಿಸ್ತಾನಿಗಳು ಪ್ರವೇಶಿಸುವುದನ್ನು ತಡೆಯಲು ಸುಮಾರು 30 ಸೈನಿಕರನ್ನು ಹೆಲಿಕಾಪ್ಟರ್ ಮೂಲಕ ಕಳುಹಿಸಿ ಬಿಲಾಫಂಡ್ ಲಾದಲ್ಲಿ ಇಳಿಸಲಾಯಿತು. ಪಾಕಿಸ್ತಾನಿಗಳಿಗೆ ಈ ಬೆಳವಣಿಗೆಯ ಅರಿವೇ ಇರಲಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ತಂಡವು ಮೂರು ದಿನಗಳ ಕಾಲ ಸೇನಾ ಪ್ರಧಾನ ಕಚೇರಿಯಿಂದ ಸಂಪರ್ಕವನ್ನೇ ಕಳೆದುಕೊಂಡಿತ್ತು. ಇನ್ನಷ್ಟು ಸೈನಿಕರೊಂದಿಗೆ ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ಏಪ್ರಿಲ್ 17ರಂದು ಸಿಯಾ ಲಾ ಕಡೆಗೆ ಹಾರಿಸಲಾಯಿತು. ಅದೇ ದಿನ, ಗ್ಲೇಸಿಯರ್‌ನ ಅನುಕೂಲಕರ ಸ್ಥಾನಗಳನ್ನು ಭಾರತೀಯ ಸೈನಿಕರು ಆಕ್ರಮಿಸಿಕೊಂಡಿರುವುದನ್ನು ಕಂಡು ಪಾಕಿಸ್ತಾನವು ಎಚ್ಚೆತ್ತುಕೊಂಡಿತು. ಆಪರೇಷನ್ ಮೇಘದೂತ್ ಆರಂಭವಾಯಿತು. ಚಿಬ್ಬರ್ ಅವರ ಪ್ರಕಾರ, ಎರಡು ಮುಖ್ಯ ಪಾಸ್‌ಗಳನ್ನು ಮುಚ್ಚಲಾಯಿತು. ಹೀಗೆ ಭೂಪಟದಲ್ಲಿ ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ತೋರಿಸಲಾಗಿದ್ದ ಸುಮಾರು 3,300 ಚದರ ಕಿ.ಮೀ ಪ್ರದೇಶವನ್ನು ಭಾರತ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಇತಿಹಾಸವನ್ನೇ ನಿರ್ಮಿಸಿದೆ. ಪಾಕಿಸ್ತಾನವು ಹಿಮನದಿಗಳನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯುವುದು ಇದರ ಉದ್ದೇಶವಾಗಿತ್ತು. ಇಲ್ಲಿಯವರೆಗೂ, ಸಿಯಾಚಿನ್ ಹಿಮನದಿಯ ಮೇಲೆ ಭಾರತವು ನಿಯಂತ್ರಣವನ್ನು ಹೊಂದಿದೆ.
ಭಾರತವು ಇಷ್ಟೆಲ್ಲವನ್ನು ಸಾಧಿಸಿದಾಗ ಪಾಕಿಸ್ತಾನವು ಮೂಕಪ್ರೇಕ್ಷಕವಾಗಿತ್ತು ಎಂದು ಅರ್ಥವಲ್ಲ. 1982ರಲ್ಲಿಯೇ ಲಿಖಿತ ರೂಪದಲ್ಲಿ ಅದು ತನ್ನ ಪ್ರತಿಭಟನೆಯನ್ನು ದಾಖಲಿಸಿತು. ಆದರೆ ಭಾರತೀಯ ಸೇನೆಯ ದಿಟ್ಟ, ಬುದ್ಧಿವಂತ ಮತ್ತು ಸಮಯೋಚಿತ ನಡೆಗಳು ಪಾಕಿಸ್ತಾನವು ಮೌನ ವಹಿಸುವಂತೆ ಮಾಡಿದವು.
ಮೇಘದೂತ್ ಪ್ರೇರಣೆಯಾಗಲಿ
2020ರಲ್ಲಿ ಇಹಲೋಕ ತ್ಯಜಿಸಿದ ಕರ್ನಲ್ ಕುಮಾರ್ ಅವರ ತೀಕ್ಷ್ಣವಾದ ಅವಲೋಕನಗಳು ಮತ್ತು ಸಮರ್ಪಣೆಗಳು ಮತ್ತು ಬ್ರಿಗೇಡಿಯರ್ ಚನ್ನಾ ಅವರಂತಹ ಹಿರಿಯರು ನೀಡಿದ ಪ್ರೋತ್ಸಾಹದಿಂದ ಭಾರತವು ಸಿಯಾಚಿನ್ ಹಿಮಪ್ರವಾಹ ಮತ್ತು ಅದರ ಉಪನದಿಗಳ 70 ಕಿ.ಮೀ. ವ್ಯಾಪ್ತಿ, ಜೊತೆಗೆ ಸಾಲ್ಟೊರೊದ ಪಾಸ್‌ಗಳು ಮತ್ತು ಎತ್ತರಗಳು ರಿಡ್ಜ್ ಪ್ರದೇಶಗಳ ಸಂಪೂರ್ಣ ನಿಯಂತ್ರಣವನ್ನು ಭಾರತಕ್ಕೆ ನೀಡಬಹುದು. ಈ ಕಾರ್ಯಾಚರಣೆಗಳಿಗಾಗಿ, ಯಾವುದೇ ಉನ್ನತ-ಮಟ್ಟದ ಗ್ಯಾಜೆಟ್‌ಗಳು ಅಥವಾ ಶಸ್ತ್ರಾಸ್ತ್ರಗಳನ್ನು ಬಳಸಲಾಗಿಲ್ಲ. ದಿಟ್ಟ ಮತ್ತು ಸಮಯೋಚಿತ ನಿರ್ಧಾರಗಳು ಮಾತ್ರ ಮುಖ್ಯವಾದವು. ನಿರಂತರವಾಗಿ ಆತಂಕ ಸೃಷ್ಟಿಸುತ್ತಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಹೋರಾಡಲು ರಕ್ಷಣಾ ಪಡೆಗಳಿಗೆ ಆಪರೇಷನ್ ಮೇಘದೂತ್ ನಿದರ್ಶನವಾಗಲಿ.
(ಲೇಖಕರು ಕೈಗಾರಿಕೋದ್ಯಮಿ ಮತ್ತು ರಕ್ಷಣಾ ವಿಷಯಗಳ ತಜ್ಞ)
Read more
[wpas_products keywords=”deal of the day sale today offer all”]